ಜೂನ್ ನಲ್ಲಿ ಸಚಿವ ಸ್ಥಾನ ಸಿಗುತ್ತೆ: ಎಂ.ಟಿ.ಬಿ. ನಾಗರಾಜ್

ಬೆಂಗಳೂರು, ಫೆ :     ಈಗ ಸಚಿವ ಸ್ಥಾನ ಸಿಗದೇ ಇರುವ ಬಗ್ಗೆ ತಮಗೆ ಬೇಸರವಿಲ್ಲ. ಆದರೆ ಬರುವ ಜೂನ್ ನಲ್ಲಿ ಮಂತ್ರಿಯಾಗುವ ಯೋಗ ಬಂದೇ ಬರುತ್ತದೆ ಎಂದು ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಪರಾಭವಗೊಂಡಿರುವ ಎಂ.ಟಿ.ಬಿ. ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಮುಂದಿನ ಜೂನ್‌ನಲ್ಲಿ ವಿಧಾನಪರಿಷತ್ತಿನ ಏಳು ಸ್ಥಾನಗಳು ತೆರವಾಗಲಿದ್ದು, ಈ ಸಂದರ್ಭದಲ್ಲಿ ತಾವು, ಆರ್,ಶಂಕರ್ ಹಾಗೂ ವಿಶ್ವನಾಥ್ ಅವರನ್ನು ಮೇಲ್ಮನೆ ಸದಸ್ಯರನ್ನಾಗಿ ಯಡಿಯೂರಪ್ಪ ಮಾಡಲಿದ್ದಾರೆ. ಬಳಿಕ ಮಂತ್ರಿಮಂಡಲ ವಿಸ್ತರಣೆ ಮಾಡಿ ತಮಗೆ ಮಂತ್ರಿ ಸ್ಥಾನ ನೀಡಲಿದ್ದಾರೆ ಎಂದರು. 

ಯಡಿಯೂರಪ್ಪ ಅವರನ್ನು ಭಾನುವಾರ ಭೇಟಿ ಮಾಡಿ ಚರ್ಚಿಸಿದ್ದು, ತಮಗೆ ಸೂಕ್ತ ಭರವಸೆ ನೀಡಿದ್ದಾರೆ. ಯಡಿಯೂರಪ್ಪ ಕೊಟ್ಟ ಮಾತಿನಂತೆ ಚಾಚೂ ತಪ್ಪದೆ ನಡೆದುಕೊಳ್ಳುತ್ತಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲುಕಾರಣರಾದ ಎಲ್ಲ ೧೭ ಮಂದಿ ಒಗ್ಗಟ್ಟಾಗಿದ್ದೇವೆ, ಮುಂದಿನ ದಿನಗಳಲ್ಲಿ ಎಲ್ಲರಿಗೂಅಧಿಕಾರ ಸಿಗಲಿದೆ ಎಂದರು.