ಕಡಬಿ 25: ಮಕ್ಕಳು ಸೇರಿದಂತೆ ಎಲ್ಲಾ ವಯಸ್ಸಿನವರಲ್ಲಿ ಗಂಟಲುಮಾರಿ ರೋಗದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ, ಕನರ್ಾಟಕ ಮತ್ತು ಉತ್ತರಪ್ರದೇಶಗಳಲ್ಲಿ ಈ ರೋಗದ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ ಆದ್ದರಿಂದ ಇದನ್ನು ನಿಯಂತ್ರಿಸಲು ಭಾರತ ಸಕರ್ಾರ ಟಿ,ಟಿ, ಲಸಿಕೆ ಬದಲಾಗಿ ಟಿ,ಡಿ ಲಸಿಕೆಯನ್ನು ಪ್ರಾರಂಭಿಸಿದೆ, ಗಂಟಲುಮಾರಿ ಇದೊಂದು ಸಾಂಕ್ರಾಮಿಕ ರೋಗವಾಗಿದ್ದು ಗಂಟಲು ಮಾರಿ ಸೋಂಕು ಹೊಂದಿದ ವ್ಯಕ್ತಿಯಿಂದ ಗಾಳಿಯ ಮೂಲಕ ಮತ್ತೊಬ್ಬ ವ್ಯಕ್ತಿಗೆ ಹರಡುವದು, ಸದರಿ ರೋಗದಿಂದ ಗಂಟಲು ನೋವು, ಸಣ್ಣ ಪ್ರಮಾಣದ ಜ್ವರ, ಹಸಿವಾಗದೇ ಇರವದು, ಕುತ್ತಿಗೆ ಊತ, ಗಂಟಲಿನಲ್ಲಿ ಬಿಳಿ ಪೋರೆ ಕಾಣುವದು, ಮತ್ತು ಉಸಿರಾಟದ ತೊಂದರೆ ಕಂಡುಬಂದು ಸಾವು ನೊವು ಕಂಡುಬರುತ್ತಿವೆ ಎಂದು ಯರಗಟ್ಟಿ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಐ ಆರ್ ಗಂಜಿ ಹೇಳಿದರು.
ಸಮೀಪದ ಯರಗಣವಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಲಸಿಕಾ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮ ಕಿರಿಯ ಪುರುಷ ಆರೋಗ್ಯ ಸಹಾಯಕ ಯು ಬಿ ಬೇಟಗೇರಿ ಮಾತನಾಡಿ, ಸೊಳ್ಳೆಗಳಿಂದ ಹರಡುವ ರೋಗಗಳು ಮತ್ತು ಅವುಗಳ ನಿಯಂತ್ರಣ ಕುರಿತು ಮಾಹಿತಿ ನೀಡಿದರು.
ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋದ್ಯಾಯ ಎನ್ ಎಸ್ ಫೋಳ ವಹಿಸಿದ್ದರು, ಶಿಕ್ಷಕರಾದ ವಿ ವಿ ತಲ್ಲೂರ, ಎಂ ಎಸ್ ಚೌಡಪ್ಪನವರ, ಎನ್ ಎಸ್ ಹೂಗಾರ, ಆರ್ ಎಂ ಕಳಸನ್ನವರ, ವಿದ್ಯಾಥರ್ಿಗಳು ಹಾಜರಿದ್ದರು. ವಿ ವಿ ತಲ್ಲೂರ ನಿರೂಪಣೆ ಮಾಡಿದರು, ಎನ್ ಎಸ್ ಹೂಗಾರ ಸ್ವಾಗತಿಸಿ, ವಂದಿಸಿದರು.