ಮಳೆ ಬೀಳುವ ಪ್ರದೇಶದಲ್ಲಿ ಉತ್ತಮ ಇಳುವರಿ ಪಡೆಯಿರಿ: ಶಿವರಾಜ

.ಲೋಕದರ್ಶನ ವರದಿ

ರಾಣೇಬೆನ್ನೂರು ಜೂ.17: ಟೊಮೆಟೋ ರಾಜ್ಯದಲ್ಲಿ ಹೆಚ್ಚು ಬೆಳೆಯುತ್ತಿರುವ ತರಕಾರಿ ಪ್ರಮುಖ ಕೃಷಿಯಾಗಿದೆ.  ಇದರಲ್ಲಿ  ಎ.ಬಿ ಹಾಗೂ ಸಿ ಜೀವಸತ್ವ (ಗಿಣಚಿಟಟಿ)ಗಳನ್ನು ಹೊಂದಿದೆ.  ಈ ಬೆಳೆ ಎಲ್ಲಾ ವಿಧದ ಮಣ್ಣುಗಳಲ್ಲಿ ಬೆಳೆಯ ಬಹುದಾಗಿದೆ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಶಿವರಾಜ ಹಾವೇರಿ ಹೇಳಿದರು.  

ಅವರು ತಾಲೂಕಿನ ಕುಸಗೂರ ಗ್ರಾಮದ    ಬಸವೇಶ್ವರ ದೇವಸ್ಥಾನ ಸಭಾಂಗಣದಲ್ಲಿ    ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.  

         ಹೆಚ್ಚು ಮಳೆ ಬೀಳುವ ಹಾಗೂ ಮಲೆನಾಡು ಪ್ರದೇಶದಲ್ಲಿ ಈ ಬೆಳೆ ಉತ್ತಮ ಇಳುವರಿಯನ್ನು ಪಡೆಯಬಹುದು.  ಜನೇವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಬೆಳೆಎಲೆ ಮುದುಡುರೋಗಕ್ಕೆ ತುತ್ತಾಗುವುದರಿಂದ ಅವಶ್ಯವಿರುವ ಸಸ್ಯ ಸಂರಕ್ಷಣಾ ಕ್ರಮಗಳನ್ನು ಸಸಿಮಡಿಯಿಂದಲೇ ಪ್ರಾರಂಭಿಸಬೇಕಾದ ಅಗತ್ಯವಿದೆ ಎಂದದರು.  

   ಮಳೆಯಾಶ್ರಿತ ಬೆಳೆಯಲ್ಲಿ ಸಸಿಗಳನ್ನು ನಾಟಿ ಮಾಡಲು ಜುಲೈ ಮಧ್ಯದಿಂದ ಅಗಸ್ಟ್ ಮಧ್ಯದವರೆಗೆ ಉತ್ತಮ ಕಾಲ, ತಳಿಗಳಾದ ಪೂಜಾರೋಬಿ, ಎನ್.ಟಿ.ಬಿ.ಆರ್, ಮೆಘಾರೋಮ್, ಆರ್ಕವಿಕಾಸ್, ಆರ್ಕ ಸೌರಬ, ಇತರ ತಳಿಗಳನ್ನು ಸೂಕ್ತವಾಗಿ ಆಯ್ಕೆಮಾಡಿಕೊಂಡು ಹಾಗೂ ತರಕಾರಿಯಲ್ಲಿ ವಿವಿಧ ಬೆಳೆಗಳಾದ ಆಲುಗಡ್ಡೆ, ಬದನೆ, ಮೆಣಸಿನಕಾಯಿ ದೊಣ್ಣೆ ಮೆಣಸಿನಕಾಯಿ ಎಲೆ ಕೋಸು, ಗೆಡ್ಡಕೋಸು, ಬೆಂಡೆ, ತಿಂಗಳ ಹುರಳಿಕಾಯಿ, ಕುಂಬಳಕಾಯಿ ಬೂದಗುಂಬಳಕಾಯಿ, ಸೋರೆಕಾಯಿ ಹಾಗಲಕಾಯಿ, ಹೀರೆಕಾಯಿ, ತೊಂಡೆಕಾಯಿ, ಬೀಟ್ರೂಟ್ ಮೂಲಂಗಿ ಈರುಳ್ಳಿ ಮೇಂತ್ಯೆ ಪಾಲಕ್ ಕೋತಂಬರಿ ನುಗ್ಗೆ, ಬೆಬಿಕಾನರ್್ ಸೇರಿದಂತೆ ಮತ್ತಿತರೇ ತರಕಾರಿ ಬೆಳೆ ಕೃಷಿ ಮಾಡಬಹುದು ಎಂದರು.

     ಬಿಲ್ಲಹಳ್ಳಿ ಗ್ರಾಪಂ ಉಪಾಧ್ಯಕ್ಷ ಸಂಜೀವರೆಡ್ಡಿ ವೆಂಕಣ್ಣ ಕಜ್ಜರಿ ಅವರು ಸಮಾರಂಭ ಉದ್ಘಾಟಿಸಿ ಮಾಹಿತಿ ಕಾಯರ್ಾಗಾರಕ್ಕೆ ಚಾಲನೆ ನೀಡಿದರು.  ಕೃಷಿ ಅಧಿಕಾರಿ ನೇಮನಗೌಡ ಕಂಕನವಾಡ, ರವಿ ಉಪ್ಪಾರ ಸಲ್ಮಾ ಕರ್ಜಗಿ, ಮಲ್ಲಪ್ಪ ನ್ಯಾಮತಿ ಸುರೇಶ.ಮಾಗೋಡ. ರಾಜೇಸಾಬ್ ದೊಡ್ಡಮನಿ, ಕರಿಯಪ್ಪ ಚಲವಾದಿ, ಹನಮರೆಡ್ಡಿ ಮೇಲಗರಿ ಸೇರಿದಂತೆ ಗ್ರಾಮದ ಗಣ್ಯರು, ಸ್ವ-ಸಹಾಯ ಸಂಘದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.