ಅನ್ಯರಾಜ್ಯ ಕಳ್ಳ ವ್ಯಾಪಾರಿಗಳನ್ನು ತೊಲಗಿಸಿ, ಬೀಳಗಿ ಉಳಿಸಿ ಚಳುವಳಿ ಸಫಲ

Get rid of foreign smugglers, save the fall and the movement is successful

ಅನ್ಯರಾಜ್ಯ ಕಳ್ಳ ವ್ಯಾಪಾರಿಗಳನ್ನು ತೊಲಗಿಸಿ, ಬೀಳಗಿ ಉಳಿಸಿ ಚಳುವಳಿ ಸಫಲ

ಬೀಳಗಿ 16 ; ಅನ್ಯ ರಾಜ್ಯದ ವ್ಯಾಪಾರಿಗಳಿಂದ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಮತ್ತು ಕನ್ನಡ ಸಂಸ್ಕೃತಿಗೆ ಉಂಟಾಗುತ್ತಿರುವ ಧಕ್ಕೆ ಮತ್ತು ಸರಕಾರದ ಬೊಕ್ಕಸಕ್ಕೆ ಸಲ್ಲಬೇಕಾದ ತೆರಿಗೆ ವಂಚನೆಯನ್ನು ಖಂಡಿಸಿ, ಬೀಳಗಿ ತಾಲೂಕಿನ ಹಿರಿಯರು, ನಾಗರಿಕರು, ವ್ಯಾಪಾರಸ್ಥರು ಮತ್ತು ವಿವಿಧ ಕನ್ನಡ ಪರ ಸಂಘಟನೆಗಳು ಸೇರಿ ಅನ್ಯರಾಜ್ಯ ಕಳ್ಳ ವ್ಯಾಪಾರಿಗಳನ್ನು ತೊಲಗಿಸಿ, ಬೀಳಗಿ ಉಳಿಸಿ ಚಳುವಳಿಯು ಸಫಲವಾಗಿ ಬೀಳಗಿ ಸಂಪೂರ್ಣ ಬಂದ್ ಯಶಸ್ವಿಯಾಗಿದೆ. 

    ಪಟ್ಟಣದ ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿ, ಬಸವೇಶ್ವರ ವೃತ್ತದಲ್ಲಿ ಸಾವಿರಾರು ಪ್ರತಿಭಟನಾಕಾರರು ಜಮಾಹಿಸಿ ಅನ್ಯ ರಾಜ್ಯದ ವ್ಯಾಪಾರಿಗಳ ವಿರುದ್ಧ ಘೋಷಣೆ ಕೂಗಿ ಬಸ್ ನಿಲ್ದಾಣದೆದುರು ಟೈಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡೆಸಿದರು. ಅಲ್ಲಿಂದ ಪ್ರತಿಭಟನೆ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ತಹಶೀಲ್ದಾರ ಕಛೇರಿ ಮುಂದೆ ತಹಶೀಲ್ದಾರ ವಿನೋದ ಹತ್ತಳ್ಳಿಗೆ ಮನವಿ ಸಲ್ಲಿಸಿದರು. ಸಂಘಟನೆಯ ಅಧ್ಯಕ್ಷ ಪ್ರವೀಣ್ ಪಾಟೀಲ್ ಮಾತನಾಡಿ ಬೀಳಗಿ ಪಟ್ಟಣ ಹಾಗೂ ತಾಲೂಕಿನಲ್ಲಿ ಬೇರೆ ಬೇರೆ ಗ್ರಾಮಗಳಲ್ಲಿ ಅನ್ಯ ರಾಜ್ಯಗಳಿಂದ ಆಗಮಿಸಿ ಇಲ್ಲಿಯೇ ವಾಸವಿದ್ದು ಜನಸಾಮಾನ್ಯರ ಉದ್ಯೋಗವನ್ನು ಕಸಿದುಕೊಳ್ಳುವ ಹಾಗೂ ತಾಲೂಕಿನ ಮುಗ್ಧ ಜನರನ್ನು ಬಳಸಿಕೊಂಡು, ಕನ್ನಡದ ಸಂಸ್ಕೃತಿಗೆ ಧಕ್ಕೆ ತರುವುದಲ್ಲದೆ ಇಲ್ಲಿಯ ವ್ಯಾಪಾರಸ್ಥರನ್ನೆ ಊರು ಬಿಟ್ಟು ದುಡಿಯಲು (ಗುಳೆಹೋಗುವ)ತೊಲಗಿಸುವ ಹುನ್ನಾರದ ಕಾರ್ಯ ಇವರಿಂದ ನಡೆಯುತ್ತಿದೆ. ಇಂತಾ ವಂಚಕರನ್ನು ರಾಜ್ಯದಿಂದ ಹೊರಹಾಕಬೇಕು ಎಂದು ಹರಿಹಾಯ್ದರು.    ಯುಕೆಪಿ ಹಿನ್ನಿರಿನಿಂದ ಈಗಾಗಲೇ ತಾಲೂಕಿನ ಅನೇಕ ಗ್ರಾಮಗಳ ಆಸ್ತಿ-ಪಾಸ್ತಿ ಜತೆಗೆ ಗ್ರಾಮದಲ್ಲಿ ನಂಬಿಕೊಂಡು ತಲೆತಲಾಂತರದಿಂದ ಮಾಡುತ್ತ ಬಂದಿದ್ದ ಕುಲಕಸಬುಗಳನ್ನು (ಉದ್ಯೋಗ) ಕಳೆದುಕೊಂಡು ಸಂತ್ರಸ್ತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪಟ್ಟಣ ಮತ್ತು ತಾಲೂಕಿನ ಮುಖ್ಯ ಗ್ರಾಮಗಳಲ್ಲಿ ಅನ್ಯರಾಜ್ಯ ವ್ಯಾಪಾರಸ್ಥರಿಂದ ಎಲ್ಲ ರೀತಿಯ ವ್ಯಾಪಾರಗಳಲ್ಲಿ ಮಾರುಕಟ್ಟೆ ದರ ವ್ಯತ್ಯಾಸ ಮಾಡಿಕೊಂಡಂತೆ ನಾಟಕವಾಡಿ ನಿತ್ಯ ಜನರಿಗೆ ಮೋಸ ಮಾಡುತಿದ್ದಾರೆ. ತುಂಬಾ ದೊಡ್ಡ ಮಟ್ಟದ ಅಂಗಡಿಗಳಿಗೆ ಲಕ್ಷಾಂತರ ಡಿಪಾಸಿಟ್ ಹಾಗೂ ಬಾಡಿಗೆ ನೀಡುವ ಮೂಲಕ ವ್ಯಾಪಾರಸ್ಥರ ಉದ್ಯೋಗ ಮತ್ತು ವ್ಯಾಪಾರಸ್ಥರಿಗೆ ಅಂಗಡಿಗಳು ಸಿಗದಂತೆ ವಾತಾವರನ ನಿರ್ಮಿಸಿದ್ದಾರೆ. ಇಲ್ಲಿ ಬಡವರು ವ್ಯಾಪಾರ ಮಾಡದಂತಾಗಿದೆ. ಮುಂದಿನ ದಿನಮಾನಗಳಲ್ಲಿ ಬೀಳಗಿ ತಾಲೂಕಿನಲ್ಲಿ ಯುವಕರಿಗೆ, ಮಕ್ಕಳಿಗೆ ವ್ಯಾಪಾರ ಮಾಡುವ ಅವಕಾಶ ಸಿಗದಂತಾಗುತ್ತದೆ. ಬಡ್ಡಿ ಆಮೀಶ ಒಡ್ಡಿ ಪಟ್ಟಣದ ಸಾಕಷ್ಟು ಜನರ ಮತ್ತು ಮಹಿಳೆಯರ ಹತ್ತಿರ ಹಣ ಪಡೆದು ಇಲ್ಲಿಂದ ಪರಾರಿಯಾಗಿರುವ ಘಟನೆಗಳು ಅನೇಕ ಬಾರಿ ಜರುಗಿವೆ, ಅನ್ಯರಾಜ್ಯ ವ್ಯಾಪಾರಸ್ಥರು ವಿಶ್ವಾಸಿತರಲ್ಲ. ಯಾವಾಗ ಕೈಕೊಟ್ಟು ಹೊಗುತ್ತಾರೋ ಗೊತ್ತಿಲ್ಲ ಎಂದರು.   ದಲಿತ ಮುಖಂಡ ಪಡಿಯಪ್ಪ ಕಳ್ಳಿಮನಿ ಮಾತನಾಡಿ ಈ ಹಿಂದೆ ಬೀಳಗಿ ಹಿರಿಯರು ಸೇರಿಕೊಂಡು ಹೊರರಾಜ್ಯ ವ್ಯಾಪಾರಿಗಳೊಂದಿಗೆ 2014ರಲ್ಲಿ ಹೋರಾಟ ಮಾಡಿ ಮುಂದೇ ಯಾರು 1ಕ್ಕಿಂತ ಹೆಚ್ಚು ಅಂಗಡಿ ಮಾಡಬಾರದೆಂದು ಒಪ್ಪಂದ ಮಾಡಿಕೊಂಡಿದ್ದೇವು. 2014ರ ಮೇಲೆ ಬೇರೆ ಯಾರೂ ಬರಬಾರದೆಂದು ಒಪ್ಪಂದ ಕೂಡ ಆಗಿತ್ತು, ಆದರೂ ಕೂಡ ಮತ್ತೇ ಒಪ್ಪಂದ ಮಿರಿ ಸುಮಾರು 10ಕ್ಕಿಂತ ಹೆಚ್ಚು ಅಂಗಡಿಗಳು ಬಂದಿವೆ. ಇದೇ ರೀತಿ ಮುಂದುವರದಲ್ಲಿ ಸ್ಥಳಿಯ ವ್ಯಾಪಾರಸ್ಥರು ಗಂಟು-ಮುಟೆ ಕಟ್ಟುವ ಪರಿಸ್ಥಿತಿ ಬರುತ್ತದೆ ಎಂದರು.  

   ಕರವೇ ಜಿಲ್ಲಾಧ್ಯಕ್ಷ ಬಸವರಾಜ್ ದಮಯಂತಿ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ರೂಪಾ ಹಿರೇಮಠ ಮಾತನಾಡಿ,  ಮಲ್ಲನಗೌಡ ನೀಲಪ್ಪನವರ್, ಬಸವರಾಜ್ ಉಮಚಗಿಮಠ, ನಾಗರಾಜ ಟಂಕಸಾಲಿ, ನಾಗೇಶ್ ಸಿಡ್ಲನ್ನವರ್, ಆನಂದ ಮುಳವಾಡ, ಮನೋಜ್ ಹಾದಿಮನಿ, ಆನಂದ್ ಬಿರಾದಾರ, ಆನಂದ್ ಮಂಟೂರ್, ಹಣಮಂತ ಹತ್ನಳ್ಳಿ, ಡಾ.ಸುಭಾಸ್ ನೀರಲಿ, ಸಿದ್ದು ಗಡದ, ಮೈಬೂಬ್ ಜಮಖಂಡಿ, ಮೈಬೂಬ್ ಬಾಗವಾನ, ಮಲ್ಲು ಲಮಾಣಿ ಇತರರು ಇದ್ದರು.