ಗ್ರಂಥಾಲಯದಿಂದ ಭೌತಿಕ, ಭಾವನಾತ್ಮಕ ಆಹಾರ ಪಡೆಯಿರಿ

ಬಾಗಲಕೋಟೆ: ದೇಶ ಹಾಗೂ ರಾಜ್ಯಕ್ಕೆ ಮಾದರಿಯಾದ  ಮುಧೋಳ ತಾಲೂಕಿನ ಯಡಹಳ್ಳಿ ಗ್ರಾಮದ ಶಿವಲಿಂಗಪ್ಪ ಬಸಪ್ಪ ಹೊರಟ್ಟಿ ಕನರ್ಾಟಕ ಪಬ್ಲಿಕ್ ಶಾಲೆಯಲ್ಲಿ ನೂತನವಾಗಿ ನಿಮರ್ಿಸಲಾದ ಗ್ರಂಥಾಲಯಕ್ಕೆ ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀ ಚಾಲನೆ ನೀಡಿದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು ಗ್ರಾಮೀಣ ಭಾಗದ ಬಡಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಉದ್ದೇಶದಿಂದ ವಿಶಾಲವಾದ ವಾತಾವರಣದಲ್ಲಿ ಶಾಲೆಯನ್ನು ನಿಮರ್ಿಸಿ ಅವಶ್ಯಕವಾದ ಎಲ್ಲ ಬಗೆಯ ಅನುಕೂಲತೆಗಳನ್ನು ಒದಗಿಸಿಕೊಟ್ಟು ಸಿರಿವಂತಿಕೆಯನ್ನು ಬಸವರಾಜ ಹೊರಟ್ಟಿಯವರು ಮೆರೆದಿದ್ದಾರೆ. ತಮ್ಮ ತಾಯಿಯವರ ಹೆಸರಿನಲ್ಲಿ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.

ಗ್ರಾಮೀಣ ಭಾಗದ ಮಕ್ಕಳಿಗೂ ಉತ್ತಮ ಸಂಸ್ಕೃತಿ ಮೂಡಿಸುವ ನಿಟ್ಟಿನಲ್ಲಿ ಬೇಕಾದ ಅವಶ್ಯಕತೆಯನ್ನು ಒದಗಿಸಿಕೊಟ್ಟಿದ್ದಾರೆ. ಅದರ ಜೊತೆಗೆ ಸುಸಜ್ಜಿತವಾದ ಗ್ರಂಥಾಲಯವನ್ನು ನಿಮರ್ಿಸಿಕೊಟ್ಟಿದ್ದಾರೆ. ಗ್ರಂಥಾಲಯ ಎಂಬ ಜ್ಞಾನದ ಭಂಡಾರ ನಿಮರ್ಿಸಿಕೊಟ್ಟಿದ್ದಾರೆ. ಗ್ರಂಥಾಲಯ ಹೃದಯ ಇದ್ದಹಾಗೆ. ಈ ಗ್ರಂಥಾಲಯದಿಂದ ಭೌತಿಕ ಮತ್ತು ಭಾವನಾತ್ಮಕ ಆಹಾರ ಪಡೆಯಬಹುದಾಗಿದೆ. ಇದರ ಸದುಪಯೋಗವನ್ನು ಮಕ್ಕಳು ಪಡೆದು ಶ್ರೇಷ್ಟ ವ್ಯಕ್ತಿಯಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ ಸಾಕಷ್ಟು ಜನ ಹಳ್ಳಿಯಿಂದ ಪಟ್ಟಣಕ್ಕೆ ಹೋದವರು ತಿರುಗಿ ತಮ್ಮ ಹಳ್ಳಿಯತ್ತ ನೋಡುವುದಿಲ್ಲ. ಆದರೆ ಹಳ್ಳಿಯಿಂದ ಪಟ್ಟಣಕ್ಕೆ ಸೇರಿದ ಬಸವರಾಜ ಹೊರಟ್ಟಿಯವರು ತಾವು ಬೆಳೆದ ಗ್ರಾಮವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ರಾಜ್ಯಕ್ಕೆ ಮಾದರಿಯಾಗುವಂತಹ ಶಾಲೆಯನ್ನು ನಿಮರ್ಿಸಿ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಟ್ಟಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ತಮ್ಮದೇಯಾಧ ಅವ್ವ ಟ್ರಸ್ಟ್ನಿಂದ ಶಾಲೆಗೆ ಡೆಸ್ಕ, ಪ್ರಯೋಗಾಲಯ ಹಾಗೂ ಗ್ರಂಥಾಲಯ ನಿಮರ್ಿಸಿಕೊಟ್ಟಿದ್ದಾರೆ. ಇಂತಹ ಅಭಿವೃದ್ದಿಪರ ಕೆಲಸಗಳನ್ನು ಹೆಚ್ಚಿಗೆ ಮಾಡಲು ದೇವರು ಅವರಿಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ಹಾರೈಸಿದರು. 

ಕಾರ್ಯಕ್ರಮದಲ್ಲಿ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ, ಅವ್ವ ಸೇವಾ ಟ್ರಸ್ಟ್ನ ಗ್ರಂಥಾಲಯ ನಿಮರ್ಾಣದ ಉಸ್ತುವಾರಿ ಬಸವರಾಜ ಧಾರವಾಡಕರ, ಕಾಲೇಜಿ ಪ್ರಾಚಾರ್ಯ ವಿ.ಪಿ.ಪೆಟ್ಲೂರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾಲೇಜಿನ ಉಪಪ್ರಾಚಾರ್ಯ ಆರ್.ಬಿ.ಹಿರೇಮಠ ಸ್ವಾಗತಿಸಿದರು. ಪಿ.ಬಿ.ಯರಗಟ್ಟಿ ನಿರೂಪಿಸಿದರು.