ಸಮಗ್ರ ತರಬೇತಿ ಪಡೆದು ಉತ್ತಮವಾಗಿ ಕಾರ್ಯ ನಿರ್ವಹಿಸಿ; ಬಸವರಾಜ ಹೆಗ್ಗನಾಯಕ
ಬೆಳಗಾವಿ ನ.21 : ಸ್ವಸಹಾಯ ಸಂಘಗಳ ಅಗತ್ಯ ದಾಖಲೆಗಳ ನಿರ್ವಹಣೆ, ಬ್ಯಾಂಕ್ ಲಿಂಕ್, ಕೌಶಲ್ಯಗಳ ತರಬೇತಿ ಆಯೋಜನೆ, ಮಾರುಕಟ್ಟೆಯ ಸಂಪರ್ಕ ಹಾಗೂ ವಿವಿಧ ಯೋಜನೆಗಳಿಗೆ ಬ್ಯಾಂಕ್‌ಗಳಿಂದ ಸಾಲ ಪಡೆಯುವ ಮುಂತಾದ ವಿಷಯಗಳ ಬಗ್ಗೆ ಸಮಗ್ರ ತರಬೇತಿ ನೀಡಲಾಗುತ್ತಿದ್ದು, ಕಾಳಜಿಯಿಂದ ತರಬೇತಿ ಪಡೆದುಕೊಂಡು ಕಾರ್ಯನಿರ್ವಹಿಸಬೇಕು ಎಂದು ಜಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳಾದ ಬಸವರಾಜ ಹೆಗ್ಗನಾಯಕ ಅವರು ತಿಳಿಸಿದರು.
ಮಚ್ಚೆ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರದಲ್ಲಿ ಅಥಣಿ ತಾಲೂಕಿನ ಸ್ಥಳಿಯ ಸಮುದಾಯದ ಸಂಪನ್ಮೂಲ ವ್ಯಕ್ತಿಗಳಿಗೆ (ಪ್ರಶಿಕ್ಷಣಾರ್ಥಿಗಳು) ವಸತಿ ಸಹಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಥಣಿ ತಾಲೂಕು ಪಂಚಾಯತಿ ವ್ಯಾಪ್ತಿಯಿಂದ ಒಟ್ಟು 42 ಸ್ಥಳೀಯ ಸಮುದಾಯ ವ್ಯಕ್ತಿಗಳು ಹಾಜರಿದ್ದು, ಸರ್ಕಾರದ ಆಶಯದಂತೆ ಮತ್ತು ಇಲಾಖೆಯ ಮಾರ್ಗಸೂಚಿಗಳ ಅಡಿಯಲ್ಲಿ ಅಚ್ಚುಕಟ್ಟಾಗಿ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ತರಬೇತಿಯ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಲಕ್ಷ್ಮಣಗೌಡ ಅವರು ಮಾತನಾಡಿ ಡಿಪಿಆರ್‌ಸಿ ತರಬೇತಿ ಕೇಂದ್ರ ಮಹಿಳೆಯರ ಕಲ್ಯಾಣಕ್ಕಾಗಿ ತೆರೆದಿರುವ ಸಂಸ್ಥೆಯಾಗಿದ್ದು, ತರಬೇತಿ ಪಡೆದು ಸ್ವ-ಸಹಾಯ ಸಂಘದ ಸದಸ್ಯರು ತಮ್ಮ ಜೀವನವನ್ನು ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಕವಿತಾ ಪತ್ತಾರ, ಸುನಂದಾ ಐಗಳಿ, ರಾಜಶ್ರೀ ಜನಗೌಡ, ಅಶ್ವಿನಿ ತಳವಾರ, ಜ್ಯೋತಿ ಬಿದರಿ, ಸುಮಂಗಲಾ ಬಡಿಗೇರ, ರೇಖಾ ಹೂಗಾರ, ಲಕ್ಷ್ಮೀಬಾಯಿ ನಾಯಿಕ, ಗೀತಾ ದೇವರಮನಿ, ರೇಷ್ಮಾ ಕಾಂಬಳೆ, ಶೃತಿ ಸ್ವಾಮಿ, ಪ್ರೇಮಾ ಸನದಿ, ಗಂಗಾ ಮಲಬೆ, ಅಕ್ಷತಾ ಶಾಸ್ತ್ರಿ, ಅಶ್ವಿನಿ ದುಗ್ಗೆ, ಮಾಲಾ ಮಳವಾಡೆ, ಸವಿತಾ ಈರಣ್ಣವರ, ಸುನಂದಾ ಬಸರಿಕೊಡಿ, ಸುನಿತಾ ದಳವಾಯಿ, ಸಾಯವ್ವ ಇಚೇರಿ ಹಾಗೂ ಆಡಳಿತ ಸಹಾಯಕಿ ಮಂಜುಳಾ ಹೊನಕುಪ್ಪಿ, ಲೆಕ್ಕ ಸಹಾಯಕಿ ಸೋನು ಮುತ್ನಾಳ, ಪ್ರಿಯಾ ಸುತಾರ, ರಮೇಶ ದೇಸಾಯಿ, ಶಾಂತಾರಾಮ ಗೋದೋಳಕರ, ಗೋಪಾಲಕೃಷ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದರು.