ಬೆಳಗಾವಿ: 24 : ಯುವಕರು ದುಶ್ಚಚಟಗಳಿಗೆ ದಾಸರಗಾದೆ ಒಳ್ಳೆಯ ಶಿಕ್ಷಣವನ್ನು ಪಡೆದು ರಾಷ್ಟ್ರದ ಅಭಿವೃದ್ಧಿಯಲ್ಲಿ ಹಾಗೂ ಗ್ರಾಮಗಳ ಸ್ವಚ್ಚತೆಯಲ್ಲಿ ಯುವಕರ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಸಂತೋಷ ತೇರನಿಮಠ ಅವರು ಯುವಕರಿಗೆ ಕರೆ ನಿಡಿದರು.
ಭಾರತ ಸಕರ್ಾರದ ನೆಹರು ಯುವ ಕೇಂದ್ರ ಬೆಳಗಾವಿ, ಸಮಾಜ ಕಾರ್ಯ ವಿದ್ಯಾರ್ಥಿ ಗಳ ಯುವ ವೇದಿಕೆ ಸಂಕೇಶ್ವರ ಹಾಗೂ ಎ.ಆಯ್.ಎಮ್. ಆರ್ ಎಮ್.ಬಿ.ಎ ಮಹಾವಿದ್ಯಾಲಯ ಸಂಕೇಶ್ವರ ಅವರ ಸಂಯುಕ್ತ ಆಶ್ರಯದಲ್ಲಿ ಸಂಕೆಶ್ವರದಲ್ಲಿ (ಡಿ 24) ನಡೆದ ಸ್ವಚ್ಚತಾ ಜಾಗೃತಿ ಹಾಗೂ ಶ್ರಮದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರೋ ವಿದ್ಯಾ ಸ್ವಾಮಿ ಅವರು ಮಾತನಾಡಿ, ಆರೊಗ್ಯ ಉತ್ತಮವಾಗಿರಲು ನಮ್ಮ ಸುತ್ತಲಿನ ಪರಿಸರ ಸ್ವಚ್ಚವಾಗಿದ್ದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತೆ ಎಂದು ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಉಪನ್ಯಾಸ, ಜಾಥಾ ಕಾರ್ಯಕ್ರಮ ಸ್ವಚ್ಚತಾ ಜಾಗೃತಿ ಮತ್ತು ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರೋ ಅನಿತಾ ಬಿರಾಜ, ಪ್ರೋ ಶ್ರುತಿ ಸಮನ್ನವರ ಹಾಗೂ ಸತ್ತಿಶ ನಿಜನ್ನವರ, ನಿರ್ವಾ ಣಿ ಕಲ್ಲೂಳ್ಳಿ, ಹಾಗೂ ಸಂಘದ ಸದಸ್ಯರು, ಉಪಸ್ಥಿತರಿದ್ದರು.
ಮಹಾವಿದ್ಯಾಲಯದ ವಿದ್ಯಾಥರ್ಿಗಳು ಪ್ರಾರ್ಥಿ ಸಿದರು. ರಾಜಶ್ರಿ ಪತ್ತಾರ ನಿರೂಪಿಸಿದರು, ಶಸಿಕಾಂತ ಕಾಂಬಳೆ ವಂದಿಸಿದರು.