ಕೊಪ್ಪಳ 09: ಕೌಶಲ್ಯಾಧಾರಿತ ತರಬೇತಿ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳುವುಂತೆ ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಜನತೆಗೆ ಕರೆ ನೀಡಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇವರ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರದಂದು (ಸೆ.09) ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯಥರ್ಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ/ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ದಿನಮಾನಗಳಲ್ಲಿ ದಿನದಿಂದ ದಿನಕ್ಕೆ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ. ಹೈದ್ರಾಬಾದ್ ಕನರ್ಾಟಕ ಪ್ರದೇಶದಲ್ಲಿ ಹಾಗೂ ನಮ್ಮ ಜಿಲ್ಲಿಯಲ್ಲಿಯೂ ಸಹ ನಿರುದ್ಯೋಗದ ಸಮಸ್ಯೆ ಇದೆ. ಇದನ್ನು ವಾರಿಸಲು ಉದ್ಯೋಗ ಮೇಳ, ಕೌಶಲ್ಯಾಭಿವೃದ್ಧಿ ತರಬೇತಿ/ ಉದ್ಯೋಗ ಮೇಳಗಳಂತಹ ಅನೇಕ ಕಾರ್ಯಕ್ರಮ ಸಕರ್ಾರವು ಹಮ್ಮಿಕೊಳ್ಳಲಾಗುತ್ತಿದೆ. ಇಂದು ಆರೋಗ್ಯ ಇಲಾಖೆಯಿಂದ ಇಂದು ಕೌಶಲ್ಯಾಭಿವೃದ್ಧಿ ತರಬೇತಿ/ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. 2019-20ನೇ ಸಾಲಿನ ಎಸ್.ಸಿ.ಪಿ-ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯಥರ್ಿಗಳಿಗೆ ಕನಿಷ್ಠ 800 ಹಾಸಿಗೆಯುಳ್ಳ ಎನ್.ಎ.ಬಿ.ಎಚ್ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಕನಿಷ್ಠ 75% ಹುದ್ದೆಗಳನ್ನು ಮೀಸಲಿರಿಸುವ ಭರವಸೆಯ ಮೇರೆಗೆ ಕೌಶಲ್ಯ ಅಭಿವೃದ್ಧಿ ತರಬೇತಿಗಾಗಿ ಆಯ್ಕೆ ಮಾಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ಅಪೋಲ್ ಮೆಡಿಸ್ಕಿಲ್ ಲಿಮಿಟೆಡ್, ಶ್ರೀ ರಾಮಯ್ಯ ಮೇಮೂರಿಯಲ್ ಆಸ್ಪತ್ರೆ ಹಾಗೂ ನಾರಾಯಣ ಹೃದಯಾಲಯ ಆಸ್ಪತ್ರೆಗಳಲ್ಲಿ ಮೂರು ತಿಂಗಳ ಅವಧಿಯ ತರಬೇತಿ ನಡೆಯಲಿವೆ. ತರಬೇತಿಯ ನಂತರ ಪ್ರಮಾಣ ಪತ್ರ ನೀಡುವುದಲ್ಲದೇ ತಮ್ಮ ಆಸ್ಪತ್ರೆಗಳಲ್ಲಿ ಉದ್ಯೋಗಾವಕಾಶವನ್ನು ಸಹ ಕಲ್ಪಿಸಲಿವೆ. ತರಬೇತಿ ಆಯ್ಕೆಯಾದ ಅಭ್ಯಥರ್ಿಗಳು ಈ ಅವಕಾಶವನ್ನು ಸರೀಯಾಗಿ ಉಪಯೋಗಿಸಿಕೊಂಡು ಉದ್ಯೋಗದ ನೆರವನ್ನು ಪಡೆದುಕೊಳ್ಳಿ ಎಂದರು.
ತರಬೇತಿ ಶಿಬಿರಕ್ಕೆ ಆಯ್ಕೆಯಾದ ಅಭ್ಯಥರ್ಿಗಳ ತರಬೇತಿ ಅವಧಿಯು ಪೂರ್ಣಗೊಂಡ ನಂತರ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾವಾರು ಗುರಿ ನಿಗದಿಪಡಿಸಿ. ಉದ್ಯೋಗ ಅವಕಾಶವನ್ನು ಈ ಭಾಗದವರಿಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಆಸ್ಪತ್ರೆಗಳ ಪ್ರತಿನಿಧಿಗಳಿಗೆ ತಿಳಿಸಿದರು.
ಅಪೋಲ್ ಮೆಡಿಸ್ಕಿಲ್ ಲಿಮಿಟೆಡ್ ಆಸ್ಪತ್ರೆಯ ಪ್ರತಿನಿಧಿ ರಂಗನಾಥ ಎನ್. ರವರು ಮಾತನಾಡಿ, ನಿರುದ್ಯೋಗ ಇರುವ ಮಹಿಳೆಯರಿಗೆ ವೈದ್ಯಕೀಯ ತರಬೇತಿಯನ್ನು ನೀಡಿ ಆಯ್ಕೆಯಾದ ಅಭ್ಯಥರ್ಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ತರಬೇತಿಯಲ್ಲಿ ನುರಿತ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಗುವುದು. ಕೌಶಲ್ಯ ಅಭಿವೃದ್ಧಿ ತರಬೇತಿ ಮೇಳವನ್ನು ಈಗಾಗಲೇ ರಾಜ್ಯದ ಐದು ಜಿಲ್ಲೆಗಳಲ್ಲಿ ಹಮ್ಮಿಕೊಂಡಿದ್ದು, ಕೊಪ್ಪಳ 6ನೇ ಜಿಲ್ಲೆಯಾಗಿದೆ. ವಿಶೇಷವಾಗಿ ಉತ್ತರ ಕನರ್ಾಟಕ ಭಾಗಕ್ಕೆ ಶೇ.60 ರಷ್ಟು ಪ್ರಾತಿನಿತ್ಯವನ್ನು ನೀಡಲಾಗಿದೆ. ಜಿಲ್ಲೆಗೆ 163 ಅಭ್ಯಥರ್ಿಗಳನ್ನು ತರಬೇತಿಗೆ ಆಯ್ಕೆ ಮಾಡುವ ಗುರಿಯನ್ನು ನಿಗದಿಪಡಿಸಲಾಗಿದೆ. ವಿದ್ಯಾಭ್ಯಾಸದ ಜೊತೆಗೆ ಅನುಭವ ತುಂಬಾ ಮುಖ್ಯವಾಗಿದ್ದು, ಕೌಶಲ್ಯ ಅಭಿವೃದ್ಧಿ ತರಬೇತಿ/ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯ ಸಕರ್ಾರವು ಈ ತರಬೇತಿ ಶಿಬಿರವನ್ನು ನಡೆಸಲು ಅಪೋಲ್ ಮೆಡಿಸ್ಕಿಲ್ ಲಿಮಿಟೆಡ್, ಶ್ರೀ ರಾಮಯ್ಯ ಮೇಮೂರಿಯಲ್ ಆಸ್ಪತ್ರೆ ಹಾಗೂ ನಾರಾಯಣ ಹೃದಯಾಲಯ, ಈ ಮೂರು ಆಸ್ಪತ್ರೆಗಳನ್ನು ಆಯ್ಕೆ ಮಾಡಿದೆ. ಸದ್ಯ ಎಸ್.ಸಿ.ಪಿ-ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯಥರ್ಿಗಳಿಗೆ ಈ ಕಾರ್ಯಕ್ರಮವನ್ನು ಇದ್ದು, ನಂತರದಲ್ಲಿ ಸಾಮಾನ್ಯ ವರ್ಗದ ಅಭ್ಯಥರ್ಿಗಳಿಗೂ ಇಂತಹ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂದರು.
ಕಾರ್ಯಕ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ್ ಎಸ್. ಯರಗಲ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಲಿಂಗರಾಜ, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ. ಜಂಬಯ್ಯ, ಡಾ. ಎಸ್.ಕೆ. ದೇಸಾಯಿ, ಡಾ. ಮಹೇಶ, ಶ್ರೀ ರಾಮಯ್ಯ ಮೇಮೂರಿಯಲ್ ಆಸ್ಪತ್ರೆಯ ವಿಶ್ವೇಶ್ವರಯ್ಯ, ನಾರಾಯಣ ಹೃದಯಾಲಯ ಆಸ್ಪತ್ರೆಯ ಎಚ್. ರಾಘವೇಂದ್ರ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.