ವಿಶ್ವಸಂಸ್ಥೆ, ನ 14 : ಉತ್ತರ ಕೊರಿಯಾದ ಮುಂದುವರಿದ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಉಡಾವಣೆ ಕುರಿತು ಜರ್ಮನಿ, ಫ್ರಾನ್ಸ್ ಮತ್ತು ರಷ್ಯಾ ತೀವ್ರ ಕಳವಳ ವ್ಯಕ್ತಪಡಿಸಿವೆ.
ಈ ಕುರಿತು ಬುಧವಾರ ಜರ್ಮನಿಯ ಶಾಶ್ವತ ವಿಶ್ವಸಂಸ್ಥೆ ಪ್ರತಿನಿಧಿ ಕ್ರಿಸ್ಟೋಫ್ ಹ್ಯೂಸ್ ಗೆನ್ ಜಂಟಿ ಹೇಳಿಕೆ ನೀಡಿದ್ದಾರೆ.
ಬುಧವಾರ ಬೆಳಗ್ಗೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕೊರಿಯನ್ ಪರ್ಯಾಯ ದ್ವೀಪಗಳಲ್ಲಿನ ಪರಿಸ್ಥಿತಿಯ ಕುರಿತು ಮುಚ್ಚಿದ ಬಾಗಿಲ ಸಭೆ ನಡೆಯಿತು. ಅದರಲ್ಲಿ ಇತ್ತೀಚಿನ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪರೀಕ್ಷಾರ್ಥ ಹಾರಾಟ ಮತ್ತು ಅದರ ಮೇಲೆ ಹೇರಿರುವ ನಿರ್ಬಂಧಗಳ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಜರ್ಮನಿ, ಫ್ರಾನ್ಸ್ ಮತ್ತು ರಷ್ಯಾ ದೇಶಗಳು ಕೊರಿಯಾದ ಅಕ್ಟೋಬರ್ 31ರಂದು ನಡೆದ ಕ್ಷಿಪಣಿ ಹಾರಾಟ ಸೇರಿದಂತೆ ಡೆಮಾಕ್ರೆಟಿಕ್ ಪೀಪಲ್ಸ್ ರಿಪಬ್ಲಿಕ್ ನಿಂದ ಮುಂದುವರಿದಿರುವ ಬ್ಯಾಲಿಸ್ಟಿಕ್ ಕ್ಷಿಪಣಿಯ ಪರೀಕ್ಷಾರ್ಥ ಹಾರಾಟದ ಕುರಿತು ತೀವ್ರ ಕಾಳಜಿ ವ್ಯಕ್ತಪಡಿಸಿದವರು ಎಂದು ಹ್ಯೂಸ್ ಗೆನ್ ಹೇಳಿದ್ದಾರೆ.
ಅಕ್ಟೋಬರ್ 31ರಂದು ಉತ್ತರ ಕೊರಿಯಾ ಫ್ಯೋಂಗನ್ನಾಂಡೋ ಪ್ರಾಂತ್ಯದ ಸಾಶನ್ ನಗರದಿಂದ 229 ಮೈಲಿ ದೂರ ಚಲಿಸುವ ಹಾಗೂ 90 ಕಿಮೀ ಎತ್ತರದ ಎರಡು ಕ್ಷಿಪಣಿಗಳ ಹಾರಾಟ ನಡೆಸಿತ್ತು ಎಂದು ದಕ್ಷಿಣ ಕೊರಿಯಾದ ಮುಖ್ಯ ಸೇನಾಧಿಕಾರಿ ಹೇಳಿಕೆ ನೀಡಿದ್ದರು.
ಈ ಮೂರು ದೇಶಗಳು, ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯನ್ನು ನಿರ್ಲಕ್ಷಿಸುತ್ತಿರುವ ಉತ್ತರ ಕೊರಿಯಾದ ಕ್ರಮವನ್ನು ಖಂಡಿಸಿದ್ದು, ಅಮೆರಿಕದ ಭದ್ರತಾ ಮಂಡಳಿ ನಿರ್ಣಯಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿವೆ. ಈ ಸಂಬಂಧ ಉತ್ತರ ಕೊರಿಯಾದ ವಿಶ್ವಸಂಸ್ಥೆಯೊಂದಿಗೆ ಮಾತುಕತೆ ನಡೆಸಿ, ಅಣ್ವಸ್ತ್ರ ಮುಕ್ತ ದೇಶವಾಗುವತ್ತ ಹೆಜ್ಜೆ ಇಡಬೇಕು ಎಂದು ಹ್ಯೂಸ್ ಗೆನ್ ಕರೆ ನೀಡಿದ್ದಾರೆ.
ಉತ್ತರ ಕೊರಿಯಾ ತನ್ನ ಕ್ಷಿಪಣಿಗಳ ಅಭಿವೃದ್ಧಿಯ ಬದಲಿಗೆ ತಮ್ಮ ದೇಶದಲ್ಲಿ ಹೆಚ್ಚುತ್ತಿರುವ ಆಹಾರ ಸಂಗ್ರಹ ಕೊರತೆಯ ಕುರಿತು ಚಿಂತನೆ ನಡೆಸಬೇಕು ಎಂದು ಮೂರು ರಾಷ್ಟ್ರಗಳು ಸಲಹೆ ನೀಡಿವೆ.