ಬೆಂಗಳೂರು, ನ. 5: ಜಿಯೋಫೋನ್ ದೀಪಾವಳಿ ಆಫರ್ ನೀಡಿದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದ್ದು, ಹಲವು ಮಂದಿ ಜಿಯೋ ಪೋನ್ ಕೊಳ್ಳಲು ಮುಗಿಬೀಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಜಿಯೋಫೋನ್ ಕಳೆದ 3 ವಾರಗಳಲ್ಲಿ ಅಭೂತಪೂರ್ವ ದಾಖಲೆಯ ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. ಹಾಗಾಗಿ ಜಿಯೋ ಫೋನ್ ಆಫರ್ ಅನ್ನು ಹೆಚ್ಚುವರಿ ಒಂದು ತಿಂಗಳು (ನವೆಂಬರ್) ಮುಂದುವರಿಸಲು ಜಿಯೋ ನಿರ್ಧರಿಸಿದೆ. ಜಿಯೋಪೋನ್ ದೀಪಾವಳಿ ಸಮಯದಲ್ಲಿ ಜಿಯೋ ಕುಟುಂಬವನ್ನು ಸೇರಲು ಸಾಧ್ಯವಾಗದ ಫೀಚರ್ ಫೋನ್ ಬಳಕೆದಾರರನ್ನು ಆಕರ್ಷಿಸಲು ಮುಂದಾಗಿತ್ತು, ಈ ಸಂದರ್ಭದಲ್ಲಿ ಬಳಕೆದಾರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ, ದೀಪಾವಳಿ ಹಬ್ಬದ ಕೊಡುಗೆಯ ಲಾಭಗಳನ್ನು ಪಡೆಯಲು ಮತ್ತು ಜಿಯೋ ಡಿಜಿಟಲ್ ಲೈಫ್ ಆರಂಭಿಸಲು ಮತ್ತೆ ಅವಕಾಶವನ್ನು ನೀಡಲಾಗಿದ್ದು, ಇನ್ನೂ ಒಂದು ತಿಂಗಳು ಈ ಆಫರ್ ಪಡೆದುಕೊಳ್ಳಲು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಈ ಆಫರ್ ಅನ್ನು ಒಂದು ತಿಂಗಳು ವಿಸ್ತರಿಸಿರುವುದರಿಂದ 2ಜಿ ಫೀಚರ್ ಫೋನ್ ಬಳಕೆದಾರರು ಜಿಯೋಫೋನ್ ಪ್ಲಾಟ್ಫಾಮರ್್ಗೆ ಆಗಮಿಸಬಹುದಾಗಿದೆ. ಈ ಮೂಲಕ ಸ್ಮಾರ್ಟ್ ಫೋನ್ ಬಳಕೆಯ ಅನುಭವನ್ನು ಸಿಂಗಲ್-ಲಾರ್ಗ್ಸ್ಟ್ 4 ಜಿ ಡಿವೈಸ್ ನಲ್ಲಿ ಪಡೆಯಬಹುದಾಗಿದೆ. ಜಿಯೋಫೋನ್ ದೀಪಾವಳಿ ಕೊಡುಗೆಯ ಭಾಗವಾಗಿ ಜಿಯೋ ಫೋನ್ ರೂ.699ಕ್ಕೆ ದೊರೆಯುತ್ತಿದೆ. (ಮೂಲತಃ 1,500 ರೂ.ಗಳಿಗೆ ಮಾರಾಟವಾಗುತ್ತಿತ್ತು) ಮತ್ತು ಇನ್ನೊಂದು ತಿಂಗಳು (ನವೆಂಬರ್) ಈ ಆಫರ್ ಲಭ್ಯವಿರುತ್ತದೆ. ದೀಪಾವಳಿ ಕೊಡುಗೆಯ ಲಾಭವಾಗಿ ರೂ.700 ಮೌಲ್ಯದ ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು ಬಳಕೆದಾರರಿಗೆ ಜಿಯೋ ನೀಡಲಿದೆ. ಜಿಯೋ ಪೋನ್ ಕೊಳ್ಳುವ ಗ್ರಾಹಕರು ಮೊದಲು ಮಾಡಿಸುವ 7 ರೀಚಾರ್ಜ್ಗ್ಳಲ್ಲಿ ಜಿಯೋ ಹೆಚ್ಚುವರಿಯಾಗಿ ಪ್ರತಿ ರೀಚಾರ್ಜ್ಲ್ಲಿ (ರೂ. 99 * 7) ರೂ.99 ಮೌಲ್ಯದ ಡೇಟಾವನ್ನು ಉಚಿತವಾಗಿ ಸೇರಿಸುತ್ತದೆ. ಇದರಿಂದಾಗಿ ರೂ.700 ಮೌಲ್ಯದ ಹೆಚ್ಚುವರಿ ಡೇಟಾವು ಜಿಯೋಫೋನ್ ಬಳಕೆದಾರರಿಗೆ ದೊರೆಯಲಿದೆ. ಈ ಲಾಭದಿಂದಾಗಿ ಫೀಚರ್ ಪೋನ್ ಬಳಕೆದಾದರರು ಇನ್ನು ಮುಂದೆ ಮನರಂಜನೆ, ಪಾವತಿ, ಇ-ಕಾಮರ್ಸ, ಶಿಕ್ಷಣ, ಕಲಿಕೆ, ರೈಲು ಮತ್ತು ಬಸ್ ಬುಕಿಂಗ್ ಮತ್ತು ಇನ್ನೂ ಹೆಚ್ಚಿನ ಲಾಭವನ್ನು ಜಿಯೋ ಫೋನ್ನಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.