ಸಜ್ಜನ ರಾಜಕಾರಣಿ, ಸಾಹಿತಿ ಸ. ಪ. ಗಾಂವಕರ ಅವರು

ಸಂಸ್ಮರಣಾ ದಿನ ಅಂಗವಾಗಿ ಲೇಖನ  


ಉತ್ತರ ಕನ್ನಡ ಜಿಲ್ಲೆ ಹೆಮ್ಮೆಯಿಂದ ಸ್ಮರಿಸಿಕೊಳ್ಳಬಹುದಾದ ವ್ಯಕ್ತಿ ಶ್ರೀ ಸಣ್ಣಪ್ಪ ಪರಮೇಶ್ವರ ಗಾಂವಕರ ಅವರು. ಅವರು ಕವಿಯೂ ಹೌದು, ರಾಜಕಾರಣಿಯೂ ಹೌದು. ಆದರೆ ಇಂದಿನ ರಾಜಕಾರಣಿಗಳಿಗೆ ಅವರನ್ನು ಹೋಲಿಸುವಂತಿಲ್ಲ.   

ಕುಮಟಾ ಅಂಕೋಲಾ ನಡುವಿನ ತೊರ್ಕೆ ಗ್ರಾಮದಲ್ಲಿ 1885 ರ ಜನೆವರಿ 11 ರಂದು ಜನಿಸಿದ ಗಾಂವಕರರು ತಮ್ಮ 40ನೇ ವಯಸ್ಸಿನಲ್ಲಿ ಸಾಂಗಲಿ ವಿಲ್ಲಿಂಗ್ಡನ್ ಕಾಲೇಜಿನಲ್ಲಿ ಪದವಿ ಪಡೆದು, ಹುಬ್ಬಳ್ಳಿ ಮುನಸಿಪಾಲಿಟಿಯ ಅಧಿಕಾರಿಯಾಗಿ ಸ್ಕೂಲಬೋರ್ಡ್‌ ಆಡಳಿತಾಧಿಕಾರಿಯಾಗಿ ಕೆಲ ಕಾಲ ಕೆಲಸ ಮಾಡಿ ನಂತರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡು ಜೈಲಿಗೆ ಹೋಗಿ ಬಂದು  ಆ ಮೇಲೆ ಸ್ವರಾಜ್ ಪಕ್ಷ ಸೇರಿ ರಾಜಕೀಯಕ್ಕೂ ಕಾಲಿಟ್ಟ ಅವರು 1952ರಲ್ಲಿ ಚುನಾವಣೆಗೆ ನಿಂತುಆರಿಸಿಬಂದರು. ಅವರನ್ನು ಮುಂಬಯಿ ಸರಕಾರದ  ಮುಖ್ಯಮಂತ್ರಿ ಬಿ. ಜಿ. ಖೇರ್ ಅವರು ಡೆಪ್ಯುಟಿ ಮಿನಿಸ್ಟರ್ ಆಗಿ ಸೇರಿಸಿಕೊಂಡರು.   

ಮೂಲತಃ ಕವಿಹೃದಯಿಗಳಾಗಿದ್ದ ಸಪ ಅವರು ರವೀಂದ್ರನಾಥ ಟಾಗೋರರ ಗೀತಾಂಜಲಿಯನ್ನು 1962ರಲ್ಲಿ  ಕನ್ನಡಕ್ಕೆ ಅನುವಾದಿಸಿದರು. ಅವರ ಇತರ ಕೃತಿಗಳು ಮುಗಿಲು, ರೈತರ ಗೋಳು, ಪ್ರಕೃತಿ ಪ್ರೀತಿ, ಪ್ರೇರಣೆ ಶೋಧನೆ  ಕವನ ಸಂಕಲನಗಳು ನಾಡಕಲೆ  ಪುಸ್ತಕ ಇತ್ಯಾದಿ.   

1936ರಲ್ಲಿ ಗೋಕರ್ಣದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಂಘಟನೆಯಲ್ಲಿ ಅವರದು ಪ್ರಮುಖ ಪಾತ್ರವಿತ್ತು. ಅಂಕೋಲೆಯಲ್ಲಿ ಗಾಂಧೀ ನಿವಾಸ,  ಅರವಿಂದಾಶ್ರಮ ವಸತಿ ನಿಲಯ, ಶೆಟಗೇರಿ ಸತ್ಯಾಗ್ರಹ ಸ್ಮಾರಕ ಹೈಸ್ಕೂಲುಗಳ ಸ್ಥಾಪನೆಗೆ ಅವರೆ ಕಾರಣರೆನಿಸಿದರು.   

1972ರಲ್ಲಿ ಅವರು ನಿಧನ ಹೊಂದಿದರು.   

            - * * * * -