ಲೋಕದರ್ಶನ ವರದಿ
ಬೆಳಗಾವಿ,10 : ಇತ್ತೀಚಿಗೆ ತುಮಕೂರಿನ ಸಿದ್ದಗಂಗ ಸ್ಕೂಲ್ ಆಫ್ ಆಕರ್ಿಟೆಕ್ಚರ್ ಆಯೋಜಿಸಿದ್ದ ನ್ಯಾಷನಲ್ ಅಸೋಸಿಯೇಷನ್ ಆಫ್ ಸ್ಟೂಡೆಂಟ್ಸ್ ಆಫ್ ಆಕರ್ಿಟೆಕ್ಚರ್(ನಾಸಾ)ದ 61 ನೇಯ ವಲಯ ಮಟ್ಟದ ಮೇಳದಲ್ಲಿ ಬೆಳಗಾವಿಯ ಕೆ ಎಲ್ ಎಸ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾಥರ್ಿಗಳು ಭಾಗವಹಿಸಿ 7 ಪ್ರಶಸ್ತಿಗಳೊಂದಿಗೆ ಜನರಲ್ ಚಾಂಪಿಯನಶೀಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಜಿ ಐ ಟಿ ವಿದ್ಯಾಥರ್ಿಗಳ ಅಕಾಡೆಮಿಕ್ ಗೆ ಸಂಬಂಧಿಸಿದ ಪ್ರಾಜೆಕ್ಟ್ ನಲ್ಲಿ ರೆಬುನ್ಸ್ ಟ್ರೋಫಿ ನಲ್ಲಿ ಪ್ರಥಮ ಸ್ಥಾನ, ಡಿಸೈನ್ ನ ಪ್ರಥಮ ಮತ್ತು ದ್ವಿತೀಯ ವಿಭಾಗದಲ್ಲಿ, ಕಿರು ಚಿತ್ರ ಹಾಗೂ ಫ್ಯಾಷನ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ನೃತ್ಯ ಮತ್ತು ಫೋಟೋಗ್ರಾಫಿ ವಿಭಾಗದಲ್ಲಿ ಮೊದಲ ಎಂಟರಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ವಿದ್ಯಾಥರ್ಿಗಳಿಗೆ ಪ್ರೊ. ನಿಶಿತಾ ತಡಕೋಡ್ಕರ್, ಪ್ರೊ. ಅಮಿತ್ ಪ್ರಸಾದಿ, ಪ್ರೊ. ಪಿ. ಏನ್. ನಾವಳೇಕರ್ ಹಾಗೂ ಪ್ರೊ.ಬಿ. ವಿ. ಗೌರಿಪುರ್ ಮಾರ್ಗದರ್ಶನ ನೀಡಿದ್ದರು.
ಇದರಲ್ಲಿ ಕನರ್ಾಟಕ ರಾಜ್ಯದ ಪ್ರತಿಷ್ಠಿತ ಆಕರ್ಿಟೆಕ್ಚರ್ ಕಾಲೇಜುಗಳಾದ ಎಂ. ಎಸ. ರಾಮಯ್ಯ, ವಿಶ್ವೇಶ್ವರಯ್ಯ ಯೂನಿವಸರ್ಿಟಿ ಕಾಲೇಜು, ಆಚಾರ್ಯ ಕಾಲೇಜು, ಹುಬ್ಬಳಿಯ ಕೆ ಎಲ್ ಈ ತಾಂತ್ರಿಕ ಮಹಾವಿದ್ಯಾಲಯ, ಬಿ ಎಂ ಎಸ ಕಾಲೇಜು, ದಯಾನಂದ ಕಾಲೇಜು ಆಫ್ ಇಂಜಿನಿಯರಿಂಗ್, ವಿಜಯಪುರದ ಬಿ ಎಲ್ ಡಿ ಇ ಕಾಲೇಜು ಸೇರಿದಂತೆ ಮಹಾರಾಷ್ಟ್ರ, ಗೋವಾ ಮತ್ತು ಆಂಧ್ರಪ್ರದೇಶದ ಹಾಗೂ ರಾಷ್ಟ್ರದ ಅನೇಕ ಕಡೆಗಳಿಂದ ಸುಮಾರು 50ಕ್ಕಿಂತ ಹೆಚ್ಚು ಪ್ರತಿಷ್ಠಿತ ಆಕರ್ಿಟೆಕ್ಚರ್ ಕಾಲೇಜು ಗಳಿಂದ ಸುಮಾರು 1000 ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.
ಇದು ಕೇವಲ ಸ್ಪಧರ್ಾ ಮೇಳವಾಗದೆ ವಾಸ್ತುಶಿಲ್ಪಕ್ಕೆ ಸಂಬಂಧಿಸಿದಂತೆ ಹೊಸ ಪರಿಕಲ್ಪನೆಗಳ ಬಗ್ಗೆ ಕಾಯರ್ಾಗಾರ ಮತ್ತು ಉಪನ್ಯಾಸ ಮಾಲಿಕೆಯನ್ನು ಆಯೋಜಿಸಿದ್ದರು. ಇದರಲ್ಲಿ ಪ್ರಖ್ಯಾತ ವಾಸು ಶಿಲ್ಪ ತಜ್ಞರಾದ ಶ್ರೀಲನಕದಿಂದ ಆಗಮಿಸಿದ್ದ ವಾಸ್ತುಶಿಲ್ಪಿ. ಪಾಲಿಂದಾ, ವಾಸ್ತುಶಿಲ್ಪಿ ಕೃಷ್ಣ ರಾವ್ ಜೈಸಿಂ, ವಾಸ್ತುಶಿಲ್ಪಿ ನಾಗರಾಜ್ ವಾಸ್ತ್ರೇಯ, ವಾಸ್ತುಶಿಲ್ಪಿ ಸತ್ಯ ಪ್ರಕಾಶ ವಾರಣಾಶಿ ಹಾಗೂ ವಾಸ್ತುಶಿಲ್ಪಿ ಚೇತನ್ ಶಿವಪ್ರಸಾದ್ ಹಾಗೂ ಇತರೇ ಗಣ್ಯರು ತಮ್ಮ ಅನುಭವನ್ನು ವಿದ್ಯಾಥರ್ಿಗಳಿಗೆ ಧಾರೆಯೆರೆದರು.
ಜಿಐಟಿ ವಿದ್ಯಾಥರ್ಿಗಳ ಈ ಸಾಧನೆಯನ್ನು ಕೆ ಎಲ್ ಎಸ ಸಂಸ್ಥೆಯ ಚೇರಮನ್ ಎಂ ಆರ್ ಕುಲಕಣರ್ಿ, ಆಡಳಿತ ಮಂಡಳಿ ಚೇರಮನ್ ಯು. ಏನ್. ಕಾಲಕುಂದ್ರಿಕರ್, ಸಂಸ್ಥೆಯ ಸದಸ್ಯರು, ಪ್ರಾಂಶುಪಾಲರಾದ ಡಾ. ಎ. ಎಸ. ದೇಶಪಾಂಡೆ, ವಾಸ್ತುಶಿಲ್ಪ ವಿಭಾಗದ ಮುಖ್ಯಸ್ಥರಾದ ಪ್ರೊ. ನಿಶಿತಾ ಆರ್. ತಡಕೋಡ್ಕರ್ ಸಿಬ್ಬಂದಿ ವರ್ಗ ಮತ್ತು ವಿದ್ಯಾಥರ್ಿಗಳು ಶ್ಲಾಘಿಸಿ ಅಭಿನಂದಿಸಿದ್ದಾರೆ.