ಬೆಳಗಾವಿ: ರೆಡ್ ಕ್ರಾಸ್ ಸಂಸ್ಥೆಯು ರಕ್ತದಾನ ಶಿಬಿರ, ವಿಕಲಚೇತನರಿಗೆ ಸಾಧನ ಸಲಕರಣೆಗಳ ವಿತರಣೆ, ಪ್ರಥಮ ಚಿಕಿತ್ಸಾ ತರಬೇತಿ, ನೇತ್ರ ತಪಾಸಣಾ ಶಿಬಿರ ಮುಂತಾದ ಸಮಾಜ ಮುಖಿ ಕಾರ್ಯಗಳನ್ನು ಮಾಡುವುದರ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಎಸ್. ಜಿಯಾವುಲ್ಲಾ ಅವರು ತಿಳಿಸಿದರು.
ನಗರದ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಐ.ಎಮ್.ಎ. ಸಭಾಂಗಣದಲ್ಲಿ ಇಂದು ಬುಧವಾರ (ಜುಲೈ 25) ಏರ್ಪಡಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾಷರ್ಿಕ ಸರ್ವ ಸಾಧಾರಣ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿವರ್ಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್.ರವರು ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘಿಸಿ ವಿದ್ಯಾಥರ್ಿಗಳಿಗೆ ರಕ್ತದಾನದ ಮಹತ್ವವನ್ನು ತಿಳಿಸಿ ರಕ್ತದಾನ ಮಾಡಲು ಯುವಕರು ಮುಂದೆ ಬರಬೇಕೆಂದು ಕರೆ ನೀಡಿದರು.
ಸಂಸ್ಥೆಯ ಚೇರಮನರಾದ ಡಾ.ಎಸ್.ಬಿ.ಕುಲಕಣರ್ಿರವರು ಮಾತನಾಡಿ, ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ತಿಳಿಸುತ್ತಾ ಬೆಳಗಾವಿ ಜಿಲ್ಲಾ ಶಾಖೆಯು ಸತತವಾಗಿ ನಾಲ್ಕು ಬಾರಿ ರಾಜ್ಯದ ಅತ್ಯುತ್ತಮ ಶಾಖೆ ಎಂದು ಪ್ರಶಸ್ತಿಗೆ ಭಾಜನವಾಗಿದೆೆ ಎಂದು ತಿಳಿಸಿದರು.
ಸಂಸ್ಥೆಯ ಜಂಟಿಕಾರ್ಯದಶರ್ಿಗಳಾದ ಡಾ.ಡಿ.ಎನ್.ಮಿಸಾಳೆ ಅವರು 2015-16 ನೇ ಸಾಲಿನ ನಡಾವಳಿಗಳನ್ನು ಓದಿದರು. ಸಂಸ್ಥೆಯ ಸದಸ್ಯರಾದ ಜಿ.ಬಿ.ಈರಪ್ಪಗೋಳ ಅವರು 2016-17 ಮತ್ತು 2017-18 ನೇ ಸಾಲಿನ ಪ್ರಗತಿ ವರದಿಯನ್ನು ಮಂಡಿಸಿದರು.
ಸಂಸ್ಥೆಯ ಖಜಾಂಚಿಗಳಾದ ಶ್ರೀಮತಿ ವಿನೋದಿನಿ ಶಮರ್ಾರವರು 2016-17 ಮತ್ತು 2017-18 ನೇ ಸಾಲಿನ ಆಡಿಟ್ ವರದಿಯನ್ನು ಓದಿದರು. ಪ್ರಥಮ ಚಿಕಿತ್ಸಾ ತರಬೇತಿಯ ಪಡೆದುಕೊಂಡವರಿಗೆ ಸಭೆಯಲ್ಲಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಸಂಸ್ಥೆಯ ವೈಸ್ ಚೇರಮನರಾದ ಡಾ. ವಿ.ಡಿ.ಡಾಂಗಿಯವರು ಸಭೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮರಾಠಾ ಮಂಡಲ ಪಾಲಿಟೆಕ್ನಿಕ್ ಕಾಲೇಜಿನ ವಿಧ್ಯಾಥರ್ಿಗಳು ಸ್ವಾಗತ ಗೀತೆಯನ್ನು ಹಾಡಿದರು. ಸಂಸ್ಥೆಯ ಕಾರ್ಯದಶರ್ಿಗಳಾದ ವಿಕಾಸ ಕಲಘಟಗಿರವರು ವಂದಿಸಿದರು. ಬೆಳಗಾವಿ ಜಿಲ್ಲೆಯ ವಿವಿಧ ಕಾಲೇಜಗಳಿಂದ ಆಗಮಿಸಿದ ಯುಥ ರೆಡ್ ಕ್ರಾಸ್ ಘಟಕದ ಸಂಯೋಜಕರು, ಹಾಗೂ ಸ್ವಯಂ ಸೇವಕರು ಮತ್ತು ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಸಭೆಯಲ್ಲಿ ಹಾಜರಿದ್ದರು.