ತಾಲೂಕ ಪಂಚಾಯತ ಸಾಮಾನ್ಯ ಸಭೆ ಶುದ್ಧ ಕುಡಿಯುವ ನೀರಿನ ಘಟಕಗಳು ಗೊಂಡ ಬಗ್ಗೆ ಆಕ್ಷೇಪ

ತಾಲೂಕ ಪಂಚಾಯತ ಸಾಮಾನ್ಯ ಸಭೆ
ಶುದ್ಧ ಕುಡಿಯುವ ನೀರಿನ ಘಟಕಗಳು ಗೊಂಡ ಬಗ್ಗೆ ಆಕ್ಷೇಪ
ಲೋಕದರ್ಶನ ವರದಿ
ಹಳಿಯಾಳ,01: ಗ್ರಾಮಾಂತರ ಭಾಗದ ಜನರಿಗೆ ಶುದ್ಧ ಕುಡಿಯುವ ನೀರನ್ನು ನೀಡುವ ಸದುದ್ದೇಶದಿಂದ ಆರಂಭಗೊಳಿಸಿರುವ ಶುದ್ಧ ನೀರಿನ ಘಟಕಗಳು ಸ್ಥಗಿತಗೊಂಡ ಕಾರಣ ಅವುಗಳನ್ನು ಸ್ಥಾಪಿಸಿರುವ ಉದ್ದೇಶ ಈಡೇರಿಕೆಯಾಗಿಲ್ಲ ಎಂದು ತಾಲೂಕ ಪಂಚಾಯತ ಸದಸ್ಯರು ಆಕ್ಷೇಪಿಸಿದ್ದಾರೆ.
	ತಾಲೂಕ ಪಂಚಾಯತ ಅಧ್ಯಕ್ಷೆ ರೀಟಾ ಸಿದ್ಧಿ ಅವರ ಅಧ್ಯಕ್ಷತೆಯಲ್ಲಿ ತಾಲೂಕ ಪಂಚಾಯತ ಸಭಾಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಕುರಿತು ಚಚರ್ಿಸಲಾಯಿತು. ಕುಡಿಯುವ ನೀರು ಶುದ್ಧಗೊಳಿಸದೇ ಕುಡಿಯುವದರಿಂದ ಅನೇಕ ರೋಗಗಳು ಬರುತ್ತಿದ್ದು ಜನರು ಶುದ್ಧ ನೀರನ್ನು ಕುಡಿಯುವ ಮೂಲಕ ಕುಡಿಯುವ ನೀರಿನಿಂದ ಬರಬಹುದಾದ ರೋಗಗಳನ್ನು ಬರದಂತೆ ತಡೆಗಟ್ಟಲು ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಆರಂಭಿಸಲಾದ ಶುದ್ಧ ಕುಡಿಯುವ ನೀರಿ ಘಟಕಗಳು ಸುಸ್ಥಿತಿಯಲ್ಲಿ ಇರದೇ ಇರುವುದು ನೋವಿನ ಸಂಗತಿಯಾಗಿದೆ ಎಂದು ಸರ್ವ ಸದಸ್ಯರು ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದರು.
  ಕಾರ್ಯನಿರ್ವಹಣಾಧಿಕಾರಿ ಡಾ.ಮಹೇಶ ಕುರಿಯವರ ಇದಕ್ಕೆ ಉತ್ತರಿಸುತ್ತಾ ಗ್ರಾಮಾಂತರ ಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಈವರೆಗೆ ತಾಲೂಕ ಪಂಚಾಯತಗೆ ಹಸ್ತಾಂತರಿಸಿಲ್ಲ. ಹೀಗಾಗಿ ಅವುಗಳ ನಿರ್ವಹಣೆಯನ್ನು ಮಾಡಲು ನಮಗೆ ತಾಂತ್ರಿಕ ಅಡೆತಡೆಯಾಗುತ್ತಿದೆ ಎಂದರು. 
	ಜಿಲ್ಲಾ ಪಂಚಾಯತ ಇಂಜಿನೀಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿವರ್ಾಹಕ ಇಂಜಿನೀಯರ್ ಎ.ಸಿ. ಹಳೇಮನಿ ಈ ಬಗ್ಗೆ ಸ್ಪಂದಿಸಿ ಮಾತನಾಡಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿದ ಗುತ್ತಿಗೆದಾರರು ಐದು ವರ್ಷ ಇವುಗಳನ್ನು ನಿರ್ವಹಣೆ ಮಾಡುವ ಕರಾರು ಇದೆ. ಆದರೆ ಅವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲವಾಗಿದ್ದರಿಂದ ಸಮಸ್ಯೆ ಉದ್ಭವಿಸಿದೆ ಎಂದು ತಿಳಿಸಿದರು.
	ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ಹಾಗೂ ಕಾರ್ಯಗಳನ್ನು ಸಭೆಯಲ್ಲಿ ವಿವರಿಸಿದರು.
	ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳಲು ಅತಿ ವಿಳಂಬವಾಗುತ್ತಿರುವ ಬಗ್ಗೆ ಸಭೆಯಲ್ಲಿ ಚಚರ್ಿಸಲಾಯಿತು.
	ಇತ್ತೀಚೆಗೆ ಅಗಲಿದ ಕೇಂದ್ರ ಸಚಿವ ಅನಂತಕುಮಾರ, ಮಾಜಿ ಸಂಸದ ಅಂಬರೀಶ, ಮಾಜಿ ಸಚಿವ ಜಾಫರ ಶರೀಫ ಇವರುಗಳ ನಿಧನಕ್ಕೆ ಸಭೆ ಶೋಕ ವ್ಯಕ್ತಪಡಿಸಿತು.
	ಉಪಾಧ್ಯಕ್ಷೆ ನೀಲವ್ವಾ ಮಡಿವಾಳ, ಸ್ಥಾಯಿ ಸಮಿತಿ ಚೇರಮನ್ ದಯಾನಂದ ಜಾವಳೇಕರ ವೇದಿಕೆಯಲ್ಲಿದ್ದರು. ಸದಸ್ಯರಾದ ಬಾಳು ಪಾಟೀಲ, ದೇಮಾಣಿ ಶಿರೋಜಿ, ಜಯಶ್ರೀ ಸುಭಾಸ ಗಾವಡೆ, ಲಕ್ಷ್ಮೀ ಪೀಶಪ್ಪಾ ಹರಿಜನ, ಸವಿತಾ ಮಾಳ್ವಿ, ಮೋಹನ ನಾಕಾಡಿ ಸಭೆಯಲ್ಲಿ ಪಾಲ್ಗೊಂಡಿದ್ದರು.