ಬೆಳಗಾವಿ: ಲಿಂಗಾಯಿತ ನಾಯಕರಿಗೆ ಇತಿಹಾಸದ ಪುಟಗಳಲ್ಲಿ ಸಿಗಬೇಕಾದ ಸ್ಥಾನಮಾನ ಸಿಗಲಿಲ್ಲ

ಲೋಕದರ್ಶನ ವರದಿ

ಬೆಳಗಾವಿ 08:  ರಾಷ್ಟ್ರ ನಿಮರ್ಾಣದಲ್ಲಿ  ಅಪಾರ ಕೊಡುಗೆಯನ್ನು ನೀಡಿದ ಹಲವಾರು ಲಿಂಗಾಯತ ನಾಯಕರಿಗೆ ಸಿಗಬೇಕಾದ ಗೌರವ ಪ್ರಚಾರ ಸಿಗಲಿಲ್ಲ. ಹಲವಾರು ಸಂದರ್ಭಗಳಲ್ಲಿ ಪಟ್ಟಭದ್ರ ಹಿತಾಸಕ್ತಿಯ ವ್ಯಕ್ತಿಗಳಿಂದ ಲಿಂಗಾಯತ ಮುಖಂಡರಿಗೆ ಇತಿಹಾಸದಪುಟಗಳಲ್ಲಿ ಸಿಗಬೇಕಾದ ಸ್ಥಾನಮಾನ ಸಿಗಲಿಲ್ಲ ಎಂದು ಬೈಲಹೊಂಗಲ ತಾಲೂಕಿನ ತುರುಕರಶೀಗಿಹಳ್ಳಿಯ ಪ್ರೌಢಶಾಲಾ ಶಿಕ್ಷಕರಾದ ಶ್ರೀ ಮಹೇಶ ನೀಲಕಂಠ ಚನ್ನಂಗಿ ಇಂದಿಲ್ಲಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭೆ(ರಿ) ಜಿಲ್ಲಾ ಘಟಕ  ಹಾಗೂ ರಾಷ್ಟ್ರೀಯ ಬಸವಸೇನಾ ಜಿಲ್ಲಾ ಘಟಕ ಬೆಳಗಾವಿ ಸಂಯುಕ್ತ ಆಶ್ರಯದಲ್ಲಿ ಜೂನ್ ದಿ. 3 ಸೋಮವಾರದಂದು ಸಾಯಂಕಾಲ 6 ಕ್ಕೆ ಮಹಾಂತೇಶನಗರದಲ್ಲಿರುವ ಮಹಾಂತ ಭವನದಲ್ಲಿ ಮಾಸಿಕ ಅನುಭಾವ ಸಂತ್ಸಂಗ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಮಹೇಶ ಚನ್ನಂಗಿಯವರು ಮೇಲಿನಂತೆ ಅಭಿಪ್ರಾಯ ವ್ಯಕ್ತ ಪಡಿಸಿದರು.. 

ಮುಂದೆ ಮಾತನಾಡುತ್ತ ಅವರು ಮುಂಬಯಿ ಸರಕಾರದಲ್ಲಿ 7 ಖಾತೆಯನ್ನು ಹೊಂದಿ ಸಚಿವರಾಗಿ ಸೇವೆ ಸಲ್ಲಿಸಿದ ಸರ್ ಸಿದ್ದಪ್ಪ ಕಂಬಳಿಯವರು ಧಾರವಾಡದ ಕನರ್ಾಟಕ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ಬಹು ಮುಖ್ಯವಾದ ಪಾತ್ರವಿದ್ದು ಇತಿಹಾಸದ ಪುಟಗಳಲ್ಲಿ ಸರಿಯಾಗಿ ದಾಖಲಾಗದಿರುವದು ಖೇದಕರ. ಕನರ್ಾಟಕ ಕಾಲೇಜು ಸ್ಥಾಪನೆಗೆ ಧನಸಹಾಯ ಮಾಡಿದ ಆಟರ್ಾಳ ರುದ್ರಗೌಡರಿಗೆ ಸಿಗಬೇಕಾದ ಗೌರವ ಇತಿಹಾದಲ್ಲಿ ಸಿಗಲಿಲ್ಲ. ಹೀಗೆ ಹಲವಾರು ಸಂದರ್ಭಗಳಲ್ಲಿ ಪಟ್ಟ ಭದ್ರ ಹಿತಾಸಕ್ತಿಯ ವ್ಯಕ್ತಿಗಳಿಂದ ಲಿಂಗಾಯತ ಮುಖಂಡರಿಗೆ ಇತಿಹಾಸದಪುಟಗಳಲ್ಲಿ ಸಿಗಬೇಕಾದ ಸ್ಥಾನಮಾನ ಸಿಗಲಿಲ್ಲ. 2000 ಮಹಿಳೆಯರ ಮಹಿಳಾ ಸೈನ್ಯ ಕಟ್ಟಿದ ಪ್ರಥಮ ಮಹಿಳೆ ಬೆಳವಡಿ ಮಲ್ಲಮ್ಮ ರವರಿಗೆ ಇತಿಹಾಸದ ಪುಟಗಳಲ್ಲಿ ಲಿಂಗಾಯತ ಮಹಿಳೆ ಎಂಬ ಕಾರಣಕ್ಕಾಗಿ ಸರಿಯಾದ ಸ್ಥಾನ ಸಿಕ್ಕಿಲ್ಲವೆಂದು ಅವರು ಹೇಳಿದರು. 

ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿದ್ದ ಪ.ಪೂ.ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತೋಂಟದಾರ್ಯ ಜಗದ್ಗುರು ಪೀಠ ಗದಗ- ಡಂಬಳ ಮತ್ತು ರುದ್ರಾಕ್ಷಿ ಮಠ ರವರು ಅಶೀರ್ವಚನ ನೀಡಿದರು.ಅಗಸ್ಟ್ 1ರಿಂದ 30ರವರೆಗೆ ಸಹಮತ ವೇದಿಕೆ ಮಠ ಸಾಣೇಹಳ್ಳಿಯ ಡಾ.ಪಂಡಿತಾರಾದ್ಯ ಸ್ವಾಮಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡ " ಮತ್ತೆ ಕಲ್ಯಾಣ " ಕಾರ್ಯಕ್ರಮದ ಯಶಸ್ವಿಯಾಗಿ ನಡೆಸಲು ತನು ಧನ ಮನದ ಸಹಕಾರ ನೀಡಬೇಕೆಂದು ಕರೆ ನೀಡಿದರು.  

ಹಿರೇಬಾಗೆವಾಡಿಯ ಅಡವೇಶ ಇಟಗಿ ದಂಪತಿಗಳು ಷಟ್ ಸ್ಥಲ ಧ್ವಜಾರೋಹಣ ನೆರವೇರಿಸಿದರು.ಅಧ್ಯಕ್ಷತೆಯನ್ನು ಅರವಿಂದ ಪರುಶೆಟ್ಟಿಯವರು ವಹಿಸಿದ್ದರು.ಬಸವರಾಜ ಚಟ್ಟರ ಪ್ರಾಸ್ತಾವಿಕ ಮಾತುಗಳೊಂದಗೆ ಸ್ವಾಗತಿಸಿದರು. ಜಯಕ್ಕ ಚವಲಗಿ ರವರು ವಂದಿಸಿದರು. ಆನಂದ ಕಕರ್ಿ ನಿರೂಪಿಸಿದರು. ಹಲವಾರು ಬಸವತತ್ವ ಅನುಯಾಯಿಗಳು ಉಪಸ್ಥಿತರಿದ್ದರು.