ಗಜಾನನ ಮಹಾಲೆಯವರಿಗೆ ಪ್ರಸಾದನ ಕಲೆ ದೈವದತ್ತ ಕೊಡುಗೆ

ಧಾರವಾಡ 23: ಗಜಾನನ ಮಹಾಲೆಯವರನ್ನು ನಾನು ಸುಮಾರು 1971 ರಿಂದ ನನ್ನ ವಿದ್ಯಾರ್ಥಿ  ಜೀವನದಿಂದಲೇ ಚೆನ್ನಾಗಿ ಬಲ್ಲವನಾಗಿದ್ದೇನೆ. ನಾನು ಅಭಿನಯಿಸಿದ ಮೊದಲನೇ ನಾಟಕಕ್ಕೆ ಗಜಾನನ ಮಹಾಲೆಯವರೆ  ಪ್ರಸಾದನ ಮಾಡಿದ್ದರು. ಅಲ್ಲಿಂದ  ಪ್ರಾರಂಭವಾದ ನನ್ನ ರಂಗಪಯಣ ಇನ್ನೂ ನಿಂತಿಲ್ಲ. ಗಜಾನನ ಮಹಾಲೆಯವರಿಗೆ ಪ್ರಸಾದನ ಕಲೆ ದೈವದತ್ತವಾಗಿ ಬಂದ ಕೊಡುಗೆಯಾಗಿದೆ. ಇವರಿಗೆ ಪಾತ್ರಗಳ ಪರಿಚಯ ಮಾಡಿ ವ್ಯಕ್ತಿಗಳನ್ನು ಅವರ ಮುಂದೆ ಕೂಡಿಸಿಬಿಟ್ಟರೆ ಆಯಿತು, ಆ ವ್ಯಕ್ತಿಗಳನ್ನು ನೋಡಿಬಿಟ್ಟರೆ ಪಾತ್ರಗಳ ಪರಿಚಯವಾಗುತ್ತಿದ್ದವು. ಗಜಾನನ ಮಹಾಲೆಯವರು ಅತ್ಯಂತ ಬಡತನದಲ್ಲಿ ಬಂದಂತ ಧೀಮಂತ ವ್ಯಕ್ತಿ. ಎಂದೂ, ಯಾರಿಗೂ ಕೈಒಡ್ಡಿದವರಲ್ಲ. ಸಾವಿರಾರು  ನಾಟಕಗಳಿಗೆ, ಚಿತ್ರರಂಗಕ್ಕೆ, ನಾಟ್ಯಗಳಿಗೆ ಪ್ರಸಾಧನವನ್ನು ಮಾಡಿದವರು ಎಂದು ಧಾರವಾಡ ರಂಗಾಯಣ ಮಾಜಿ ನಿರ್ದೇ ಶಕ ಸುಭಾಶ ನರೇಂದ್ರ ಹೇಳಿದರು.

ಕರ್ನಾ ಟಕ ವಿದ್ಯಾವರ್ಧಕ ಸಂಘವು, ಶಂಕರ ಚ. ಹಲಗತ್ತಿಯವರು ಇರಿಸಿದ `ಗಜಾನನ ಮಹಾಲೆ ದತ್ತಿ' ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ `ರಂಗಭೂಮಿಯಲ್ಲಿ ನಾನು ಕಂಡಂತೆ ಮಹಾಲೆ' ವಿಷಯ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು. 

ಗಜಾನನ ಮಹಾಲೆಯವರು ಯಾರಿಗೂ, ಎಂದಿಗೂ ದುಡ್ಡು ಕೊಟ್ಟರೆ ಮಾತ್ರ ಬಂದು ಮೇಕಪ್ ಮಾಡುತ್ತೇನೆ ಎಂದು ಹೇಳಿದವರಲ್ಲ. ಅವರಿಗೆ ಒಂದು ಪೊಸ್ಟ್ ಕಾರ್ಡನ್ನು ಬರೆದು ಎಲ್ಲಿ ಯಾವಾಗ ನಾಟಕವಿದೆ ಎನ್ನುವ ವಿಳಾಸವನ್ನು ನೀಡಿದರೆ ಸಾಕು ಸರಿಯಾದ ವೇಳೆಗೆ ಎಲ್ಲರಿಗಿಂತ ಮೊದಲು ಅಲ್ಲಿ ಉಪಸ್ಥಿತರಿರುತ್ತಿದ್ದರು.  ಇಂತಹ ಧೀಮಂತ ವ್ಯಕ್ತಿಗೆ ನಿರೀಕ್ಷೆಯಷ್ಟು ಮನ್ನಣೆ ಸಿಗಲಿಲ್ಲ. ಕಾಯಾ-ವಾಚಾ-ಮನಸಾ ತಮ್ಮ ವೃತ್ತಿಯನ್ನು ಪ್ರೀತಿಯಿಂದ ಪೂಜಿಸಿದವರು. ಇಂತಹ ವ್ಯಕ್ತಿಗಳು ಸಿಗುವುದು ವಿರಳ. ಇವರು ಹಾಕಿಕೊಟ್ಟ ಮಾರ್ಗದಲ್ಲಿ ಇಂದು ಅವರ ಪುತ್ರ ಸಂತೋಷ ಮಹಾಲೆ ನಡೆಯುತ್ತಿರುವುದು ಸಂತೋಷದ ವಿಷಯ ಎಂದು ನರೇಂದ್ರ ಹೇಳಿದರು.

ಅತಿಥಿಗಳಾಗಿ ಆಗಮಿಸಿದ್ದ ಗಜಾನನ ಮಹಾಲೆ ಪ್ರತಿಷ್ಠಾನದ ಉಪಾಧ್ಯಕ್ಷ ಶಂಕರ ಕುಂಬಿ ಮತ್ತು ರಾಷ್ಟ್ರಪ್ರಶಸ್ತಿ  ಪುರಸ್ಕೃತ ಶಿಕ್ಷಕ ಕೆ.ಎಚ್. ನಾಯಕ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗಜಾನನ ಮಹಾಲೆ ಪ್ರತಿಷ್ಠಾನದ ಕಾರ್ಯದರ್ಶಿ  ಬಿ. ಆಯ್. ಈಳಿಗೇರ ಇವರು ಮಾತನಾಡಿ, ಮಹಾಲೆಯವರ ಸರಳತೆ, ವೃತ್ತಿಗೌರವ ಇತ್ಯಾದಿ ಅವರ ವ್ಯಕ್ತಿದ ಬಗ್ಗೆ ಕೊಂಡಾಡಿದರು. 

ಕಾರ್ಯಕ್ರಮದಲ್ಲಿ ದಿ. ಗಜಾನನ ಮಹಾಲೆಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆಯೊಂದಿಗೆ ಗೌರವ ಸಲ್ಲಿಸಲಾಯಿತು. ವೇದಿಕೆಯಲ್ಲಿ ಸಂಘದ ಕಾರ್ಯಾ ಧ್ಯಕ್ಷ ಶಿವಣ್ಣ ಬೆಲ್ಲದ ಹಾಗೂ ಸಂತೋಷ ಗಜಾನನ ಮಹಾಲೆ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ  ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು  ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ ತುರಮರಿ ನಿರೂಪಿಸಿ, ವಂದಿಸಿದರು. 

ನಂತರ ಸಂತೋಷ ಗಜಾನನ ಮಹಾಲೆ ರಚನೆ, ನಿರ್ದೇ ಶನದ, ಸಾಯಿ ಸಚ್ಛರಿತೆ ಮೂಲಕಥೆ ಆಧಾರಿತ `ಓ ಸಾಯಿ ಆವೋ ಸಾಯಿ' ನಾಟಕ ಹಾಗೂ ಮೇಘನಾ ಅಂಗಡಿ ಅವರಿಂದ ಭರತನಾಟ್ಯ ಪ್ರದರ್ಶನಗೊಂಡು ನೆರೆದ ಸಭೀಕರ ಮನಸೆಳೆಯಿತು.   

ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ(ಇಟಗಿ) ಹಾಗೂ ಮಲ್ಲಿಕಾರ್ಜು ನ ಚಿಕ್ಕಮಠ, ಪ್ರಭು ಹಂಚಿನಾಳ, ನಿಂಗಪ್ಪ ಮಾಯಕೊಂಡ, ಬಿ. ಆಯ್. ಈಳಿಗೇರ, ರಾಮಚಂದ್ರ ಧೋಂಗಡೆ, ಮಹಾಲೆ ಪರಿವಾರದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.