ಗಾಯಿತ್ರಿ ಪತ್ತಿನ ಸ. ಸಂಘದ ಅಧ್ಯಕ್ಷರಾಗಿ ರವೀಂದ್ರ ಕಲಬುರ್ಗಿ ಅವಿರೋಧ ಆಯ್ಕೆ

ಹುನಗುಂದ30: ಸೂಳೇಭಾವಿಯ ಪ್ರತಿಷ್ಠಿತ ಶ್ರೀ ಗಾಯಿತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕರಾಗಿ ರವೀಂದ್ರ ಪ್ರಲ್ಹಾದ ಕಲಬುರ್ಗಿ, ಉಪಾಧ್ಯಕ್ಷರಾಗಿ ಸಂಗಪ್ಪ ಲಕ್ಷ್ಮಪ್ಪ ಕರಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆರ್.ಎನ್. ಗಂಟಿ ತಿಳಿಸಿದರು.

ಗಾಯಿತ್ರಿ ಬ್ಯಾಂಕ್ಗೆ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ತಲಾ ಒಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಘೋಷಿಸಿದರು. ಚುನಾವಣಾಧಿಕಾರಿ ಆರ್.ಎನ್. ಗಂಟಿ ನೂತನ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಿಸಿದರು.

ಇದೇ ಸಂದರ್ಭದಲ್ಲಿ ಸಂಘದ ನೂತನ ಅಧ್ಯಕ್ಷ ರವೀಂದ್ರ ಕಲಬುರ್ಗಿ  ಪತ್ರಿಕೆಯೊಂದಿಗೆ ಮಾತನಾಡಿ, ಗ್ರಾಮೀಣ ಪ್ರದೇಶದ ಜನತೆಯ ಆರ್ಥಿಕ  ಸ್ಥಿತಿಗತಿ ಸುಧಾರಣೆ ಉದ್ದೇಶವಿಟ್ಟುಕೊಂಡು ಪ್ರಾರಂಭವಾದ ಗಾಯತ್ರಿ ಪತ್ತಿನ ಸಹಕಾರ ಸಂಘ ಇಂದು ಎಲ್ಲರ ಸಹಕಾರದೊಂದಿಗೆ 9 ಶಾಖೆಗಳನ್ನು ಹೊಂದಿವೆ. ಸಂಘವು ಪ್ರಸಕ್ತ ಸಾಲಿನಲ್ಲಿ ನೂರು ಕೋಟಿಯಷ್ಟು ದುಡಿಯುವ ಬಂಡವಾಳ ಹೊಂದಿರುತ್ತದೆ. ಈಗಾಗಲೇ 5 ಹೊಸ ಶಾಖೆಗಳನ್ನು ತೆರೆಯಲಿಕ್ಕೆ ಅನುಮತಿ ದೊರೆತಿದ್ದು, ಐತಿಹಾಸಿಕ ಪ್ರವಾಸಿ ಪಟ್ಟಣ ಬಾದಾಮಿ, ನರೇಗಲ್ಲ, ಶಿರೋಳ, ಬೆಟಗೇರಿ ಮತ್ತು ಬೆಳಗಲ್ಲ ಗ್ರಾಮೀಣ ಭಾಗದಲ್ಲಿನ ಶಾಖೆಗಳ ತೆರೆಯಲು ಸಿದ್ಧತೆ ನಡೆದಿದ್ದು, ಫನರ್ಿಚರ್ ಕಾರ್ಯ ಭರದಿಂದ ಸಾಗಿದೆ. ಈ ನಿಟ್ಟಿನಲ್ಲಿ ನೂತನ ಆಡಳಿತ ಮಂಡಳಿ ಕಾಯರ್ೋನ್ಮುಖವಾಗಿದೆ ಎಂದರು. ಬ್ಯಾಂಕು ಸ್ವಂತ ಕಟ್ಟಡ ಹೊಂದುವ ಉದ್ದೇಶದಿಂದ ಗ್ರಾಮದ ಬಸ್ಸ್ಟ್ಯಾಂಡ ಪಕ್ಕದಲ್ಲಿ ದೊಡ್ಡ ಜಾಗೆಯನ್ನು ಖರೀದಿಸಿದ್ದೇವೆ. ಬ್ಯಾಂಕಿನ ಪ್ರಗತಿದಲ್ಲಿ ಸಂತೋಷದಾಯಕ ವಿಷಯವೇನೆಂದರೆ ಅವಿರೋಧ ಆಯ್ಕೆ ಸಂತೋಷ ತಂದಿದೆ. ಈ ಬ್ಯಾಂಕಿಗೆ ಸರ್ವ ಸದಸ್ಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಂತೆ ಇರುವ ಭಾವನೆಯನ್ನು ಹೊಂದಿದ್ದೇವೆ ಎಂದರಲ್ಲದೇ, ಹತ್ತು ಜನ ಹಿರಿಯರ ತಂಡ ಕಣ್ಗಾವಲಾಗಿ ಕಾಲಕಾಲಕ್ಕೆ ತಮ್ಮ ತಮ್ಮ ಸಲಹೆ ಸೂಚನೆ ಕೊಟ್ಟು ಬ್ಯಾಂಕಿನ ಪ್ರಗತಿಗೆ ಶ್ರಮಿಸಿ, ಸಹಕಾರ ನೀಡಿದ್ದಾರೆ. ಅದರಂತೆ ಎಲ್ಲ ಶಾಖಾ ಕಛೇರಿಗಳ ಸಲಹಾ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರ ಪ್ರಾಮಾಣಿಕತೆ ಕಾರ್ಯದಿಂದ ಬ್ಯಾಂಕ ಪ್ರಗತಿ ಹೊಂದಲಿಕ್ಕೆ ಕಾರಣೀಕರ್ತರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಶಾಖೆಗಳನ್ನು ತೆರೆಯುವ ಗುರಿ ಹೊಂದಿದ್ದೇವೆ. ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವರಿಗೆ ಆರ್ಥಿಕ  ಸಹಕಾರ ನೀಡುವ ದೃಷ್ಠಿಯಿಂದ ಹೊಟೇಲ್ ಉದ್ದಮೆದಾರರು, ಕೂಲಿಕಾಮರ್ಿಕರು, ಕಾಯಿಪಲ್ಲೆ ಮಾರಾಟ ಮಾಡುವರಾಗಲಿ, ನೇಕಾರರಿಗಾಗಲಿ ನಮ್ಮ ಸಂಘದಿಂದ ಸಾಲ ಸೌಲಭ್ಯ ಕೊಡುವ ಉದ್ದೇಶ ಹೊಂದಿದ್ದೇವೆ. ಒಟ್ಟಾರೆ ಬ್ಯಾಂಕಿನ ಪ್ರಗತಿಗೆ ಎಲ್ಲರೂ ಸಹ ಸಹಕಾರ ನೀಡಿ ಬ್ಯಾಂಕು ಉತ್ತರೋತ್ತರ ಅಭಿವೃದ್ಧಿ ಹೊಂದಲಿಕ್ಕೆ ಕೈಜೋಡಿಸಬೇಕೆಂದು ತಿಳಿಸಿದರು.

ಹಿರಿಯರಾದ ಮೋನಪ್ಪ ರಾಮದುರ್ಗ, ಪಿಡ್ಡಪ್ಪ ಕುರಿ, ಜೀವಪ್ಪ ಗಾಡಿ, ರ್ಯಾವಪ್ಪ ನೇಮದಿ, ಶರಣಪ್ಪ ಹಕಾರಿ, ಪುಂಡಲೀಕಪ್ಪ ಜನಿವಾರದ, ತುಕ್ಕಪ್ಪ ಭಾಪ್ರಿ, ನೂತನ ನಿದರ್ೇಶಕರಾದ ಶಂಕ್ರಪ್ಪ ಜನಿವಾರದ, ಮಲ್ಲೇಶಪ್ಪ ಧೂಪದ, ಲುಮ್ಮಣ್ಣ ಕಣಗಿ, ರವೀಂದ್ರ ರಾಮದುರ್ಗ, ಹನಮಂತಪ್ಪ ಒಡ್ಡೊಡಗಿ, ರೋಮಣ್ಣ ಧುತ್ತರಗಿ, ಸಂಗಪ್ಪ ಕರಡಿ, ಜಗನ್ನಾಥ ಗಾಡಿ, ಸುಭಾಸ ಭಾಪ್ರಿ, ಮಹೇಶ ಜೀರಗಿ, ದಾದಾಸಾಬ ಬುವಾಜಿ, ಹನಮಪ್ಪ ಕತ್ತಿ, ಸಕ್ಕೂಬಾಯಿ ಈಜೇರಿ, ಲಕ್ಷ್ಮೀಬಾಯಿ ಹನಮಸಾಗರ, ರೋಮಣ್ಣ ಭಜೆಂತ್ರಿ, ನಾಗಪ್ಪ ವಾಲ್ಮೀಕಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಹೇಮಂತ ಧುತ್ತರಗಿ ಮತ್ತಿತರಿದ್ದರು.