ಗಾಯತ್ರಿ ರಾಜ್ಯ ಮಟ್ಟಕ್ಕೆ ಆಯ್ಕೆ

ಶಿಗ್ಗಾವಿ : ಹಾವೇರಿ ಕಲಾಶ್ರೀ ಭವನದಲ್ಲಿ ಬಾಲಭವನ ಸೊಸೈಟಿ, ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾವೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾವೇರಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಲಾಶ್ರೀ ಪ್ರಶಸ್ತಿ  ಸ್ಪಧರ್ೆಯಲ್ಲಿ ಸೃಜನಾತ್ಮಕ ಬರವಣಿಗೆ ಸ್ಪಧರ್ೆಯಲ್ಲಿ ಪಟ್ಟಣದ ಎಸ್.ಬಿ.ಬಿ.ಎಂ.ಡಿ. ಪ್ರೌಢಶಾಲಾ ವಿಭಾಗದ ವಿದ್ಯಾಥರ್ಿ ಕು. ಗಾಯತ್ರಿ ಸೋಮಯ್ಯ ಚಿಕ್ಕಮಠ ಭಾಗವಹಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾಳೆ. 

  ಈ ವಿದ್ಯಾಥರ್ಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಐ. ಬಿ. ಬೆನಕೊಪ್ಪ ಹಾಗೂ ಶಿಗ್ಗಾವಿ ತಾಲೂಕ ಶಿಕ್ಷಣ ಸಮಿತಿ ಸರ್ವಸದಸ್ಯರು ಹಾಗೂ ವಿದ್ಯಾಲಯದ  ಪ್ರಾಚಾರ್ಯರು, ಉಪಪ್ರಾಚಾರ್ಯರು ಮತ್ತು ಸರ್ವ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.