ವಿಜೃಂಭಣೆಯಿಂದ ನಡೆದಗವಿಸಿದ್ದೇಶ್ವರ ರಥೋತ್ಸವ
ಹೂವಿನಹಡಗಲಿ 18 : ಪಟ್ಟಣದಲ್ಲಿ ಗವಿಸಿದ್ದೇಶ್ವರ ಸ್ವಾಮಿಯ 30ನೇ ವರ್ಷದ ರಥೋತ್ಸವ ಸೋಮವಾರ ಸಂಜೆ 5.30ಕ್ಕೆ ವಿಜೃಂಭಣೆಯಿಂದ ಜರುಗಿತು. ಗವಿಮಠದಿಂದ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯ ಮೆರವಣಿಗೆಯಲ್ಲಿ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ತೋರಣಗಳಿಂದ ಅಲಂಕರಿಸಿದ್ದ ರಥಕ್ಕೆ ಪೂಜೆ, ಮಹಾ ಮಂಗಳಾರತಿ ನೆರವೇರಿದ ಬಳಿಕ ಸುಲೋಚನಮ್ಮ ತೋಟದ್ದೇವರಮಠ, ಸೊಪ್ಪಿನ ಗಂಗಮ್ಮ ಅಕ್ಕನಾಗಮ್ಮ ಸರಸ್ವತಮ್ಮ ತುರಕಾಣಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರ ಜಯಘೋಷ, ಹರ್ಷೋದ್ಧಾರದ ನಡುವೆ ರಥೋತ್ಸವ ಪ್ರಾರಂಭವಾಯಿತು.ಹರಾಜಿನಲ್ಲಿ ರಾಜವಾಳದ ಜಾಸ್ತಿ ಶ್ರೀನಿವಾಸರೆಡ್ಡಿ 1,01,111ಕ್ಕೆ ರುದ್ರಾಕ್ಷಿ ಮಾಲೆ ಹಾಗೂ ಹಣ್ಣಿ ಚನ್ನಬಸಪ್ಪ ?65,101ಕ್ಕೆ ಸ್ವಾಮಿಯ ಪಟಾಕಿಗಳನ್ನು ಪಡೆದರು. ಸಮಾಳ, ನಂದಿಕೋಲು, ಮಂಗಳವಾದ್ಯಗಳುರಥೋತ್ಸವದ ಮೆರುಗು ಹೆಚ್ಚಿಸಿದವು. ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ, ರಥಕ್ಕೆ ಉತ್ತತ್ತಿ ಸಮರ್ಿಸಿದರು. ಎಸೆದು ಭಕ್ತಿ ಸಮರ್ಿಸಿದರು.ಲಿಂಗನಾಯ್ಕನಹಳ್ಳಿಯ ಸ್ವಾಮೀಜಿ, ಗವಿಮಠದ ಚನ್ನವೀರ ಹಿರಿಶಾಂತವೀರಸ್ವಾಮೀಜಿ, ಹಿರೇಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ, ಮೈನಳ್ಳಿಯ ಸಿದ್ದೇಶ್ವರ ಸ್ವಾಮೀಜಿ, ಇಟಗಿಯ ಗುರುಶಾಂತ ಶಿವಾಚಾರ್ಯ ಸ್ವಾಮೀಜಿ, ಕೊಂಬಳಿ ಚೌಕಿಮಠದ ಗಾಡಿತಾತಾ, ಹಿರೇವಡ್ಡಟ್ಟಿಯ ವೀರೇಶ್ವರ ಸ್ವಾಮೀಜಿ,ಗುತ್ತಲದ ಗುರುಸಿದ್ದ ಸ್ವಾಮೀಜಿ, ಹೆಬ್ಬಾಳದ ನಾಗಭೂಷಣ ಸ್ವಾಮೀಜಿ, ಬಾಚಿಗೊಂಡನಹಳ್ಳಿಯ ಶಿವ ಮಹಾಂತ ಸ್ವಾಮೀಜಿ, ಮಂಗಳೂರಿನ ಸಿದ್ದಲಿಂಗ ಸ್ವಾಮೀಜಿ, ಗುಡ್ಡದ ಅನ್ವೇರಿಯ ಶಿವಯೋಗೇಶ್ವರ ಸ್ವಾಮೀಜಿ ಇದ್ದರು.