ಗೌರಿ -ಗಣೇಶ, ಮೊಹರಂ ಹಬ್ಬ ಶಾಂತಿಯುತ ಆಚರಣೆಗೆ ನಿರ್ಧಾರ

ಹಾವೇರಿ:  ಗೌರಿ -ಗಣೇಶ ಚತುಥರ್ಿ ಹಾಗೂ ಮೋಹರಂ ಹಬ್ಬವನ್ನು ಪರಸ್ಪರ ಸೌಹಾರ್ದತೆಯಿಂದ ಶಾಂತಿಯುತವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಬುಧವಾರ ಸಂಜೆ ಹಾವೇರಿ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಗೌರಿ ಗಣೇಶ ಮತ್ತು ಮೋಹರಂ ಹಬ್ಬದ ನಿಮಿತ್ತ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾದ ಶಾಂತಿ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆ ಹಾಗೂ ಸಮುದಾಯದ ಮುಖಂಡರು ಭಾಗವಹಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜೆ.ದೇವರಾಜ್  ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಗಜಾನನ ಉತ್ಸವವನ್ನು ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ದೇಶದ ಒಗ್ಗಟ್ಟಿಗೋಸ್ಕರ ಆಚರಣೆಗೆ ತರಲಾಯಿತು. ಭಾವೈಕ್ಯತೆ ಹಾಗೂ ಭಾರತೀಯ ಸಂಸ್ಕೃತಿಯ  ಪ್ರತೀಕವಾದ ಗಣೇಶೋತ್ಸವವನ್ನು ನಾವೆಲ್ಲರು ಶಾಂತಿ, ಸೌಹಾರ್ದತೆಯಿಂದ ಆಚರಿಸೋಣ. ಪರಿಸರಕ್ಕೆ ಹಾನಿಮಾಡದೆ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದೆ, ಕರ್ಕಶವಾದ ಧ್ವನಿ ವರ್ಧಕಗಳನ್ನು ಬಳಕೆಮಾಡದೆ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸೋಣ. ನೆರೆ ಹಾಗೂ ಅತಿವೃಷ್ಠಿ ಕಾರಣ ಜನರು ತೊಂದರೆಯಲ್ಲಿದ್ದಾರೆ. ಸರಳವಾಗಿ ಉತ್ಸವಗಳನ್ನು ಆಚರಿಸೋಣ ಎಂದು ಮನವಿ ಮಾಡಿಕೊಂಡರು.

ಏಕಗವಾಕ್ಷಿ ಪದ್ಧತಿಯಲ್ಲಿ ಗಣೇಶ ಮೂತರ್ಿಗಳ ಪ್ರತಿಷ್ಠಾಪನೆ ಹಾಗೂ ಮೆರವಣಿಗೆಗೆ ಅನುಮತಿ ವ್ಯವಸ್ಥೆ ಮಾಡಲಾಗುವುದು. ಒಂದೇ ಸೂರಿನಡಿ ವಿಳಂಬವಿಲ್ಲದೆ ಅಗ್ನಿಶಾಮದಳ, ಹೆಸ್ಕಾಂ, ನಗರಸಭೆ, ಪೊಲೀಸ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಅನುಮತಿ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.  

ಪರಿಸರ ಮಾಲಿನ್ಯ ಅಧಿಕಾರಿ ಶಿವಾನಂದ ದೊಡ್ಡಮನಿ ಅವರು ಮಾತನಾಡಿ, ರಾಸಾಯನಿಕ ಬಣ್ಣ ಲೇಪಿತ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ ತಯಾರಿಸಿದ ಗಣೇಶ ಮೂತರ್ಿಗಳನ್ನು ನಿಷೇಧಿಸಲಾಗಿದೆ. ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗೌರಿ ಗಣೇಶ ಮೂತರ್ಿಗಳನ್ನು ಬಳಸುವಂತೆ ಮನವಿ ಮಾಡಿಕೊಂಡರು.

ಗಣೇಶ ವಿಸರ್ಜನೆಗೆ ಅನುಕೂಲವಾಗುವಂತೆ ಹಾವೇರಿ ನಗರದ ಗುರುಭವನ ಹಾಗೂ ನಾಗೇಂದ್ರನಮಟ್ಟಿಯಲ್ಲಿ ತಾತ್ಕಾಲಿಕ ಹೊಂಡಗಳ ವ್ಯವಸ್ಥೆ ಮಾಡಲಾಗುವುದು.

        ವಿಸರ್ಜನೆಗೆ ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ ಎರಡು ವಾಹನಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ಪೌರಾಯುಕ್ತರಾದ ಬಸವರಾಜ ಜಿದ್ದಿ, ಹೆಸ್ಕಾಂ ಅಧಿಕಾರಿ ವಿ.ಎಸ್.ಮರಿಗೌಡ್ರ, ಅಗ್ನಿಶಾಮಕ ಅಧಿಕಾರಿ ಸೋಮಶೇಖರ ಅಗಡಿ ಅವರು ಮಾತನಾಡಿ, ಉತ್ಸವದ ಸಂದರ್ಭಗಳಲ್ಲಿ ಸುರಕ್ಷತೆ ಮತ್ತು ಸೌಹಾರ್ದತೆಗೆ ಯಾವುದೇ ತೊಂದರೆಯಾಗದಂತೆ ಉತ್ಸವಗಳನ್ನು ಅರ್ಥಪೂರ್ಣವಾಗಿ ಆಚರಿಸಿ ಇಲಾಖೆಗಳಿಂದ ಎಲ್ಲ ಸಹಕಾರಗಳನ್ನು ನೀಡುವುದಾಗಿ ಹೇಳಿದರು.

ವಿವಿಧ ಗಜಾನನ ಮಂಡಳಿಗಳ ಸದಸ್ಯರು, ಅಂಜುಮನ್ ಕಮೀಟಿ ಸದಸ್ಯರು, ವಿವಿಧ ನಾಗರಿಕ ಸಮಿತಿಗಳ ಸದಸ್ಯರು, ಸಂಘ ಸಂಸ್ಥೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.