ಪ್ರಾ.ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗೌಡ್ರು ಸಿದ್ದಪ್ಪ ಉಪಾಧ್ಯಕ್ಷರಾಗಿ.ಗುಬಾಜಿ.ಶಿಲ್ಪಮ್ಮ.
ಕಂಪ್ಲಿ 09: ತಾಲೂಕಿನ ದೇವಲಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗೌಡ್ರು ಸಿದ್ದಪ್ಪ ಹಾಗೂ ಉಪಾಧ್ಯಕ್ಷರಾಗಿ ಗುಬಾಜಿ.ಶಿಲ್ಪಮ್ಮ ರಾಮಾಂಜಿನಿ ಅವರು ಅವಿರೋಧವಾಗಿ ಆಯ್ಕೆಗೊಂಡರು. ಇಲ್ಲಿನ ಕಛೇರಿಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ ಹಿನ್ನಲೆ ಅಧ್ಯಕ್ಷರಾಗಿ ಗೌಡ್ರುಸಿದ್ದಪ್ಪ, ಹಾಗೂ ಉಪಾಧ್ಯಕ್ಷರಾಗಿ. ಗುಬಾಜಿಶಿಲ್ಪಮ್ಮ ರಾಮಾಂಜಿನಿ ಆಯ್ಕೆಗೊಂಡಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಎಂ ರೇವಣ್ಣ ಘೋಷಿಸಿದರು..
ಈ ವೇಳೆ ನಿರ್ದೇಶಕರಾದ ಗೊರವರ ಹನುಮಂತಪ್ಪ, ಎಸ್ ಹನುಮಂತಪ್ಪ, ಗೌಡ್ರು ಷಣ್ಮುಕಪ್ಪ, ರಮೇಶ ಪೂಜಾರಿ, ವಡ್ರು ಮುಕ್ಕಣ್ಣ, ಕೆ.ಮಹಾದೇವಪ್ಪ, ಗೌಡ್ರು ಮಲ್ಲಿಕಾರ್ಜುನ, ಕಾರಿಗನೂರು ಹನುಮಂತಪ್ಪ, ಕುರಿ ವಿಶ್ವನಾಥ, ಗೌಡ್ರುಮಲ್ಲಮ್ಮ, ಬ್ಯಾಂಕ್ ಪ್ರತಿನಿಧಿ ದೇವರ ಮನೆ ಗಂಗಾಧರ ಪಿಆರ್‌ಒಗಳಾದ ಹೆಚ್.ಪಿ.ಸೋಮಶೇಖರ,. ಈ ಸಂದರ್ಭದಲ್ಲಿ ಸೊಸೈಟಿ ಮುಖ್ಯಕಾರ್ಯನಿರ್ವಾಹಕ ಕುಮಾರ ಕ್ಷೇತ್ರ ಅಧಿಕಾರಿ ಚಂದ್ರರೆಡ್ಡಿ ಮುಖಂಡರಾದ ಜಿ ಮರೇಗೌಡ್ರು ಗೌಡ್ರುಅಂಜಿನಪ್ಪ ವಿರೇಶಗೌಡ ಲಿಂಗನಗೌಡ ಗೋಲ್ಲರ ಜಂಭಯ್ಯ ಕುಂಬಾರ ವಿರುಪಾಕ್ಷಿ ಪಂಪಣ್ಣ ಸಿಬ್ಬಂದಿಗಳಾದ ಲಿಂಗನಗೌಡ ಎಚ್ ಮಾರೇಶ ಮನೋಜ ಖಾಸಿಂಸಾಬ್ ಸೇರಿದಂತೆ ಅನೇಕರು ಇದ್ದರು.