ಲೋಕದರ್ಶನ ವರದಿ
ಕಾರವಾರ 30:ಇಲ್ಲಿನ ರವೀಂದ್ರನಾಥ್ ಕಡಲತೀರದ ಮೇಲಿನ ಮಕ್ಕಳ ಉದ್ಯಾನವನದ ಎಲ್ಲ ಗೇಟುಗಳು ಶುಕ್ರವಾರ ಬಂದ್ ಮಾಡಲಾಗಿದ್ದರಿಂದ ಫಿಕ್ನಿಕ್ಗೆ ಬಂದ ಶಾಲಾ ಪುಟಾಣಿ ಮಕ್ಕಳು ಆಟವಾಡಲು ಸಾಧ್ಯವಾಗದೇ ನಿರಾಶರಾಗಿ ಮರಳುವಂತಾಯಿತು.
ಶಾಲಾ ಮಕ್ಕಳ ಫಿಕ್ನಿಕ್ ಹಂಗಾಮಾ ಈಗಾಗಲೇ ಶುರುವಾಗಿದ್ದು, ಇಲ್ಲಿನ ರವೀಂದ್ರನಾಥ್ ಕಡಲತೀರದ ಮೇಲಿನ ಪ್ರವಾಸಿ ತಾಣಗಳು ಮಕ್ಕಳನ್ನು ಆಕಷರ್ಿಸುತ್ತಿವೆ. ಅಗಾಧವಾದ ಅರಬ್ಬೀಸಮುದ್ರ, ಬೀಚ್ ಸೌಂದರ್ಯದ ಜತೆಗೆ ರಾಕ್ಗಾಡರ್್ನ್, ಸಾಗರ ಮತ್ಸ್ಯಾಲಯ, ಚಾಪೆಲ್ ಯುದ್ಧ ಸ್ಮಾರಕ ಹಡಗು, ಫುಡ್ಕೋಟರ್್ ಬಳಿಯ ಪುಟಾಣಿ ಆಟಿಕೆ,ಆಳ್ವ ಗಾಡರ್್ನ್, ಅದರ ಪಕ್ಕದಲ್ಲಿರುವ ಮಕ್ಕಳ ಉದ್ಯಾನವನ ಹೀಗೆ ಎಲ್ಲವೂ ಹಿರಿಯ, ಕಿರಿಯ ಪ್ರವಾಸಿಗರಲ್ಲದೇ, ಫಿಕ್ನಿಕ್ಗೆ ಬರುವ ಪುಟಾಣಿ ಮಕ್ಕಳು ಇಷ್ಟಪಡುವ ತಾಣಗಳಾಗಿವೆ.
ಮಕ್ಕಳ ಉದ್ಯಾನವನ ಹಾಗೂ ಫುಡ್ಕೋಟರ್್ನಲ್ಲಿರುವ ಮಕ್ಕಳ ಆಟಿಕೆ ಗಾಡರ್್ನ್ ಹೊರತುಪಡಿಸಿ ಬಾಕಿ ಎಲ್ಲ ತಾಣಗಳನ್ನು ನಿಗದಿಪಡಿಸಿದ ಸಮಯಕ್ಕೆ ಮಾತ್ರ ವೀಕ್ಷಣೆಗೆ ಅವಕಾಶವಿದೆ. ಶುಕ್ರವಾರ ಮಧ್ಯಾಹ್ನ ಫಿಕ್ನಿಕ್ಗೆ ಬಂದ ಮಕ್ಕಳು ಫುಡ್ಕೋಟರ್್ನಲ್ಲಿರುವ ಪುಟಾಣಿ ಆಟಿಕೆ ಗಾಡರ್್ನಲ್ಲಿ ಆಟ ಶುರು ಮಾಡಿದರು. ಮಕ್ಕಳಿಗೆ ಮಧ್ಯಾಹ್ನ ರಣಬಿಸಿಲಿನಲ್ಲಿ ಆಟವಾಡಲು ಸಾಧ್ಯವಾಗಲಿಲ್ಲ. ಇದನ್ನು ಅರಿತು ಶಿಕ್ಷಕಿಯರು ಮಕ್ಕಳನ್ನು ತಂಪು ವಾತಾವರಣ ಇರುವ ಆಳ್ವ ಗಾರ್ಡನ್ ಪಕ್ಕದಲ್ಲಿರುವ ಮಕ್ಕಳ ಉದ್ಯಾನವನದತ್ತ ಕರೆದುಕೊಂಡು ಹೋಗಬೇಕಾಯಿತು. ಮಕ್ಕಳ ಉದ್ಯಾನವನದ ಸುತ್ತಮುತ್ತ ಗಿಡಮರಗಳು ಹುಲುಸಾಗಿ ಬೆಳೆದಿರುವುದರಿಂದ ಉದ್ಯಾನವನದಲ್ಲಿ ಸಾಕಷ್ಟು ನೆರಳು ಬೀಳುತ್ತದೆ. ಇದರಿಂದ ನೆರಳಿನ ತಂಪಾದ ವಾತಾವರಣದಲ್ಲಿ ಮಕ್ಕಳಿಗೆ ಆಟವಾಡಲು ಅನುಕೂಲವಾಗುತ್ತದೆ. ಆದರೆ ಶುಕ್ರವಾರ ಇಲ್ಲಿ ಆಟವಾಡಲು ಉತ್ಸಾಹದಿಂದ ಬಂದ ಮಕ್ಕಳಿಗೆ ಹಾಗೂ ಶಿಕ್ಷಕಿಯರಿಗೆ ನಿರಾಸೆ ಉಂಟಾಯಿತು. ಮಕ್ಕಳ ಉದ್ಯಾನವನದ ಮೂರೂ ಗೇಟುಗಳು ಬಂದ್ ಮಾಡಿದ್ದರಿಂದ ಆಟ ಆಡಲು ಸಾಧ್ಯವಾಗದೇ ಮಕ್ಕಳು ಆಟಿಕೆ ಸಾಮಾನುಗಳನ್ನು ಹೊರಗಡೆಯಿಂದಲೇ ನೋಡಿ ಕಣ್ತುಂಬಿಕೊಂಡರು. ಉದ್ಯಾನವನದ ಬೇಲಿಗೆ ಅಳವಡಿಸಿದ ಕಬ್ಬಿಣದ ಜಾಲರಿ ಹಿಂದೆ ನಿಂತು ಆಟವಾಡುವ ಆಸೆಗಣ್ಣಿನಿಂದ ನೋಡುವ ಮಕ್ಕಳ ದೃಷ್ಯ ಮನಕಲುಕುವಂತಿತ್ತು ಎಂದು ಇಲ್ಲಿನ ಆಳ್ವ ಉದ್ಯಾನವನಕ್ಕೆ ವಿಹರಿಸಲು ಬಂದ ಪ್ರವಾಸಿಗ ಬಾಲಚಂದ್ರ ನಾಯ್ಕ ಅಭಿಪ್ರಾಯಪಟ್ಟರು.
ರಣಬಿಸಿಲಿನಲ್ಲಿ ಆಟವಾಡಲು ತೊಡಕು :
ಟ್ಯಾಗೋರ್ ಬೀಚ್ಗೆ ಹೊಂದಿಕೊಂಡಂತೆ ಇರುವ ಆಳ್ವ ಗಾಡರ್್ನ್ ಪಕ್ಕದಲ್ಲಿಯೇ ನಗರಸಭೆಯು ವೈವಿಧ್ಯಮಯ ಮಕ್ಕಳ ಆಟಿಕೆಗಳನ್ನು ಅಳವಡಿಸಿ ಮಕ್ಕಳ ಉದ್ಯಾನವನ ನಿಮರ್ಿಸಿತ್ತು. ಬಳಿಕ ಜಿಲ್ಲಾಡಳಿತದ ವತಿಯಿಂದ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಠಿಯಿಂದ ಫುಡ್ಕೋಟರ್್ ಬಳಿ ಇನ್ನೊಂದು ಮಕ್ಕಳ ಆಟಿಕೆ ಗಾಡರ್್ನ್ ನಿಮರ್ಿಸಿದೆ. ಆದರೆ ಅದು ಮುಂಜಾನೆ ಅಥವಾ ಸಾಯಂಕಾಲ ಆಟ ಆಡಲು ಬರುವ ಮಕ್ಕಳಿಗೆ ಅನುಕೂಲಕರವಾಗಿದೆ. ಅದರ ಸುತ್ತಮುತ್ತ ಮರಗಿಡಗಳಿಲ್ಲದೇ, ಬೆಳಿಗ್ಗೆ 11 ರ ನಂತರ ಹಾಗೂ ಮಧ್ಯಾಹ್ನದ ರಣಬಿಸಿಲಿನಲ್ಲಿ ಮಕ್ಕಳಿಗೆ ಆಟವಾಡಲು ಸಾಧ್ಯವಿಲ್ಲ. ಎಲ್ಲ ಆಟಿಕೆ ಸಾಮಾನುಗಳು ಬಿಸಿಲಿನಿಂದ ಕಾದಿರುತ್ತವೆ. ಇದರಿಂದ ಮಕ್ಕಳಿಗೆ ಕಷ್ಟವಾಗುತ್ತದೆ ಎಂದು ಇಲ್ಲಿನ ಸ್ಥಳೀಯ ಆನಂದ್ ಬಿ. ತಿಳಿಸುತ್ತಾರೆ.