ಹೊನ್ನಾವರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತ್ರತ್ವದ ಕೆಂದ್ರ ಸಕರ್ಾರದ ಮಹತ್ವಾಕಾಂಕ್ಷಿ ಉಜ್ವಲ ಯೋಜನೆಯಿಂದ ದೇಶದ ಪ್ರತಿಯೊಂದು ಮನೆಗು ಉಚಿತ ಗ್ಯಾಸ್ ಸಂಪರ್ಕ ಸಿಗುವಂತಾಗಿದೆ. ಮುಂದಿನ ದಿನದಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯ ಅನಿಲ ರಹಿತ ಮನೆಗಳಿಗೂ ಗ್ಯಾಸ್ ಸಂಪರ್ಕ ನೀಡಲಾಗುವುದು ಎಂದು ಭಟ್ಕಳ ಹೊನ್ನವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಹೇಳಿದರು.
ತಾಲೂಕಿನ ಕೆಳಗಿನೂರು ಪಂಚಾಂಯತಿ ವ್ಯಾಪ್ತಿಯ 124 ಕುಟುಂಬಗಳಿಗೆ ಕೆಂದ್ರ ಸಕರ್ಾರದ ಮಹತ್ವಾಕಾಂಕ್ಷಿ ಉಜ್ವಲ ಯೋಜನೆಯಡಿಯಲ್ಲಿ ಮಂಜೂರಾದ ಫಲಾನುಭವಿಗಳಿಗೆ ಕೆಳಗಿನೂರು ಗ್ರಾ.ಪಂನಲ್ಲಿ ಮಂಗಳವಾರ ನಡೆದ ಗ್ಯಾಸ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರಮೋದಿಯವರು ಉಜ್ವಲ ಯೋಜನೆಯಡಿ ಉಚಿತ ಗ್ಯಾಸ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಿದ್ದಾರೆ. ಈ ಯೋಜನೆ ಕಳೆದ 2 ವರ್ಷದಿಂದ ಜಾರಿಯಲ್ಲಿದ್ದು ಈಗಾಗಲೇ ದೇಶಾದ್ಯಂತ ಇದರ ಪ್ರಯೋಜನ ಪಡೆದಿದ್ದಾರೆ, ಕಟ್ಟಿಗೆಯ ಬಳಸಿ ಅಡುಗೆ ಮಡುವ ಸಮಯದಲ್ಲಿ ಹೊಗೆಯಿಂದ ಕಣ್ಣು ಮತ್ತು ಶ್ವಾಸಕೋಶಗಳಿಗೆ ಸಮಸ್ಯೆಯಾಗುತ್ತದೆ, ಸಾಕಷ್ಟು ತಾಯಂದಿರು, ಮಹಿಳೆಯರ ಸಂಕಷ್ಠ ಅರಿತು ಈ ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದ್ದಾರೆ. ಅಂದು ತಾನು ಮನೆಗೆ ಗ್ಯಾಸ್ ಸಂಪರ್ಕ ಪಡೆಯಲು ಅಂದಿನ ಶಾಸಕರ ಬಳಿ ಲೆಟರ್ ಹಿಡಿದು ತಿಂಗಳು ಗಟ್ಟಲೆ ಕಾದು ಅನಿಲ ಸಂಪರ್ಕ ಪಡೆಯಬೇಕಿತ್ತು, ಅಲ್ಲದೇ ತಾನೂ ಇದಕ್ಕಾಗಿ ಮೂರು ಸಾವಿರ ಲಂಚವನ್ನು ನೀಡುವ ಪರಿಸ್ಥಿತಿಯು ಒದಗಿತ್ತು ಆದರೆ ಇಂದು ಅಂತಹ ಪರಿಸ್ಥಿತಿ ಉಂಟಾಗಲಾರದು ಕೇವಲ ಒಂದು ಸಂದೇಶ ಕಳಿಸಿದರೆ ಗ್ಯಾಸ ನಿಮ್ಮ ಮನೆಗೆ ಮುಂದಿನ ದಿನದಲ್ಲಿ ಬರುವ ವ್ಯವಸ್ಥೆ ಜಾರಿಯಲ್ಲಿದೆ ಎಂದು ಅನುಸರಿಸಬೇಕಾದ ಸುರಕ್ಷತಾ ಕ್ರಮದ ಕುರಿತು ಮಾಹಿತಿ ನೀಡಿದರು. ಶಾಸಕ ಪದವಿ ನೀಡಿರುವುದು ಕ್ಷೇತ್ರದ ಜನತೆ ಅವರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸುವುದು ನನ್ನ ಕರ್ತವ್ಯ ನಾನು ಅವರ ಸೇವೆ ಮಾಡಲು ಹಿಂಜರಿಯುವುದಿಲ್ಲ ಎಂದು ಭರವಸೆ ನೀಡಿದರು.