ಸಮಸ್ಯೆ ಸೃಷ್ಟಿಸುವ ಕಸ ತುಂಬಿದ ಚರಂಡಿ

ಲೋಕದರ್ಶನ ವರದಿ

ಚಿಂಚಲಿ 17: ಪಟ್ಟಣದ ಪರಿಶೀಷ್ಟ ಜಾತಿಯ ವಾಸಾವಾಗಿರು ವಾರ್ಡ ನಬರ ಎರಡರಲ್ಲಿ ಕ್ವಾಲನಿಯ ಹದಗೆಟ್ಟ ಚರಂಡಿ ವ್ಯವಸ್ಥೆಯಿಂದ ಹನಿ ಕಸ ಹಾಗೂ ಒಣ ತ್ಯಾಜ್ಯ ಸಂಗ್ರಹ ಸಂಪೂರ್ಣವಾಗಿ ದುವರ್ಾಸನೆಗೆ ಬರುತ್ತಿದೆ ಮತ್ತು ನೀರು ಹರಿದು ಹೋಗದೆ ಮಡುಗಟ್ಟಿ ನಿಂತು ಅಸಹ್ಯಕರ ವಾತಾವರಣದ ಜತೆಗೆ ಸಾಂಕ್ರಾಮಿಕ ರೋಗ ಹುಟ್ಟು ಹಾಕುತ್ತಿದೆ.

ಬೆಳಕು ಹರಿದರೆ ದುರ್ವಾಸನೆಗೆ ಮೂಗು ಸಿಂಡಿರಿಸುವ ಈ ಪಟ್ಟಣದ ಕ್ವಾಲನಿ ಜನರಿಗೆ ಸಂಜೆಯಾದರೆ ಸೊಳ್ಳೆಗಳ ಕಾಟ ಬಾಧೆ ತಾಳಲಾರದಷ್ಟಿದೆ. ಇವತ್ತು ಕ್ವಾಲನಿ ಜನರು ಮೂಗು ಮುಚ್ಚಿಕೊಂಡು ವ್ಯವಹರಿಸಬೇಕಾದ ಪರಿಸ್ಥಿತಿ ತಲೆದೋರಿದೆ. ಕೆಲವು ಕಡೆ ಚರಂಡಿ ನಿರ್ಮಿಸಿದ್ದರೂ ಸಮಪರ್ಕ ಕೊರತೆಯಿಂದ ನೀರು ಸರಾಗವಾಗಿ ಹರಿದು ಹೋಗದೆ, ಈ ಚರಂಡಿ ಇದ್ದೂ ಇಲ್ಲದಂತಿವೆ. ಮನೆ ಗೋಡೆ ಬಳಿ ಚರಂಡಿ ನೀರು ನಿಲ್ಲುತ್ತಿದ್ದು ಸೊಳ್ಳೆಗಳ ಕಾಟ ಹಾಗೂ ದುರ್ವಾಸನೆಯಿಂದ ಅವರುಗಳ ಮನೆಯಲ್ಲಿ ಊಟ ಮಾಡಲು ಸಾಧ್ಯವಾಗುತ್ತಿಲ್ಲ. ನಿಂತಲ್ಲೇ ನೀರು ನಿಂತು ಸೊಳ್ಳೆಗಳು ತಮ್ಮ ಅವಾಸಸ್ತಾನನ ಮಾಡಿಕೊಂಡು ಇಡೀ ಕ್ವಾಲನಿ ರೋಗ ಹಬ್ಬಿಸುತ್ತಿವೆ. ಇದರಿಂದಾಗಿ ನಾಗರಿಕರು ಪ್ರತಿದಿನ ನರಕಯಾತ್ರೆಯನ್ನು ಪಡುತ್ತಿದ್ದಾರೆ. ಇಷ್ಟಾದರೂ ಯಾವೊಬ್ಬ ಅಧಿಕಾರಿಗಳು ಕೂಡ ಈ ಕ್ವಾಲನಿ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎನ್ನುವುದು ಕ್ವಾಲನಿ ನಿವಾಸಿಗಳು ಆಕ್ರೋಶದ ದೂರು.

ಕೆಲವೆಡೆಯಂತೂ ಚರಂಡಿಗಳೇ ಇಲ್ಲದೆ ತ್ಯಾಜ್ಯ ನೀರು ರಸ್ತೆಡಿಯಲ್ಲೇ ಹರಿದು ಹರಿದು ಪಾಚಿಗಟ್ಟಿದೆ. ಆ ನೀರು ಗಲೀಜು ನೀರಿನಲ್ಲಿ ನಡೆದಾಡಬೇಕಾಗಿದೆ. ರಾತ್ರಿ ವೇಳೆ ಇದರಿಂದ ಕಾಲು ಜಾರಿ ಬಿದ್ದವರು ಸಂಖ್ಯೆ ಕೂಡ ಕಡಿಮೆ ಇಲ್ಲ. ವಿದ್ಯಾರ್ಥಿಗಳು ರೊಚ್ಚು ನೀರು ತುಳಿದುಕೊಂಡೆ ನಡೆದಾಡಬೇಕಾಗಿದೆ. ಚಿಕ್ಕ ಚಿಕ್ಕ ಮಕ್ಕಳನ್ನು ಮನೆ ಹೊರಗೆ ಬಿಡಲು ಭಯವಾಗುತ್ತದೆ.  ಕಟ್ಟಿಕೊಂಡ ಚರಂಡಿಯಿಂದ ಕ್ರಿಮಿಕೀಟಗಳು ಅಲೆದಾಡುವುದೇ ಕೆಲಸವಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ಈ ಚರಂಡಿ ಬಗ್ಗೆ ಹತ್ತಾರು ಬಾರಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳಿಗೆ ಅನೇಕ ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಪಟ್ಟಣದಲ್ಲಿ ಎಲ್ಲಿ ನೋಡಿದರೂ ಕಸದ ರಾಶಿಗಳು, ತುಂಬಿದ ಚರಂಡಿಗಳನ್ನು ನೋಡುವಂತಾಗಿದೆ. ಪಟ್ಟಣ ಪಂಚಾಯತಿಯವರ ಜಾಣ ಕುರುಡು ಪ್ರದರ್ಶನದಿಂದಾಗಿ ಜನರು ತೊಂದರೆ ಅನುಭವಿಸಬೇಕಾಗಿ ಬಂದಿದೆ ಎಂದು ಸಾರ್ವಜನಿಕರು ಆಕ್ರೊಶ ವ್ಯಕ್ತಪಡೆಸುತ್ತಿದ್ದಾರೆ.

ಪಟ್ಟಣದ ವಾರ್ಡ ನಂಬರ ಎರಡ ಅಂಬೇಡಕರ ಕ್ವಾಲನಿ ಹದಗೆಟ್ಟು ಕಸದ ರಾಶಿ ಚರಂಡಿ ನೀರು ನೀತು ಸ್ಥಿತಿ ಜನಪ್ರತಿನಿಧಿಗಳು ತೋರಿಸಿದರೂ ವಾರದಲ್ಲಿ ಒಂದು ದಿನ ಮಾತ್ರ ಚರಂಡಿ ಹಾಗೂ ಕ್ವಾಲನಿ ಸ್ವಚ್ಛತೆ ಸರದಿ ಬರುತ್ತದೆ. ಅದರಲ್ಲಿ ಸುಮಾರು ಇಪ್ಪತ್ತು ದಿನಗಳ ಕಳೆದರು ಸಹ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಸ್ವಚ್ಛತೆ ಕಡೆಗೆ ಗಮನ ಹರಿಸುವುದಿಲ್ಲ. ಹೀಗಾಗಿ ಅಧಿಕಾರಿಗಳು ಕೂಡ ಉದ್ಥಟತನದಿಂದ ವರ್ತಿಸುತ್ತಿದ್ದಾರೆ. ನಾಳೆ ಪಟ್ಟಣದಲ್ಲಿ ರೋಗ ಉಲ್ಘಣಿಸಿ ಸಾವುಗಳು ಸಂಭವಿಸಿದರೆ ಅದಕ್ಕೆ ಯಾರು ಹೊಣೆ? 

ಭಾರತ ದೇಶ ಸ್ವಚ್ಛ ಭಾರತ ಮಾಡುವುದಕ್ಕೆ ಪ್ರಧಾನಿಯರ ಕನಸು ಆದರೆ ಅಧಿಕಾರಿಗಳು ಇಂದು ಒಂದು ದಿನದ ಕಾರ್ಯಕ್ರಮ ಮಾತ್ರ ಸಿಮಿತ ಮಾಡಿಕೊಂಡು ಸರಕಾರದ ಆದೇಶ ಮೇರಿಗೆ ಸ್ವಚ್ಛತೆಯ ಬಗ್ಗೆ ವಿವಿತ ಕಾರ್ಯಾಗಾರಗಳು ಆಯೋಜನೆ ಮಾಡಿ ಕೇಲ ದಾಖಲಾತಿಯಲ್ಲಿ ಮಾತ್ರ ಪಟ್ಟಣ ಸ್ವಚ್ಛತೆ ಯಾಗಿದೇ ಅದರ ಹೊರತ್ತಾಗಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳು ಪಟ್ಟಣಕ್ಕೆ ಆಗಮಿಸುವ ಸಂದರ್ಭದಲ್ಲಿ ಮಾತ್ರ ಅಲಲ್ಲಿ ಸ್ವಚ್ಛತೆ ಮಾಡಿದು ಕಂಡು ಬರುತ್ತದೆ. ಸಾರ್ವಜನರಿಗೆ ಹಸಿ ಕಸ ಒಣ ಕಸದ ಡಬ್ಬಾಗಳನ್ನು ಆಯೋಜನೆ ಮಾಡದೇ ಸ್ವಚ್ಛತೆ ಕಾಪಾಡಿ ಸ್ವಚ್ಚತೆ ಕಾಪಾಡಿ ಎಂದು ಹೇಳಿದರು ಸಾಲದು ಆ ಸ್ವಚ್ಚ ಸೂಕ್ತವಾದ ಪರಿಹಾರ ಸಾಮಗ್ರಿಗಳು ಪಟ್ಟಣ ಪಂಚಾಯತಿಯಿಂದ ಆಯೋಜನೆ ಮಾಡದೇ ಕಸದ ರಾಶಿಯ ದುರ್ವಾಸನೆಗೆ ಗತ್ತಿಯಾಗಿದ್ದೆ.

ಸಂಬಂಧ ಪಟ್ಟವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಡಾ. ಅಂಬೇಡಕರ ಸಾಂಸ್ಕೃತಿ ಕಲಾ ಯು ಸಂಘಟನೆಯಿಂದ ಹೋರಾಟ ಹಾದಿ ತುಳಿಯುವುದು ಅನಿವಾರ್ಯವಾಗುತ್ತದೆ. ಎಂದು ಎಚ್ಚರಿಸಿದ್ದರು.