ಗಂಗಾವತಿ: ಬಿಕ್ಷಾಟನೆ ನಿರ್ಮೂಲನೆಗಾಗಿ ಅನೀರಿಕ್ಷಿತ ದಾಳಿ, ಕಾರ್ಯಾಚರಣೆ

Gangavati: Unexpected attack, operation for eradication of violence

ಗಂಗಾವತಿ: ಬಿಕ್ಷಾಟನೆ ನಿರ್ಮೂಲನೆಗಾಗಿ ಅನೀರಿಕ್ಷಿತ ದಾಳಿ, ಕಾರ್ಯಾಚರಣೆ

ಕೊಪ್ಪಳ 08: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಗಂಗಾವತಿ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಗಂಗಾವತಿ ನಗರದ ಹಿರೇಜಂತಕಲ್ಲ ಶ್ರೀ ಪಂಪಾ ವೀರುಪಾಕ್ಷೇಶ್ವರ ಜಾತ್ರಾ ನಿಮಿತ್ಯವಾಗಿ ಹಮ್ಮಿಕೊಂಡಿದ್ದ ಬಿಕ್ಷಾಟನೆ ನಿರ್ಮೂಲನೆಗಾಗಿ ಅನೀರಿಕ್ಷಿತ ದಾಳಿ ಕಾರ್ಯಾಚರಣೆಗೆ ಗಂಗಾವತಿಯ ತಹಶೀಲ್ದಾರ ಯು.ನಾಗರಾಜ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ 4 ಜನರು ಭಿಕ್ಷಾಟನೆಯಲ್ಲಿ ತೊಡಗಿರುವುದು ಕಂಡುಬಂದಿದ್ದು, ಅವರನ್ನು ರಕ್ಷಿಸಿ, ಪುನರವಸತಿಗಾಗಿ ನಿರ್ಗತಿಕರ ಪುನರ್‌ವಸತಿ ಕೇಂದ್ರ, ಬಳ್ಳಾರಿಯಲ್ಲಿ ದಾಖಲಿಸಲಾಯಿತು. ಈ ದಾಳಿ ಕಾರ್ಯಚರಣೆಯಲ್ಲಿ ಗಂಗಾವತಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಶೃತಿ, ಕಾರ್ಮಿಕ ನೀರೀಕ್ಷಕ ಅಶೋಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಯಮುನಮ್ಮ, ಬಸಮ್ಮ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯ ಅಂನವಾಡಿ ಮೇಲ್ವಿಚಾರಕಿಯರಾದ ನಿಂಗಮ್ಮ, ಸುಮಂಗಲಾ, ಸುಬ್ಬಮ್ಮ, ನಿರ್ಗತಿಕರ ಪುನರವಸತಿ ಕೇಂದ್ರ ಬಳ್ಳಾರಿಯ ವಾರ್ಡನ್ ರಾಜು, ಮಹೇಶ ಮತ್ತು ಗಂಗಾವತಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಾಗೂ  ಗಂಗಾವತಿಯ ನವಚೇತನ ಸಮಾಜ ಸೇವಾ ಟ್ರಸ್ಟನ ಸಿಬ್ಬಂದಿ ಶರಣಪ್ಪ ಭಾಗವಹಿಸಿದ್ದರು ಎಂದು ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.