ಲೋಕದರ್ಶನ ವರದಿ
ಗಂಗಾವತಿ 10: ಎನ್.ಎಚ್.ಎಂ. ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡಿರುವ ತಾಯಿ ಮತ್ತು ಮಕ್ಕಳ(ಎಂ.ಸಿ.ಎಚ್) ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿಯವರು ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಸವಡಿಯವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ಸಂಭವಿಸಿತು.
ಈ ಆಸ್ಪತ್ರೆಯನ್ನು ಉದ್ಘಾಟಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್.ಪಾಟೀಲ್ ಆಗಮಿಸಿದ್ದರು. ಇವರ ಸಮ್ಮುಖದಲ್ಲಿ ಈ ಘಟನೆ ನಡೆದು ಕೆಲಕಾಲ ಗೊಂದಲದ ವಾತಾವರಣ ನಿಮರ್ಾಣಗೊಂಡಿತು. ಆಸ್ಪತ್ರೆ ನಿಮರ್ಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುದಾನ ನೀಡಿವೆ. ವೇದಿಕೆಯಲ್ಲಿ ಅಳವಡಿಸಿರುವ ಫ್ಲೆಕ್ಸ್ನಲ್ಲಿ ಶಾಸಕ ಪರಣ್ಣ ಮುನವಳ್ಳಿ ಮತ್ತು ಸಂಸದ ಸಂಗಣ್ಣ ಕರಡಿಯವರ ಭಾವಚಿತ್ರಗಳು ಇರದ ಕಾರಣ ಶಾಸಕರ ಅಭಿಮಾನಿಗಳು ತಮ್ಮ ಆಕ್ರೋಶ ಹೊರ ಹಾಕಿದರು. ಉದ್ದೇಶ ಪೂರ್ವಕವಾಗಿ ಶಾಸಕರನ್ನು ಅವಮಾನ ಮಾಡುತ್ತಿದ್ದೀರಿ ಎಂಬ ಘೋಷಣೆಗಳನ್ನು ಕೂಗಿದರು. ಪೊಲೀಸರು ಶಾಸಕ ಮುನವಳ್ಳಿ ಅಭಿಮಾನಿಗಳನ್ನು ಸಮಾಧಾನ ಪಡಿಸಿದರು. ನಂತರ ಆಸ್ಪತ್ರೆ ಸಿಬ್ಬಂದಿ ಫ್ಲೆಕ್ಸ್ ತೆರವುಗೊಳಿಸಿ ಸಂಸದ ಸಂಗಣ್ಣ ಕರಡಿ, ಶಾಸಕ ಪರಣ್ಣ ಮುನವಳ್ಳಿಯವರ ಭಾವಚಿತ್ರ ಇರುವ ಹಳೆಯ ಫ್ಲೆಕ್ಸ್ ಅಳವಡಿಸಿದರು.
ಗುತ್ತಿಗೆದಾರನ ಕರಾಮತ್ತು: ಆಸ್ಪತ್ರೆ ನೂತನ ಕಟ್ಟಡ ಉದ್ಘಾಟನೆಗೆ ಸಂಬಂಧಿಸಿದಂತೆ ಕಟ್ಟಡ ನಿಮರ್ಾಣ ಗುತ್ತಿಗೆದಾರ ಸುರೇಶರೆಡ್ಡಿ ಎಂಬುವವರಿಗೆ ಜವಾಬ್ದಾರಿ ನೀಡಿದ್ದರು. ಈ ಗುತ್ತಿಗೆದಾರ ಪ್ರಮುಖ ರಾಜಕಾರಣಿಯ ಕುಮ್ಮಕ್ಕಿನಿಂದ ಶಾಸಕ ಮತ್ತು ಸಂಸದ ಫ್ಲೆಕ್ಸ್ ಅಳವಡಿದೆ ಇರುವದು ಈ ಎಲ್ಲಾ ಆವಾಂತರಕ್ಕೆ ಕಾರಣವಾಗಿದೆ.