ಲೋಕದರ್ಶನ ವರದಿ
ಕೊಪ್ಪಳ 14: ಜಿಲ್ಲೆಯ ಗಂಗಾವತಿ ನಗರದ ಕೆಪಿಪಿ ಕಾಳಪ್ಪನವರ್ ಮೈದಾನ ಜೆಎಸ್ಸ್ ಆಂಗ್ಲ ಮಾಧ್ಯಮ ಶಾಲೆಯ ಹತ್ತಿರ ಜುಲೈ ನಗರ ಮೈದಾನದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಗಂಗಾವತಿವತಿಯಿಂದ ದ್ವಿತೀಯ ಬಾರಿಗೆ ದಿ. 15ರಿಂದ ದಿ. 17ರವರೆಗೆ ಶನಿವಾರ, ರವಿವಾರ ಹಾಗೂ ಸೋಮವಾರ ದಿನಗಳಂದು ಪ್ರತಿ ಸಂಜೆ 6.30 ರಿಂದ ರಾತ್ರಿ 9.30 ರರವರೆಗೆ ಕನ್ನಡದಲ್ಲಿ ಸಾರ್ವಜನಿಕ ಕುರ್ಆನ್ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಇರವರು ಪ್ರವಚನ ಮಾಡಲಿದ್ದಾರೆ.
ದಿ. 15ರ ಶನಿವಾರ ಸಂಜೆ ಜರುಗುವ ಪ್ರವಚನದಲ್ಲಿ ಕೊಪ್ಪಳ ಶ್ರೀಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯವಹಿಸಲಿದ್ದು, ಗಂಗಾವತಿ ಶಾಸಕ ಪರಣ್ಣ ಉದ್ಟಾಟಿಸಲಿದ್ದಾರೆ. ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು, ಸಂಸದ ಸಂಗಣ್ಣ ಕರಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿಸುವರು. ಮಾನವ ಹಕ್ಕುಗಳು ಎಂಬ ವಿಷಯ ಕುರಿತು ಮುಹಮ್ಮದ್ ಕುಂಇ ರವರು ಪ್ರವಚನ ನೀಡಲಿದ್ದಾರೆ.
ದಿ. 16ರ ರವಿವಾರ ದಂದು ಸಂಜೆಗೆ ಸುಳೇಕಲ್ ಬಹ್ಮನಮಠದ ಶ್ರೀ ಭುವನೇಶ್ವರಯ್ಯ ತಾತನವರು ಸಾನಿಧ್ಯವಹಿಸಲಿದ್ದು ಮತ್ತು ಗಂಗಾವತಿ ಬಿಷಪ್ ಈಸಿಐ ಚರ್ಚ ರೆವರೆಂಡ್ ಜಾನ್ ಮುಳ್ಳೂರ್ ಜಂಟಿ ಸಾನಿಧ್ಯವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಕಂಪ್ಲಿ ಶಾಸಕ ಜೆಎನ್ ಗಣೇಶ, ಮಾಜಿ ಸಚಿವ ಶಿವರಾಜ್ ತಂಗಡಗಿ, ಮಾಜಿಸಂಸದ ಶಿವರಾಮೇಗೌಡ ಪಾಲ್ಗೊಲಿದ್ದು ಕೆಡುಕು ಮುಕ್ತ ಸಮಾಜ ವಿಷಯ ಕುರಿತು ಮುಹಮ್ಮದ್ ಕುಂಇ ರವರು ಪ್ರವಚನ ನೀಡಲಿದ್ದಾರೆ.
ದಿ. 17ರ ಸೋಮವಾರ ಸಂಜೆಗೆ ಕೂಡಲಸಂಗಮ ಪಂಚಮಸಾಲಿ ಪೀಠದ ಜ.ಶ್ರೀ ಬಸವಜಯ ಮೃತುಂಜಯ ಮಾಹಸ್ವಾಮಿಗಳು ಸಾನಿಧ್ಯವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿಶಾಸಕರಾದ ಹೆಚ್.ಆರ್.ಶ್ರೀನಾಥ, ಹೆಚ್,ಎಸ್.ಮುರಳಿಧರ್, ಜಿ.ವೀರಪ್ಪ ಕೆಸರಟ್ಟಿ ಪಾಲ್ಗೊಲಿದ್ದಾರೆ. ಸಂತೃಪ್ತ ಕುಟುಂಬ ವಿಷಯ ಮುಹಮ್ಮದ್ ಕುಂಇ ರವರು ಪ್ರವಚನ ನೀಡಲಿದ್ದಾರೆ. ಮೂರು ದಿನಗಳ ಕಾಲ ಬೆಳಗ್ಗಿನಿಂದ ಬೃಹತ್ ಇಸ್ಲಾಮಿ ಪುಸ್ತಕ ಮೇಳ ಜರುಗಲಿದೆ ಹಾಗೂ ಕಾರ್ಯಕ್ರಮದಲ್ಲಿ ಮಹಿಳೆಯರಿಗೂ ಸಹ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಕುರ್ಆನ್ ಪ್ರವಚನ ಸ್ವಾಗತ ಸಮಿತಿ ಪದಾಧಿಕಾರಿಗಳು ಪ್ರಟಕಟಣೆಯಲ್ಲಿ ತಿಳಿಸಿ ಸರ್ವವರನ್ನು ಸ್ವಾಗತಿಸಿದ್ದಾರೆ.