ಮಾಂಜರಿ 21: ಯಕ್ಸಂಬಾ ಪಟ್ಟಣದ ಕರ್ಲಹೊಂಡಲಿಂಗೇಶ್ವರ ಅನ್ನದಾನ ಸಮಿತಿ ವತಿಯಿಂದ ರೈತರು ಮತ್ತು ಸದಸ್ಯರು ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಸಮರ್ಪಕ ಮಳೆ ಸುರಿದು ದೂಧಗಂಗಾ ನದಿ ತುಂಬಿ ಹರಿಯುತ್ತಿರುವುದರಿಂದ ಶುಕ್ರವಾರ ದೂಧಗಂಗಾ ನದಿಗೆ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅಪರ್ಿಸಿದರು.
ಪ್ರಾರಂಭದಲ್ಲಿ 5 ಜನ ಸುಮಂಗಲೆಯರಿಂದ ನದಿಯ ಪೂಜೆ ನೆರವೇರಿತು. ಕಳೆದ 2-3 ವರ್ಷಗಳಿಂದ ಮಳೆಗಾಲದಲ್ಲಿ ಮಳೆಯು ಸಂಪೂರ್ಣವಾಗಿ ಕೈಕೊಟ್ಟಿತ್ತು. ಆದರೆ ಈ ವರ್ಷ ಮಳೆಯ ಪ್ರಮಾಣ ಹೆಚ್ಚಿಗೆ ಆಗಿ ನದಿಗಳು ತುಂಬಿ ಹರಿಯುತ್ತಿರುವುದರಿಂದ ರೈತರಿಗೆ ಅನೂಕೂಲವಾಗಿದೆ. ಪಟ್ಟಣದ ದೂದಗಂಗಾ ನದಿಯ ಪಾತ್ರ ತುಂಬಿ ಹರಿಯುತ್ತಿದ್ದು, ಮಳೆ ಹೆಚ್ಚಿಗೆ ಆಗಿದ್ದರಿಂದ ಪಟ್ಟಣದ ರೈತರು ಮತ್ತು ಸಾರ್ವಜನಿಕರು ದೂಧಗಂಗಾ ನದಿಗೆ ಬಾಗಿನ ಅಪರ್ಿಸಿ ಪೂಜೆ ಸಲ್ಲಿಸಿದರು.
ಕರ್ಲಹೊಂಡಲಿಂಗೇಶ್ವರ ಅನ್ನದಾನ ಸಮಿತಿ ಅಧ್ಯಕ್ಷ ಮಹೇಶ ಬಾಕಳೆ, ಸುರೇಶ ಹಿರೇಮಠ, ದರೆಪ್ಪಾ ಖೋತ, ಪುಂಡಲೀಕ ಹಿಟಣೆ, ಬಾಬು ಬಾಕಳೆ, ನಿಂಗಪ್ಪಾ ದವಣೆ, ಸುರೇಶ ಕಬಾಡೆ, ಪುಂಡಲೀಕ ಸಾತ್ವರ, ಪಂಡಿತ ಜಾಧವ, ಶ್ರಾವಣ ರಾಯಮಾನೆ, ಅಣ್ಣಪ್ಪಾ ಖೋತ, ಮಾರುತಿ ಮಜಗೆ, ರಾಹುಲ್ ನಾಯಿಕ್, ವಿಠ್ಠಲ ನಾಯಿಕ್ ಸೇರಿದಂತೆ ರೈತರು, ಮಹಿಳೆಯರು ಉಪಸ್ಥಿತರಿದ್ದರು,