ತಡರಾತ್ರಿಯಲ್ಲಿ ನಾಲ್ಕು ಮನೆಗಳಿಗೆ ಕಣ್ಣ ಹಾಕಿದ ಖರ್ತನಾಕ ಕಳ್ಳರ ಗ್ಯಾಂಗ್
Gang of thieves targets four houses late at night

ಜಮಖಂಡಿ 08: ತಡರಾತ್ರಿಯಲ್ಲಿ ನಾಲ್ಕು ಮನೆಗಳಿಗೆ ಕಣ್ಣ ಹಾಕಿದ ಖರ್ತನಾಕ ಕಳ್ಳರ ಗ್ಯಾಂಗ್....ಒಂದೇ ರಾತ್ರಿಯಲ್ಲಿ ನಾಲ್ಕು ಮನೆಗಳ ಬೀಗ್ ಮುರಿದು ಕಳ್ಳತನ ಮಾಡಲು ಮುಂದಾದ ಖದೀಮ ಕಳ್ಳರ ಗ್ಯಾಂಗ್..
ತಾಲ್ಲೂಕಿನ ನಾಗನೂರ ಗ್ರಾಮದಲ್ಲಿ ನಡೆದ ಭಯಾನಕ ಖರ್ತನಾಕ ಕಳ್ಳರು ಒಂದೇ ರಾತ್ರಿಯಲ್ಲಿ ನಾಲ್ಕು ಮನೆಗಳ ಬೀಗ್ ಮುರಿದು ಕಳ್ಳತನ ಮಾಡಿರುವದನ್ನು ನೋಡಿದ ಗ್ರಾಮಸ್ಥರು ಭಯಭೀತರಾಗಿರುವ ಘಟನೆ ಸಂಭವಿಸಿದೆ.
ಗ್ರಾಮದ ಉಮೇಶ ಕನಮುಚ್ಚನಾಳ ಅವರ ಮನೆಯ ಬೀಗ್ ಮುರಿದು ಟ್ರೇಜರಿ ಲಾಕ್‌ರ್ ಮುರಿದು ಅದರಲ್ಲಿ ಇರುವ ಮೂರು ತೊಲಿ, ಹತ್ತು ಗ್ರಾಂ, ಚಿನ್ನದ ತಾಳಿ ಸರ ಹಾಗೂ ಹದಿನೈದು ಸಾವಿರ ರೂಪಾಯಿಗಳ ನಗದು ಹಣವನ್ನು ಕಳ್ಳತನ ಮಾಡಲಾಗಿದ್ದು. ಅಲ್ಲಿಂದ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದು ಬರುತ್ತದೆ.
ಮತ್ತೆ ಅಲ್ಲಿಂದ ಬಸಪ್ಪ ಚನ್ನಪ್ಪ ಗಲಗಲಿ ಅವರ ಮನೆಯ ಬೀಗ್ ಮುರಿದು ಮನೆಯಲ್ಲಿ ಇರುವ ಬಂಗಾರ ಹಾಗೂ ಹಣ ಸಿಗಬಹುದೆಂಬ ನೀರೀಕ್ಷೆಯಿಂದ ಮನೆಯಲ್ಲಿ ಇರುವ ವಸ್ತುಗಳನ್ನು ಕಿತ್ತುಹಾಕಿ ಯಾವುದೇ ವಸ್ತುಗಳು ಸಿಗದ ಕಾರಣ ಅಲ್ಲಿಂದ ಪರಾರಿಯಾಗಿದ್ದಾರೆ.
ಮೂರನೇಯ ಮನೆಯಾದ ಶ್ರಾವಣ ಧನಪಾಲ ಅವರ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿ. ಅಲ್ಲಿಯೂ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಗದ ಹಿನ್ನಲೆಯಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ.
ಡಾ, ಪ್ರಸನ್ ಗಲಗಲಿ ಅವರ ರುತಿಕಾ ಕ್ಲಿನಿಕ್ ಬೀಗ್ ಮುರಿದು. ಕ್ಲಿನಿಕ್‌ನಲ್ಲಿ ಇರುವ ಸುಮಾರು 20, ಸಾವಿರ ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದು.
ಸಾಬು ಕೇದಾರಿ ಮಾಳಿ ಎಂಬವರ ದ್ವಿಚಕ್ರ ವಾಹನವನ್ನು ಖದೀಮ ಕಳ್ಳರು ಬೈಕ್ ಕದ್ದುಕೊಂಡು ಹೋಗುವ ಸಮಯದಲ್ಲಿ ಗ್ರಾಮದ ಹೊರಗೆ ಹಳ್ಳದ ಬಳಿಯಲ್ಲಿ ಬೈಕ್‌ನಲ್ಲಿ ಇರುವ ಪೆಟ್ರೋಲ್ ಖಾಲಿಯಾಗಿರುವ ಹಿನ್ನೆಲೆಯಲ್ಲಿ ಬೈಕ್‌ನಲ್ಲಿ ಇರುವ ವಾಯರ್‌ಗಳನ್ನು ಸುಟ್ಟುಹಾಕಿ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರಿಂದ ಮಾಹಿತಿ ತಿಳಿದು ಬರುತ್ತದೆ.
ಸ್ಥಳಕ್ಕೆ ಸಾವಳಗಿ ಪೋಲಿಸ್ ಠಾಣೆಯ ಪೋಲಿಸರು ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆಂದು ಮಾಹಿತಿ ಲಭ್ಯವಾಗಿದೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 