ರೈತರ ಮಹತ್ವ ಸಾರುವ ಗಣೇಶ ಮೂರ್ತಿ

ಲೋಕದರ್ಶನವರದಿ

ಹಾವೇರಿ : ಎಲ್ಲೆಲ್ಲೂ ವಿಘ್ನನಿವಾರಕ ಪ್ರತಿಷ್ಠಾಪನೆಯ ನೆರವೆರುತ್ತಿದ್ದು,ಪೂಜೆ ಸಲ್ಲಿಸುವ ಕಾರ್ಯ  ಭಕ್ತಾಧಿಗಳು ಮುಂದಾಗುತ್ತಿದ್ದಾರೆ. ಇದೊಂದು ಧಾಮರ್ಿಕ ಹಬ್ಬವಾಗಿ ಪರಿಗಣಿಸಿದೆ. ಆದರೆ ಇದು ಭಾರತೀಯ ಪರಂಪರೆಯ ಛಾಯೆಯಾಗಿ ಮಾಡುವ ಹಂಬಲವನ್ನು ರೈತನೊಬ್ಬ ಮಾಡಿರುವುದು ಎಲ್ಲರಿಗೂ ಅಚ್ಚರಿಯ  ವಿಷಯವಾಗಿದೆ.     ಜಿಲ್ಲೆಯ ಸವಣೂರ ತಾಲೂಕಿನ ನದಿನೀರಲಗಿ ಗ್ರಾಮದ ರೈತ ಯಲ್ಲೋಜಿರಾವ್ ನರೋಬ ಪವಾರ ಅವರು ತಮ್ಮ ಮನೆಯಲ್ಲಿ ದೇಶದ ಬೆನ್ನೆಲಬು ಎಂದು ಕರಿಸಿಕೊಳ್ಳುವ ರೈತರು ಬಳಸುವ ರೈತಾಪಿ ವರ್ಗದ ಮೂಲಭೂತ ಸಾಮಗ್ರಿಗಳನ್ನು ತಾವೇ ಸ್ವತಃ ನಿರ್ಮಾಣ  ಮಾಡುವ ಮೂಲಕ  ಗಣೇಶನ ಹಬ್ಬಕ್ಕೆ ವಿನೂತನ ಮೆರಗು ತಂದಿದ್ದಾರೆ.   ರೈತರು ಬಳಸುವ ಹಳೆಯ ಮಾದರಿಯ ಉಪಕರಣಗಳನ್ನು ಹಾಗೂ ರೈತರ ಜೀವಾಳ ಎತ್ತುಗಳು ಹೊಲದಲ್ಲಿ ಉಳಿಮೆ ಮಾಡುವ ಇತರೆ ಎಲ್ಲ ವಿವಿಧ ಕೆಲಸಗಳ ಮಾದರಿಯನ್ನು ನಿಮರ್ಾಣ ಮಾಡಿದ್ದಾರೆ. 

     ಉಪಕರಣಗಳಾದ ರಂಟಿ, ಕುಂಟಿ, ಚಕ್ಕಡಿ, ಗಳೆ ಹೊಡೆಯುವ, ಹೊಲದಲ್ಲಿ ಬೆಳೆ ಭಿತ್ತುವ, ಬೆಳೆ ಸಾಲು ಮಾಡುವ ಹಾಗೂ ಕಣದಲ್ಲಿ ಒಕ್ಕಲುತನ ಮಾಡುವ ಸೇರಿದಂತೆ ಅನೇಕ ಉತ್ತಮ ಮಾದರಿ ಮಾಡಿದ್ದನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ಬರುತ್ತಿದ್ದಾರೆ.  ಈ ಬಗ್ಗೆ ಪ್ರತಿಕ್ರಿಯಿಸಿದ ಯಲ್ಲೋಜಿರಾವ್ ನರೋಬ ಪವಾರ ಗಣೇಶ ಹಬ್ಬ ಎಲ್ಲರೂ ಮಾಡುತ್ತಾರೆ. ಆದರೆ ನಮ್ಮ ಮನೆಯಲ್ಲಿ ಏನಾದರೂ ವಿಶಿಷ್ಟವಾಗಿ ನಮ್ಮ ಗ್ರಾಮೀಣ ಭಾಗದ ಸೊಬಗು ಹಾಗೂ ಇತ್ತಿಚ್ಚಿಗೆ ಕೃಷಿಯ ಬಗ್ಗೆ ಆಸಕ್ತಿ ಕಡಿಮೆ ಆಗುತ್ತಿರುವ ಈ ಸಂದರ್ಭದಲ್ಲಿ ನಾನು ಒಬ್ಬ ಕೃಷಿಕನಾಗಿ ಕೃಷಿಯನ್ನು ಪ್ರೋತ್ಸಾಹಿಸಬೇಕು ಎಂಬ ಮಹಧಾಸೆಯಿಂದ ಸುಮಾರು 2-3 ತಿಂಗಳ ಹಿಂದಿನಿಂದಲೂ  ಮಾದರಿಗಳನ್ನು ತಯಾರು ಮಾಡುತ್ತಾ ಬಂದಿದ್ದೇನೆ. 

       ಇಂದಿನ ಕಾಲದ ರೈತರು  ಹಾಗೂ ಯುವಕರು ನಮ್ಮ ಮೂಲ ಕಸಬನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಎಲ್ಲರಿಗೂ ಅನ್ನದಾತರಾದ ರೈತ ಎಲ್ಲ ಸಮಸ್ಯೆಗಳನ್ನು ಎದುರಿಸಿ ಮುಂದೆ ಬರಬೇಕು. 

ಭಾರತ ಕೃಷಿ ಪ್ರಧಾನವಾಗಿದ್ದು  ಕೃಷಿಯನ್ನು   ಉತ್ತೇಜಿಸಬೇಕಾಗಿದೆ ರೈತನಾಗಿ ಕೃಷಿಯ ಎಲ್ಲ ಚಟುವಟಿಕೆಗಳಿಗೆ ಬೇಕಾದ ಮಾದರಿ ಮಾಡಿದ್ದೇನೆ ಎಂದು ಎಲ್ಲರೂ ಹೆಮ್ಮೆಯಿಂದ ಕೃಷಿಯನ್ನು ಬೆಳೆಸಬೇಕಾಗಿದೆ ಹೇಳಿದರು.