ಲೋಕದರ್ಶನ ವರದಿ
ರಾಣೇಬೆನ್ನೂರು08: ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮತ್ತು ಶಾಲಾ ಕಾಲೇಜು ವಿದ್ಯಾಥರ್ಿಗಳಿಗೆ ನಗರ ಠಾಣೆಯ ಪೊಲೀಸರು ಸಂಚಾರಿ ನಿಯಮಗಳ ಜಾಗೃತಿ ಜಾಥಾ ಮೆರವಣಿಗೆ ನಡೆಸಿದರು.
ನಗರ ಠಾಣೆಯಲ್ಲಿ ಗಣೇಶ ಹಬ್ಬದ ಅಂಗವಾಗಿ ಪ್ರತಿಷ್ಠಾಪಿಸಿದ ಗಣೇಶ ಮೂತರ್ಿ ಮತ್ತು ಹೆಲ್ಮೆಟ್ ಧರಿಸಿದ ಗಣೇಶ ಮೂತರ್ಿ ಪ್ರದರ್ಶನ ಮತ್ತು ಕೇಂದ್ರ ಸರಕಾರ ನೂತನವಾಗಿ ಜಾರಿಗೆ ತಂದ ಸಂಚಾರಿ ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ನಗರದ ಗ್ರಾಮೀಣ ಠಾಣೆ ಪೊಲೀಸರು ಗಣೇಶ ವಿಸರ್ಜನೆ ಅವಕಾಶವನ್ನು ಸದ್ಬಳಕೆ ಮಾಡಿಕೊಂಡರು.
ಕುಣಿದು ಕುಪ್ಪಳಿಸಿ, ಸಿಡಿಮದ್ದುಗಳನ್ನು ಸಿಡಿಸಿ ಪರಿಸರಕ್ಕೆ ಹಾನಿ ಮಾಡುವುದು ಬೇಡ, ಮೆರವಣಿಗೆಯಲ್ಲಿ ಸಮಯ ವ್ಯರ್ಥ ಮಾಡುವುದು ಬೇಡ ಮೆರವಣಿಗೆ ಸಮಯವನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳಿಂದ ಸಂಚಾರಿ ನಿಯಮಗಳ ಜಾಗೃತಿ ಮೂಡಿಸುವ ನಿಧರ್ಾರ ಕೈಗೊಂಡು ವಿಸರ್ಜನೆ ವೇಳೆ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದ್ದು ನಗರದಲ್ಲಿ ಹೊಸ ಪ್ರಯೋಗವಾಗಿತ್ತು.
ಸಂಚಾರಿ ನಿಯಮಗಳ ಜಾಥಾಕ್ಕೆ ಡಿವೈಎಸ್ಪಿ ಟಿ.ಸುರೇಶ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ ನಂತರ ಮಾತನಾಡಿ, ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಪರಿಪಾಲನೆ ಮಾಡಬೇಕು. ಇದರಿಂದ ಅವಘಡಗಳು ಸಂಭವಿಸುವುದು ಕಡಿಮೆಯಾಗುತ್ತದೆ ಎಂದರು.
ಗ್ರಾಮೀಣ ಠಾಣೆಯಿಂದ ಪ್ರಾರಂಭವಾದ ಜಾಥಾವು ಕುರುಬಗೇರಿ ವೃತ್ತ, ದುಗರ್ಾ ಸರ್ಕಲ್, ಎಂ.ಜಿ.ರಸ್ತೆ, ಅಂಚೇ ಕಚೇರಿ ವೃತ್ತ, ಅಶೋಕ ವೃತ್ತ, ಬಸ್ ನಿಲ್ದಾಣ ರಸ್ತೆ, ಮೇಡ್ಲೇರಿ ಕ್ರಾಸ್ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ಬೈಕ್ ಮೇಲೆ ಕುಳಿತು ಹೆಲ್ಮೆಟ್ಧಾರಿ ಗಣೇಶ ಮೆರವಣಿಗೆಯುದ್ದಕ್ಕೂ ಹೆಚ್ಚು ವಿಶೇಷ ಆಕರ್ಷಣೆಯವಾಗಿತ್ತು. ವಿದ್ಯಾಥರ್ಿಗಳು ಮೆರವಣಿಗೆಯುದ್ದಕ್ಕೂ ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚಿ ನಂತರ ಸಂಚಾರಿ ನಿಯಮಗಳ ಕುರಿತು ಘೋಷಣೆಗಳನ್ನು ಕೂಗಿದರು.
ನಗರದ ವಿವಿಧ ಶಾಲೆಗಳ ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸಿಪಿಐ ಸುರೇಶ ಸಗರಿ, ಸಬ್ಇನಸ್ಪೆಕ್ಟರ್ ದೇವರಾಜ್, ಪ್ರಭು ಕೆಳಗಿನಮನಿ ಮತ್ತು ದೇಸಾಯಿ, ಚಂದ್ರು ಸಣ್ಣಮನಿ, ಮೋಹನ್ ಮೇಲಗಿರಿ, ದೊಡ್ಡಮನಿ, ಮುಗದೂರು, ಬಾಳಿಕಾಯಿ ಇದ್ದರು.
ಮಾಡುವ ಕಾಯಕದಲ್ಲಿ ನಿಷ್ಠೆ ಅಗತ್ಯ