ಬಾಗಲಕೋಟೆ: ಜಿಲ್ಲೆಯ ಲಕ್ಷಾಂತರ ಜನ ಪ್ರವಾಹಕ್ಕೆ ಒಳಗಾಗಿ ಸಂಕಷ್ಟದಲ್ಲಿರುವದರಿಂದ ಈ ಬಾರಿ ಗಣೇಶೋತ್ಸವ ಹಾಗೂ ಮೊಹರಂ ಹಬ್ಬವನ್ನು ಸರಳವಾಗಿ ಶ್ರದ್ಧಾ-ಭಕ್ತಿ ಪೂರಕವಾಗಿ ಆಚರಿಸಬೇಕೆಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾಡಳಿತದ ಸಭಾ ಭವನದಲ್ಲಿಂದು ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬಗಳ ಶಾಂತತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಈ ಬಾರಿಯ ಗಣೇಶೋತ್ಸವ ಸರಳವಾಗಿ ಆಚರಿಸಿ ನೊಂದ ಜೀವಿಗಳಿಗೆ ಸಹಾಯಹಸ್ತ ನೀಡುವಂತೆ ವಿನಂತಿಸಿಕೊಂಡರು. ವಾಯು ಮಾಲಿನ್ಯ ತಡೆಗೆ ಪಿ.ಓ.ಪಿ ಗಣಪತಿ ಬಳಸದೇ ಕೇವಲ ಮಣ್ಣಿನ ಗಣೇಶ ಮೂತರ್ಿಗಳನ್ನು ಪೂಜಿಸುವಂತೆ ಜಿಲ್ಲಾಧಿಕಾರಿ ಕರೆ ನೀಡಿದರು.
ಸ್ವಚ್ಚತೆ ಹಾಗೂ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ತಡೆಯಲು ಪಟಾಕಿ ಹಾಗೂ ಕರ್ಕಶ ಧ್ವನಿಯ ಡಿ.ಜೆ ಗಳನ್ನು ಬಳಸದಂತೆ ಜಿಲ್ಲಾಧಿಕಾರಿ ಕೋರಿದರು. ಇಡೀ ದೇಶದಲ್ಲಿ ಸ್ವಚ್ಚ ಭಾರತ ಅಭಿಯಾನವು ಚಾಲನೆಯಲ್ಲಿದ್ದು, ಜಿಲ್ಲೆಯ ಸಾರ್ವಜನಿಕರು ಸ್ಚಚ್ಚತೆಯ ಅಭಿಯಾನದಲ್ಲಿ ಕೈ ಜೋಡಿಸಬೇಕು ಎಂದರು. ಈ ಬಾರಿ ವಿಶ್ವಸಂಸ್ಥೆಯಲ್ಲಿಯೂ ಗಣೇಶೋತ್ಸವವನ್ನು ಆಚರಿಸಲಾಗುತ್ತಿದ್ದು, ಭಾರತದ ಸಾಂಸ್ಕ್ರತಿಕ ಪರಂಪರೆ ಸಾಂಪ್ರದಾಯನ್ನು ಎತ್ತಿ ಹಿಡಿದಂತಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಥಳಿಯರಿಗೆ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಹೆಸ್ಕಾಂ ನಿರಂತರ ವಿದ್ಯುತ್, ಎಲ್ಲೆಡೆ ಲೈನಮೇನ್ಗಳು ಜಾಗೃತರಾಗಿರಬೇಕು. ಯಾವುದೇ ಅನಾಹುತ ಆಗದಂತೆ ಎಚ್ಚರ, ಪಯರ್ಾಯ ಟಿ.ಸಿ ಯನ್ನು ಇಟ್ಟುಕೊಳ್ಳಲು ಸೂಚಿಸಿದರು. ಸಾರ್ವಜನಿಕ ಗಣಪತಿ ಮಂಟಪಗಳಲ್ಲಿ ತಾತ್ಕಾಲಿಕ ಮೀಟರ್ ಅಳವಡಿಸಿಕೊಳ್ಳಬೇಕು. ಹೈಟೆನ್ಷನ್ ತಂತಿ ಕೆಳಗೆ ಮಂಟಪಬೇಡ ಎಂದರು. ಎಷ್ಟು ಎತ್ತರದ ಗಣೇಶ ಮಂಟಪ ಎಂದು ಮೊದಲೇ ತಿಳಿಸಬೇಕು. 2015 ರ ಮುಧೋಳದಲ್ಲಿ ಜರುಗಿದ ಅವಘಡ ನಡೆಯದಂತೆ ಎಚ್ಚರವಹಿಸಬೇಕು. ನಗರಸಭೆ ಅಧಿಕಾರಿಗಳಿಗೆ ಸ್ಚಚ್ಚತೆ, ಬೀದಿ ದೀಪ, ಫಾಗಿಂಗ್ ಹಾಗೂ ರಸ್ತೆ ಗುಂಡಿ ಮುಚ್ಚಿಸಲು ಸೂಚಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಕಾರಿ ಲೋಕೇಶ ಜಗಲಾಸರ ಮಾತನಾಡಿ ಗಣೇಶ ಹಾಗೂ ಮೊಹರಂ ಹಬ್ಬಗಳು ಏಕಕಾಲಕ್ಕೆ ಬಂದಿರುವದರಿಂದ ಎಲ್ಲರೂ ಶಾಂತಿ, ಸಹಕಾರದಿಂದ ಸೌಹಾರ್ದತವಾಗಿ, ಗೌರವಪೂರಕವಾಗಿ ಆಚರಿಸಬೇಕೆಂದು.
ಇನ್ನೊಬ್ಬರ ಧರ್ಮಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಪರಸ್ಪರ ಭಾತೃತ್ವದಿಂದ ಹಬ್ಬ ಆಚರಿಸಲು ಹಾಗೂ ಈ ಹಿಂದೆ ಎಲ್ಲರೂ ಯಾವ ರೀತಿ ಪರಸ್ಪರ ಸಹೋದರತ್ವದಿಂದ ಆಚರಿಸಿದಂತೆ ಈ ಬಾರಿಯೂ ಅದೇ ರೀತಿ ನಡೆದುಕೊಳ್ಳುವಂತೆ ತಿಳಿಸಿದರು. ಸಿಮೇಂಟ್ ಕ್ವಾರಿ, ಮಹಾ ರುದ್ರಪ್ಪನ ಹಳ್ಳದಲ್ಲಿ ಸಾರ್ವಜನಿಕರು ಗಣೇಶ ಮೂತರ್ಿಯನ್ನು ರಾತ್ರಿ 10ರ ಒಳಗಾಗಿ ವಿಸಜರ್ಿಸಬೇಕು. ಎಲ್ಲೆಡೆ ಸಿ.ಸಿ ಟಿವಿ ಕ್ಯಾಮರಾ ಅಳವಡಿಸಲಾಗುವದು ಹಾಗೂ ಸಾರ್ವಜನಿಕ ಗಣೇಶೋತ್ಸವವನ್ನು 5 ಮತ್ತು 7 ದಿನಗಳ ಮಾತ್ರ ಆಚರಿಸಲು ಸೂಚಿಸಿದರು.
ಅಗ್ನಿ ದುರಂತ ಸಭವಿಸದಂತೆ ಮುನ್ನೆಚ್ಚರಿಕೆಯಾಗಿ ಎಲ್ಲ ಪೆಂಡಾಲಗಳಲ್ಲಿ 5-6 ಮರಳಿನ ಬಕೇಟ್ ಇಡುವದು, ಇಲಾಖೆಯ ನಿಗದಿತ ನಮೂನೆಯ ಅಜೀ ಭತರ್ಿ ಮಾಡಿ ಮುಂಚಿತವಬಾಗಿ ಪರವಾನಿಗೆ ಪಡೆಯಬೇಕು. ಮುಖಂಡರು ತಮ್ಮ ಸ್ವಯಂ ಸೇವಕರನ್ನು ನೇಮಿಸಿಕೊಂಡು ಹಗಲು-ರಾತ್ರಿ ಪೋಲಿಸ ಜೊತೆ ಸಹಕರಿಸುವಂತೆ ಕೋರಿದರು.
ಮುಖಂಡರುಗಳಾದ ಅಶೋಕ ಲಿಂಬಾವಳಿ ಮಾತನಾಡಿ ಜಿಲ್ಲಾಧಿಕಾರಿಗಳ ಮನಿವಿಯಂತೆ ಸಂತ್ರಸ್ತರ ನೋವಿನಲ್ಲಿ ಭಾಗಿಯಾಗಿ ಸರಳವಾದ ಆಚರಣೆಗೆ ಸಹಕಾರ ನೀಡುತ್ತೇವೆ ಎಂದರು. ಗಜಾನನ ಶಹರ ಮಂಡಳಿಯಿಂದ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ 1 ಲಕ್ಷ ರೂ ನೀಡಲಾಗುವದು. ಮಾಧವ ಸೇವಾ ಮಂಡಳಿಯಿಂದ ಜಾಗೋ ಹಿಂದುಸ್ಥಾನಿ ದೇಶಭಕ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಮತಿಗಾಗಿ ಸಭೆಗೆ ತಿಳಿಸಿದರು.
ರಾಜು ನಾಯ್ಕರ ಮಾತನಾಡಿ ಸಾರಾಯಿ ಬಂದ್, ಗ್ರಾಮೀಣ ಪ್ರದೇಶಗಳಲ್ಲಿ ಎಮ್.ಎಸ್.ಆಯ್.ಎಲ್ ತೆರೆದಿರುತ್ತವೆ ಈ ಬಗ್ಗೆ ಪೋಲಿಸ ನಿಗಾ ವಹಿಸುವದು ಅಗತ್ಯವೆಂದರು. ಎಮ್.ಎಮ್.ದಾಂಡಿಯಾ ಮಾತನಾಡಿ ಸೆ. 5 ರಂದು ಹಾಗೂ 10 ರಂದು ಮೊಹರಂ ಹಬ್ಬದ ನಿಮಿತ್ತ ನಗರದ ಪಂಖಾ ಮಸೀದಿ ಹತ್ತಿರ ಪಂಜಾಗಳು ಕೂಡುವ ಹಿನ್ನಲೆಯಲ್ಲಿ ಜನ ದಟ್ಟಣೆಯಾಗುವದರಿಂದ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ದುಗರ್ೇಶ ರುದ್ರಾಕ್ಷಿ, ಪ್ರೋಬೆಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪನ್ವಾರ, ಉಪವಿಭಾಗಾಧಿಕಾರಿ ಎಚ್.ಜಯಾ ಸೇರಿದಂತೆ ಮುಖಂಡರಾದ ನಾಗರಾಜ ಹದ್ಲಿ, ಮಾದಿವಿ ರಾಠೋಡ, ಹನುಮಂತ ನಾರಾಯಣಿ, ಜ್ಯೋತಿ ಭಜಂತ್ರಿ, ಎನ್,ಜಿ.ಪವಾರ, ಮನೋಹರ ಎಳ್ಳೆಮ್ಮಿ ವಾಯ್.ಜೆ. ಪಠಾಣ, ಹಾಜಿಸಾಬ ದಂಡಿನ್, ಶಪೀಕ ದೊಡಕಟ್ಟಿ, ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.