ಆಲಮೇಲ ಠಾಣೆಯಲ್ಲಿ ಗಣೇಶ ಈದ್ ಮಿಲಾದ್ ಶಾಂತಿ ಸಭೆ
Ganesh Eid Milad peace meeting at Alamela police station
ಆಲಮೇಲ 24: ಪಟ್ಟಣದ ಪೊಲೀಸ್ ಸ್ಟೇಷನ್ ಆವರಣದಲ್ಲಿ ಹಿಂದೂ- ಮುಸ್ಲಿಂ ಮುಖಂಡರು ಗ್ರಾಮಸ್ಥರ ಜೊತೆ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆ ದಿ. 23ರಂದು ಸಂಜೆ 5 ಗಂಟೆ ಜರುಗಿತು.
ಸಿಂದಗಿ ಸಿಪಿಐ ನನಾಗೌಡ್ ಪಾಟೀಲ ಮಾತನಾಡಿ ಕಾನೂನು ನಿಯಮ ಪಾಲನೆ ಮಾಡುವ ಮೂಲಕ ಹಬ್ಬಗಳನ್ನು ಆಚರಣೆ ಮಾಡಬೇಕು. ಪ್ರತಿ ಗಣೇಶ್ ಪೆಂಡಾಳಿಗಳ ಒಳಗೆ ಮತ್ತು ಹೊರಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಸಾರ್ವಜನಿಕ ಮಂಡಳಿಗಳು ಆಯಾ ಗ್ರಾಮ ಪಂಚಾಯಿತಿಗಳ ಪರವಾನಿಗೆ ಪಡೆದುಕೊಂಡು. ಪೊಲೀಸ್ ಇಲಾಖೆಯ ಅನುಮತಿಗಾಗಿ ಆಲಮೇಲ ಪೊಲೀಸ್ ಠಾಣೆಯ ಸಂಪರ್ಕಿಸಿ ಅನುಮತಿ ಪಡೆದುಕೊಳ್ಳಬೇಕು. ಪ್ರತಿ ಮಂಡಳಿಗಳ ಸದಸ್ಯರ ಹೆಸರು ಮೊಬೈಲ್ ನಂಬರನೊಂದಿಗೆ ಮಾಹಿತಿಯನ್ನು ಒದಗಿಸಬೇಕು. ಆಲಮೇಲ ಠಾಣೆ ವ್ಯಾಪ್ತಿಯಲ್ಲಿ 42 ಗ್ರಾಮಗಳಿರುವುದರಿಂದ ಪ್ರತಿ ಮಂಡಳಿಗಳಿಗೂ ಪೊಲೀಸ್ ಸಿಬ್ಬಂದಿ ನೇಮಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಮಂಡಳದ ಸದಸ್ಯರು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿದೊಂದಿಗೆ ಸಹಕಾರ ನೀಡಬೇಕು.
ಆಲಮೇಲ ಪಿಎಸ್‌ಐ ಅರವಿಂದ್ ಅಂಗಡಿ ಮಾತನಾಡಿ ಪ್ರತಿ ಮಂಡಳಿಯ ವಾಟ್ಸಪ್ ಗುಂಪು ಮಾಡಿ ಪೊಲೀಸ್ ಇಲಾಖೆಯಿಂದ ಬರುವ ಸುತ್ತೋಲೆ ಪಾಲನೆ ಮಾಡುತ್ತ ಒಟ್ಟಾಗಿ ಸಹಕಾರದಿಂದ ಶಾಂತಿ ಸುವ್ಯವಸ್ಥೆ ರೀತಿಯಲ್ಲಿ ಗಣೇಶ್ ಹಾಗೂ ಈದ್ ಮಿಲಾದ್ ಹಬ್ಬ ಆಚರಿಸಲು ಸಹಕರಿಸಬೇಕು. ಪೊಲೀಸ್ ಠಾಣೆಯಲ್ಲಿ ಪರವಾನಿಗೆ ನೀಡಲು ಚಾಲನೆ ನೀಡಲಾಗುವುದು. ಗಣೇಶನ ವಿಸರ್ಜನೆ ಸಮಯದಲ್ಲಿ ಜಾತಿ ಧರ್ಮಕ್ಕೆ ಪ್ರಚೋದನೆ ಹಾಡುಗಳನ್ನು ಹಾಕಬಾರದು ಎಂದು ಡಿಜೆ ಮಾಲಕರಿಗೆ ಸೂಚನೆ ನೀಡಿದರು. ಕರ್ಕಶ ಶಬ್ದ ಮಾಡುವ ಡಿಜೆ.ಡಾಲ್ಬಿಗಳನ್ನು ಸರಕಾರ ಸಂಪೂರ್ಣ ನಿಷೇಧಿಸಿದೆ. ಸಂಪ್ರದಾಯಿಕ ವಾದ್ಯಗಳನ್ನು ಬಳಸಿಕೊಳ್ಳಬಹುದು. ಮಧ್ಯ ಸೇವನೆ ಮಾಡಿ ಗಲಭೆಗೆ ಅವಕಾಶ ಮಾಡುವಂತವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಲೂಕು ದಂಡಾಧಿಕಾರಿ ಧನಪಾಲ್ ಶೆಟ್ಟಿ ಮಾತನಾಡಿ ಮಹಾರಾಷ್ಟ್ರ ಗಡಿ ಭಾಗದಲ್ಲಿರುವುದರಿಂದ ಆಲಮೇಲ ಸಂಸ್ಕೃತಿಯ ತವರಾಗಿದೆ ಎಂದು ಹೇಳಿದರು. ಸುರೇಶ್ ನಾಯಕ್, ಗಣೇಶ ಮಂಡಳಿಯ ಅಧ್ಯಕ್ಷ ಮೈಬೂಬ್ ಮಸಳಿ ಮಾತನಾಡಿ ಮೊನ್ನೆ ನಡೆದ ವಿಜಯಪುರ ಜಿಲ್ಲೆಯ ಗಣೇಶ್ ಚತುರ್ಥಿಯ ಶಾಂತಿ ಸಭೆಯಲ್ಲಿ ಪಾಲ್ಗೊಂಡು ಎಸ್ಪಿ ಅವರ ಜೊತೆ ಮಾತನಾಡಿದ್ದೇನೆ. ಹಿಂದೂ ಮುಸ್ಲಿಮ ಭಾವೈಕ್ಯತೆಯಿಂದ ಇದ್ದೀವಿ. ಉತ್ತರ ಕರ್ನಾಟಕದಲ್ಲಿ ಆಲಮೇಲ ಪ್ರಮುಖವಾದ ಸ್ಥಳವಾಗಿದೆ. ಪಟ್ಟಣದ ಅನೇಕ ರೀತಿಯಲ್ಲಿ ಚೌಕಿನರು ಡೆಕೋರೇಷನ್‌ದೊಂದಿಗೆ ಗಣೇಶ್ ಮೆರವಣಿಗೆ ಮಾಡುತ್ತಿದ್ದಾರೆ. ಆದ್ದರಿಂದ ನಮಗೆ ಸಾಯಂಕಾಲದಿಂದ ಬೆಳಗ್ಗೆವರೆಗೆ ಟೈಮ್ ಕೊಡಿ ಎಂದು ಕೇಳಿದ್ದೇನೆ ಎಂದರು.
ಸಂತೋಷ್ ಪಾಟೀಲ( ಏಇಃ) ಹಿಂದೂ- ಮುಸ್ಲಿಂ ನಾವು ಭಾವೈಕ್ಯತೆದಿಂದ ಇರುವ ಉರಿದು ಯಾವುದೇ ಅಹಿತಕರ ಘಟನೆ ವಾಗುವುದಿಲ್ಲ. ನಮ್ಮ ಮುಸ್ಲಿಮ ಯುವಕರ ಜೊತೆ ಮೀಟಿಂಗ್ ಕರೆದು ಮಾತನಾಡುತ್ತೇನೆ. ಒಂದು ವೇಳೆ ಅಂಥ ಘಟನೆಗಳು ನಡೆದರೆ ನಾನು ಪಟ್ಟಣ ಪಂಚಾಯಿತಿಗೆ ಕೂಡಲೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.
ಸಾಧಿಕ್ ಸುಂಬುಡ ಪಟ್ಟಣ ಪಂಚಾಯಿತಿ ಅಧ್ಯಕ್ಷರು
ಆಲಮೇಲ ಮುಖಂಡರಾದ ನಾಗರಿಕ ವೇದಿಕೆ ಅಧ್ಯಕ್ಷ ರಮೇಶ್ ಬಂಟನೂರ, ಮಾಜಿ ಎಪಿಎಂಸಿ ಅಧ್ಯಕ್ಷ ಪ್ರಭು ವಾಲಿಕರ, ರೈತ ಮುಖಂಡರಾದ ಬಸವರಾಜ ತೇಲ್ಲೊರ, ಬಿಜೆಪಿ ಯುವ ಮುಖಂಡರಾದ ಹರೀಶ್ ಯಂಟಮನ, ಶ್ರೀಶೈಲ್ ಮಡಪತಿ ಮಾತನಾಡಿದರು. ವಾಬ್ ಸುಂಬುಡ, ರಾಜಹ್ಮದ್ ಬೆಣ್ಣೆಶ್ವರ, ಚಂದು ಹಳಿಮನಿ, ಶಶಿ ಗಣಿಯಾರ, ಅಪ್ಪು ಶೆಟ್ಟಿ ಅನೇಕ ಯುವಕರು, ಹಿರಿಯರು ಪಾಲ್ಗೊಂಡಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 