ರಾಮದುರ್ಗ 11: ಈ ಬಾರಿ ಗಣೇಶ ಚತುಥರ್ಿ, ಮೊಹರಂ ಹಬ್ಬಗಳು ಒಂದೆ ಕಾಲಕ್ಕೆ ಆಚರಣೆಗೆ ಬಂದಿದ್ದು, ಹಿಂದು-ಮುಸ್ಲಿಂ ಬಾಂಧವರು ಹಬ್ಬವನ್ನು ಕಾನೂನು ಉಲ್ಲಂಘನೆಯಾಗಂತೆ ಶಾಂತಿಯುತವಾಗಿ ಆಚರಣೆ ಮಾಡಬೇಕೆಂದು ಡಿವೈಎಸ್ಪಿ ಕರುಣಾಕರ ಶೆಟ್ಟಿ ಕರೆ ನೀಡಿದರು.
ಪಟ್ಟಣದ ತಹಶೀಲ್ದಾರ ಕಾಯರ್ಾಲಯದಲ್ಲಿ ಸೋಮವಾರ ಸಂಜೆ ಮೊಹರಂ ಹಾಗೂ ಗಣೇಶ ಚತುಥರ್ಿಯ ಅಂಗವಾಗಿ ಅಂಜುಮನ್ ಇಸ್ಲಾಂ ಕಮಿಟಿ ಹಾಗೂ ಗಣೇಶೋತ್ಸವ ಆಚರಣಾ ಕಮಿಟಿಯ ಪದಾಧಿಕಾರಿಗಳಿಗೆ ಕರೆದ ಶಾಂತಿ ಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.
ರಾಮದುರ್ಗದಲ್ಲಿ ಹಿಂದು-ಮುಸ್ಲಿಂರು ಸಹೋದರತೆಯಿಂದ ಸರ್ವ ಕೋಮಿನ ಹಬ್ಬವನ್ನು ಪರಸ್ಪರರು ಪಾಲ್ಗೊಂಡು ಆಚರಣೆ ಮಾಡಿಕೊಂಡು ಬರುವ ರೂಢಿ ಇದೆ. ಯುವ ಜನತೆ ಕೋಮು ಸೌಹಾರ್ಧತೆಗೆ ಧಕ್ಕೆ ಉಂಟಾಗದಂತೆ ಹಬ್ಬ ಆಚರಣೆ ಮಾಡಬೇಕು. ಒಂದು ವೇಳೆ ಕಾನೂನು ಉಲ್ಲಂಘಿಸಿದ್ದು ಕಂಡುಬಂದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗಣೇಶ ಮೂತರ್ಿಗಳನ್ನು ಮೊಹರಂ ಆಚರಣೆಯ ಸಂಚಾರಕ್ಕೆ ಅಡ್ಡಿಯಾಗದಂತೆ ಪೆಂಡಾಲ್ ನಿಮರ್ಿಸಿ ಮೂತರ್ಿ ಪ್ರತಿಷ್ಠಾಪನೆ ಮಾಡಬೇಕು. ಕರ್ಕಶ, ಧ್ವನಿವರ್ಧಕ, ಡಾಲ್ಬಿ ಸೌಂಡ್ ಸಿಸ್ಟಂ ಸಂಪೂರ್ಣ ನಿಷೇಧಿಸಲಾಗಿದೆ. ದೀಪಾಲಂಕಾರದ ಸಂದರ್ಭದಲ್ಲಿ ಸಂಪೂರ್ಣವಾಗಿ ವಿದ್ಯುತ್ ಸಂಪರ್ಕವನ್ನು ಗಮನಿಸಿ ತೊಂದರೆಯಾಗದಂತೆ ಕಮಿಟಿಯವರು ನೋಡಿಕೊಳ್ಳಬೇಕೆಂದು ತಿಳಿಸಿದರು.
ಪಿಎಸ್ಐ ಆರ್. ಎಂ. ಸಂಕನಾಳ ಮಾತನಾಡಿ, ಹಬ್ಬ ಆಚರಣೆಗೂ ಪೂರ್ವದಲ್ಲಿ ಆಚರಣೆಗೆ ಉಂಟಾಗುವ ತೊಡಕುಗಳನ್ನು ನಿವಾರಿಸಲು ಜನಸ್ನೇಹಿ ಪೋಲೀಸ್ ವ್ಯವಸ್ಥೆ ಕಲ್ಪಿಸಲು ಸಭೆ ಕರೆಯಲಾಗಿದೆ. ಮೊಹರಂ ಹಾಗೂ ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಲಾಖೆಯ ಸೂಚನೆಗಳನ್ನು ಎಲ್ಲರೂ ಪಾಲಿಸಿ ಸಹಕರಿಸಬೇಕೆಂದು ಮನವಿ ಮಾಡಿದರು.
ತೇರಬಜಾರ ಗಣೇಶ ಉತ್ಸವ ಕಮಿಟಿಯ ಪದಾಧಿಕಾರಿಗಳು ಜುನಿಪೇಠಯ ಮಾರ್ಗವನ್ನು ಟ್ರಾಫಿಕ್ ಸಮಸ್ಯೆಯಿಂದ ಪಾರಾಗುವಂತಾಗಲು ಒನ್ವೇ ಮಾರ್ಗ ಪಾಲನೆಯಾಗುವಂತೆ ಸಿಬ್ಬಂದಿ ನೇಮಕ ಮಾಡಬೇಕು ಎಂದು ಸಭೆಗೆ ತಿಳಿಸಿದರು.
ತಹಶೀಲ್ದಾರ ಆರ್. ವ್ಹಿ. ಕಟ್ಟಿ, ಸಿಪಿಐ ಶ್ರೀನಿವಾಸ ಹಾಂಡ, ಕ್ರೈ ಪಿಎಸ್ಐ ಶೋಭಾ ಭೋಸ್ಲೆ, ಪುರಸಭೆ ಮುಖ್ಯಾಧಿಕಾರಿ ವಿಶ್ವನಾಥ ಸೊಗಲದ ಮುಖಂಡರಾದ ಮಹ್ಮದಶಫೀ ಬೆಣ್ಣಿ, ಪಟ್ಟಣದ ವಿವಿಧ ಗಣೇಶ ಉತ್ಸವ ಕಮಿಟಿಯ ಪದಾಧಿಕಾರಿಗಳು, ಪುರಸಭೆ ಸದಸ್ಯರು ಸೇರಿದಂತೆ ಇತರರಿದ್ದರು.
ಪೋಟೋ ಶೀಷರ್ಿಕೆಃ 10ಆರ್ಎಎಂ-2
ಗಣೇಶ ಚತುಥರ್ಿ ಹಾಗೂ ಮೊಹರಂ ಹಬ್ಬದ ಪ್ರಯುಕ್ತ ಏರ್ಪಡಿಸಿದ ಶಾಂತಿ ಪಾಲನಾ ಸಭೆಯಲ್ಲಿ ಡಿವೈಎಸ್ಪಿ ಕರುಣಾಕರ ಶೆಟ್ಟಿ ಮಾತನಾಡಿದರು.
01