ಗದಗ: ಮಹಾತ್ಮಾ ಗಾಂಧೀಜಿಯವರು ಈ ದೇಶ ಕಂಡಂತಹ ಮಹಾನ ಚೇತನ. ಮಹಾತ್ಮಾ ಗಾಂಧೀಜಿಯವರ ವಿಚಾರ ಧಾರೆ, ದೂರದೃಷ್ಟಿ ಚಿಂತನಗೆಳನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಛಾಯಾ ಚಿತ್ರ ಪದರ್ಶನ ಅನಾವರಣಗೊಳಿಸಿದೆ ಎಂದು ರಾಜ್ಯ ವಸತಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವರಾದ ವಿ.ಸೋಮಣ್ಣ ಅಭಿಪ್ರಾಯಪಟ್ಟರು.
ಗದಗ ಹೊಸ ಬಸ ನಿಲ್ದಾಣದಲ್ಲಿಂದು ಮಹಾತ್ಮಾ ಗಾಂಧೀಜಿ 150ನೇ ಜನ್ಮ ವರ್ಷಚರಣೆ ಅಂಗವಾಗಿ ಗಾಂಧೀಜಿಯವರ ಜೀವನ ಸಾಧನೆ ಕುರಿತು ಜಿಲ್ಲಾಡಳಿತ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಾಯುವ್ಯ ಕನರ್ಾಟಕ ರಸ್ತೆ ಸಾರಿಗೆ ಗದಗ ವಿಭಾಗದ ಸಹಯೋಗದಲ್ಲಿ ವತಿಯಿಂದ ಏರ್ಪಡಿಸಲಾದ ಮೂರು ದಿನಗಳ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿ ಅವರು ಮಾತನಾಡಿದರು. ಗಾಂಧೀಜಿಯವರ ಜೀವನವೆ ಸಂದೇಶವಾಗಿದೆ ನಾವೆಲ್ಲರೂ ಅವರ ಚಿಂತನೆ, ತತ್ವಾದರ್ಶಗಳನ್ನು ಅರಿತು ನವಭಾರತದ ನಿಮರ್ಾಣ ಮಾಡಲು ಮುಂದಾಗಬೇಕು ಎಂದು ಸಚಿವ ವಿ.ಸೋಮಣ್ಣ ನುಡಿದರು.
ಛಾಯಾಚಿತ್ರ ಪ್ರದರ್ಶನವನ್ನು ರಾಜ್ಯದ ಗಣಿ, ಭೂ ವಿಜ್ಞಾನ, ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಉದ್ಘಾಟಿಸಿ ಮಾತನಾಡಿ ವಾರ್ತಾ ಇಲಾಖೆ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಎರ್ಪಡಿಸುತ್ತಿರುವ ಮಹಾತ್ಮಾ ಗಾಂಧೀಜಿ ಕುರಿತ ಛಾಯಾ ಚಿತ್ರ ಪ್ರದರ್ಶನ ಒಚಿದು ಉತ್ತಮ ಪ್ರಯತ್ನವಾಗಿದೆ. ವಿಧ್ಯಾರ್ಥಿಗಳು, ಯುವಜನರು ಸಾರ್ವಜನಿಕರು ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿ ಗಾಂಧೀಜಿ ಜೀವನವನ್ನು ಅರಿತು ನಡೆಯಲು ಪ್ರಯತ್ನಿಸಬೇಕು ಎಂದರು.
ಗದಗ ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎಸ್.ಎನ್., ವಾಯುವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯ ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಹಿರೇಮಠ, ನಗರ ಸಭೆ ಪೌರಾಯುಕ್ತ ಮನ್ಸೂರ ಅಲಿ, ಗದಗ ಡಿವೈಎಸ್ಪಿ ಎಸ್.ಕೆ.ಪ್ರಲ್ಹಾದ, ಗಣ್ಯರು, ವಾತರ್ಾ ಮತ್ತು ವಾ.ಕ.ರಾ.ರ.ಸಾರಿಗೆ ಅಧಿಕಾರಿ ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು. ಛಾಯಾಚಿತ್ರ ಪ್ರದರ್ಶನವು ದಿ. 09ರ ವರೆಗೆ ಪ್ರದರ್ಶನಗೊಳ್ಳಲಿದೆ.