ಮನಸ್ಸುಗಳ ಪರಿವರ್ತನೆಗೆ ಗಾಂಧೀಜಿಯ ವ್ಯಕ್ತಿತ್ವ ಸ್ಪೂತರ್ಿ

ಲೋಕದರ್ಶನ ವರದಿ

ವಿಜಯಪುರ 28:ಮನಸ್ಸುಗಳ ಪರಿವರ್ತನೆಗೆ ಗಾಂಧೀಜಿಯವರ ಜೀವನ ಹಾಗೂ ಅವರ ವ್ಯಕ್ತಿತ್ವ ಎಲ್ಲರಿಗೂ ಸ್ಪೂತರ್ಿದಾಯಕವಾಗಿದೆ ಎಂದು ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ.ಮಲ್ಲಿಕಾಜರ್ುನ ಬಿ. ಅವರು ಹೇಳಿದರು.

ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಪಾಪುಗಾಂಧಿ ಬಾಪು ಆದ ಕಥೆ  ರಂಗರೂಪಕ ಪ್ರದರ್ಶನವನ್ನು ಇಂದು ನಗರದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗಾಗಿ ಆಯೋಜಿಸಿದ  ಗಾಂಧಿ ಭಾವಚಿತ್ರ ಪುಷ್ಪನಮನ ಸಲ್ಲಿಸಿ ಉದ್ಘಾಟಿಸಿದ ಅವರು, ನಮ್ಮ ಜೀವನದಲ್ಲಿ ಸತ್ಯ, ಅಹಿಂಸೆ, ರೂಪಕ ವ್ಯಕ್ತಿ ಗಾಂಧೀಜಿಯವರು ಸದಾ ನೆಲೆಸಿರಬೇಕು. ಗಾಂಧೀಜಿಯವರ ಜೀವನಗಾಥೆಯನ್ನು ಅವಲೋಕಿಸಿ, ಅಭ್ಯಸಿಸಿ, ಅವರ ತತ್ವ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅವಳಡಿಸಿಕೊಳ್ಳಬೇಕು ಎಂದು ಹೇಳಿದರು ಗಾಂಧೀಜಿಯವರು ಸತ್ಯ, ಅಹಿಂಸೆಯ ತತ್ವ ದಾರ್ಶನಿಕ ವ್ಯಕ್ತಿ. ಅವರನ್ನು ಇಡೀ ವಿಶ್ವವೇ ಪೂಜಿಸುತ್ತದೆ. ಅನುಸರಿಸುತ್ತದೆ. ಕ್ಷಣಾರ್ಧದ ನೆಮ್ಮದಿಗಾಗಿ ಅರಿಯದೇ ಮಾಡಿದ ತಪ್ಪಿನಿಂದ ಶಿಕ್ಷೆ  ಅನುಭವಿಸುತ್ತಿದ್ದಿರಿ. ಇಂತಹ ಉತ್ತಮ ವ್ಯಕ್ತಿತ್ವ ಹೊಂದಿದ ಮಹಾತ್ಮರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ನಾಗರಿಕರಾಗಿ ಹೊರಹೊಮ್ಮುವ ಮೂಲಕ ಸದೃಢ ಸಮಾಜ, ದೇಶ ನಿಮರ್ಾಣಕ್ಕೆ ಮುಂದಾಗುವಂತೆ ಕರೆ ನೀಡಿದರು. 

ರಾಷ್ಟ್ರಪಿತ ಗಾಂಧಿ ಫಿಲಾಸಫಿಕಲ್ ಯೂಥ ಫೋರಂನ ನಿಲೇಶ ಬೇನಾಳ ಅವರು ಮಾತನಾಡಿ, ಗಾಂಧೀಜಿಯವರ ಜೀವನ ಮೌಲ್ಯಗಳ ಕುರಿತು ತಿಳಿಸಿದರು. 

ಕಾರ್ಯಕ್ರಮದಲ್ಲಿ ಜೈಲರ್ ಅಂಬರೀಷ ಪೂಜಾರಿ, ಹನುಮಂತ ಮಾಚ, ರೇಖಾ ಎಂ.ಬಿ., ಜಯಶ್ರೀ ವಣರ್ೇಕರ್, ಜಿಲ್ಲಾ ಸಂಚಾಲಕರಾದ ಮೌನೇಶ ಮಡಿಕೇಶ್ವರ, ಕಲಾ ತಂಡದ ನಾಯಕ ಗಣೇಶ ಶಿವಮೊಗ್ಗ ಸೇರಿದಂತೆ ಕಾರಾಗೃಹ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.