ಗಾಂಧಿ ಪ್ರತಿಪಾದಿಸಿದ ಸತ್ಯ,ಅಹಿಂಸೆ ತತ್ವಗಳು ಸಾರ್ವಕಾಲಿಕ ಸತ್ಯ: ಕೋಟಿ

ಆಲಮಟ್ಟಿ24: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಪ್ರತಿಪಾದಿಸಿದ ಸತ್ಯ,ಅಹಿಂಸೆ ತತ್ವಗಳು ಸಾರ್ವಕಾಲಕ್ಕೂ ಪ್ರಸ್ತುತವಾಗಿವೆ.ಈ ತತ್ವಗಳಿಂದಲ್ಲೆ ಗಾಂಧೀಜಿಯವರು ಬ್ರಿಟೀಷರ ಪ್ರಾಭಲ್ಯದ ಸಾಮ್ರಾಜ್ಯವನ್ನು ಕೊನೆಗಾಣಿಸಿದರು ಎಂದು ವಿಜಯಪುರದ ಲೇಖಕಿ,ಸಾಹಿತಿ ಸುಮಂಗಲಾ ಕೋಟಿ ಅಭಿಪ್ರಾಯಿಸಿದರು.

       ಬೇನಾಳದ ರಾಷ್ಟ್ರಪಿತ ಗಾಂಧಿ ಫಿಲಾಸಾಫಿಕಲ್ ಯುಥ್ ಫೋರಂ ಹಾಗೂ ಸಮರ ಸೇನಾನಿ ನೇತಾರ ತರುಣರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಹಡರ್ೆಕರ ಮಂಜಪ್ಪ ಸಂಯುಕ್ತ ಪ.ಪೂ ಕಾಲೇಜ ಹಾಗೂ ರಾವಬಹದ್ದೂರ ಡಾ.ಫ.ಗು.ಹಳಕಟ್ಟಿ ಪ್ರೌಢಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಾಪೂಜೀ-ಕಸ್ತೂರಬಾ ಗಾಂಧೀ 150 ನೇ ಜನ್ಮ ವಷರ್ಾಚಾರಣೆ ನಿಮಿತ್ಯ ಮಹಾತ್ಮಾ ಗಾಂಧಿ ಮತ್ತು ಯುವ ಮನಸ್ಸುಗಳು ಎಂಬ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಬಾಪೂಜಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

         ಬಾಗಲಕೋಟೆಯ ಸಾಮಾಜಿಕ ಕಾರ್ಯಕತರ್ೆ ಲಕ್ಷ್ಮೀ ಗೌಡರ ಮಾತನಾಡಿ,ಮಹಾತ್ಮಾ ಗಾಂಧೀಜಿಯವರು ಅದ್ಯಾತ್ಮಿಕ ವ್ಯಕ್ತಿ.ಸತ್ಯವನ್ನೆ ದೇವರೆಂದು ಕರೆದರು.ಸ್ವಾತಂತ್ರ್ಯ ಸಂಗ್ರಾಮ ಹೋರಾಟದಲ್ಲಿ ಹಲವಾರು ಕಠಿಣ ಪರಸ್ತಿತಿಗಳು ಎದುರಾಗಿದರು ಅವುಗಳನ್ನೆಲ್ಲಾ ಸಲಿಸಾಗಿ ಸ್ವೀಕರಿಸಿ ಎದೆಗುಂದದೆ ಮುನ್ನುಗ್ಗಿದ್ದರು.

      ಸ್ವರಾಜ್ಯ ಕನಸಿಗಾಗಿ ಪರಿತಪ್ಪಿದರು.ಎಲ್ಲವು ಸಂಯಮತೆಯಿಂದ ಕಾಣುವ ಭಾವ ಅವರಲ್ಲಿತ್ತು.ಅವರೆಂದು ಅದೈರ್ಯದಿಂದ ನುಣುಚಿಕೊಳ್ಳಲಿಲ್ಲ.ಸುಳ್ಳನ್ನು ಹೇಳಲಿಲ್ಲ.ಹಿಂಸೆಯ ದಾರಿ ತುಳಿಯಲ್ಲಿಲ್ಲ.ಸತ್ಯ ಮತ್ತು ಅಹಿಂಸೆ ಮಾರ್ಗದಿಂದಲ್ಲೆ ಎನನ್ನಾದರೂ ಗೆಲ್ಲಬಹುದೆಂಬ ಸಂದೇಶ ಇಡಿ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದರು.

       ಗಾಂಧಿ ಪೋರಂ ಸಂಸ್ಥಾಪಕ ಅದ್ಯಕ್ಷ್ಯ ನೇತಾಜಿ ಗಾಂಧಿ ಮಾತನಾಡಿ ಗಾಂಧಿ ನಾಲಿಗೆಯನ್ನು ನಂಬಿದ್ದ ನಾಯಕ.ನಡೆ ನುಡಿಗೆ ವ್ಯತ್ಯಾಸ ಇಲ್ಲದಂತೆ ಬದುಕಿದ ನೇತಾರ.ಅವರ ಬದುಕು ಸತ್ಯ ಶುದ್ದ ಕಾಯಕದಿಂದ ಕುಡಿದೆ. ನೀತಿಯುತ ಜೀವನ, ಸೃಷ್ಟಿಕರ್ತ ಪರಮಾತ್ಮನ್ನೇ ದೇವರೆಂಬ ಅಚಲ ನಂಬಿಕೆ ಅವರದ್ದಾಗಿತ್ತು.

   ವಿಚಾರದಲ್ಲಿ ಉದಾರತೆಯಿಂದ ಉದಾರಭಾವನೆ ಹೊಂದ್ದಿದರು ಹೀಗಾಗಿ ಜನಮಾನಸದಲ್ಲಿ ಗಾಂಧಿ ಎಂದೆಂದಿಗೂ ಶಾಶ್ವತವಾಗಿ ಉಳಿಯಲ್ಲಿದ್ದಾರೆ ಎಂದರು.

ಅಧ್ಯ್ಯಕ್ಷತೆ ವಹಿಸಿದ ಪ್ರಾಚಾರ್ಯ ಎಸ್.ಬಿ.ಪಾಟೀಲ ಮಾತನಾಡಿ ವಿದ್ಯಾಥರ್ಿಗಳು ಗಾಂಧೀಜಿ ತತ್ವಾಧರ್ಶಗಳು ಹಾಗೂ ಅವರ ಜೀವನ ಕ್ರಮವನ್ನು ಆದರ್ಶವನ್ನಾಗಿಟ್ಟುಕೊಂಡು ಮುನ್ನಡೆಯಬೇಕೆಂದರು.

    ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಮಾತನಾಡಿ,  ಮೌನ, ಶಾಂತಿ,  ಸಹನೆಗೆ ಗಾಂಧಿ ಹೆಸರುವಾಸಿ ಅವರಲ್ಲಿ ಆಗಾಧ ಶಕ್ತಿ ಹುದಗಿತ್ತು.  ಸಾಮಾಜಿಕ ಪ್ರಜ್ಞೆ ಜೀವನವುದ್ದಕ್ಕೂ ಅಳವಡಿಸಿಕೊಂಡಿದ್ದರಿಂದ ಭಾರತ ದೇಶ ವಿಶ್ವದಲ್ಲಿ ಗುರುತಿಸಿಕೊಂಡಿದೆ.

   ಅವರ ಬದಕು ಸ್ವಾರ್ಥಕಮಯವಾಗಿದೆ.ಸಹನ ಶಕ್ತಿ ಆತ್ಮವಿಶ್ವಾಸ, ಕಾರ್ಯಕ್ಷಮತೆ, ಪ್ರಯತ್ನ, ಧೈರ್ಯ ಗಾಂಧೀಜಿಯವರ ದಿವ್ಯ ಶಕ್ತಿಯಾಗಿವೆ ಎಂದರು.

         ಪಿ.ಎ.ಹೇಮಗಿರಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎಂ.ರಾಠೋಡ. ಎಸ್.ಎಚ್.ನಾಗಣಿ.ಆರ್.ಪಿ.ಸಂತರ.ಎಲ್.ಆರ್.ಸಿಂದೆ.ಡಿ.ಕೆ.ಮುದ್ದಾಪುರ.ಎಫ್.ಎನ್.ತಡಸಿ.ಇತರರಿದ್ದರು.

      ರಾಷ್ಟ್ರ ಗಾಯನ ವಂದೇಮಾತರಂ ದ್ವನಿ ಮುದ್ರಿತ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಗಾಂಧೀಜಿ ಅವರಿಗೆ ಪ್ರೀಯವಾದ ಭಜನಾಗೀತೆ ಮೊಳಗಿದವು.ಅತಿಥಿಗಳಿಗೆ ಖಾದಿ ನೂಲಿನ ಅರ್ಪಣೆ ಮಾಡಲಾಯಿತು.

       ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಗಾಂಧಿ ಜೀವನ ಕುರಿತು ರಸ ಪ್ರಶ್ನೆ ಕಾರ್ಯಕ್ರಮ ಸಂಯೋಜಿಸಲಾಗಿತ್ತು. ಪ್ರಾಣೇಶ ಯರಝರಿ ಪ್ರಥಮ,ಸಮೀರ ನದಾಫ ದ್ವಿತೀಯ,ರಂಜಿನಿ ವಡ್ಡರ ತೃತೀಯ ಸ್ಥಾನ ಪಡೆದರು.

      ರಸಪ್ರಶ್ನೆ ವಿಜೇತ ಈ ಮಕ್ಕಳಿಗೆ ಪುಸ್ತಕ, ಸ್ಮರಣಸಂಚಿಕೆ, ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಗಾಂಧೀಜಿ ಜೀವನ ಮೈಲುಗಲ್ಲುಳ್ಳ ಚೈತ್ರದ ಯಶೋಗಾಥೆಯ ನೂರಾರು ಭಾವಚಿತ್ರಗಳ ಪ್ರದರ್ಶನ ಗಮನ ಸೆಳೆದವು.ಕೌತಕಭಾವದಿಂದ ಮಕ್ಕಳು ಗಾಂಧೀಜಿಯವರ ಅಪರೂಪದ ಚಿತ್ರಗಳನ್ನು ವೀಕ್ಷಿಸಿ ಖುಷಿಪಟ್ಟರು.

   ಎಂ.ಎಸ್.ಸಜ್ಜನ ಸ್ವಾಗತಿಸಿದರು. ಟಿ.ಬಿ.ಕರದಾನಿ ನಿರೂಪಿಸಿದರು.ಮಮತಾ ಕರೆಮುರಗಿ ವಂದಿಸಿದರು.