ಬೆಟಗೇರಿ ಗ್ರಾಮದ ವಿವಿಧೆಡೆ ಗಾಂಧಿ, ಶಾಸ್ತ್ರೀ ಜನ್ಮ ದಿನ ಆಚರಣೆ

ಲೋಕದರ್ಶನ ವರದಿ

ಬೆಟಗೇರಿ: ಗ್ರಾಮದ ಪತ್ರೇಪ್ಪನ ತೋಟದ ಸಕರ್ಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಕಾರ್ಯಕ್ರಮ ಬುಧವಾರ ಅ.2ರಂದು ನಡೆಯಿತು. ಇಲ್ಲಿಯ ಹೆಣ್ಣು ಮಕ್ಕಳ ಶಾಲೆಯ ಎಸ್ಡಿಎಮ್ಸಿ ಅಧ್ಯಕ್ಷ ವಿಠಲ ಕೋಣಿ ಗಾಂಧಿ ಮತ್ತು ಶಾಸ್ತ್ರಿ ಭಾವ ಚಿತ್ರಕ್ಕೆ ಪೊಜೆ, ಪುಷ್ಪಾರ್ಪನೆ ನೆರವೇರಿಸಿದರು. ಎಸ್ಡಿಎಮ್ಸಿ ಸದಸ್ಯರು, ಮುಖ್ಯ ಶಿಕ್ಷಕ ಬಿ.ಎ.ಕೋಟಿ, ಹನುಮಂತ ಕಟ್ಟಿಮನಿ, ವಿರುಪಾಕ್ಷಯ್ಯ ಮಠಪತಿ, ಶಿಕ್ಷಕರು, ಸಿಬಂ್ಬದಿ ವರ್ಗ, ಮಕ್ಕಳು, ಇತರರು ಇದ್ದರು.

ಗ್ರಾಮ ಪಂಚಾಯತಿಯಲ್ಲಿ: ಇಲ್ಲಿಯ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಕಾರ್ಯಕ್ರಮ ಬುಧವಾರ ಅ.2 ರಂದು ನಡೆಯಿತು. ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷ ಈಶ್ವರ ಬಳಿಗಾರ ಮಹಾತ್ಮ ಗಾಂಧಿ ಭಾವ ಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ನೆರವೇರಿಸಿದರು. ಪಿಡಿಒ ಬಿ.ಎಫ್. ದಳವಾಯಿ, ಕಾರ್ಯದಶರ್ಿ ಗೌಡಪ್ಪ ಮಾಳೇದ, ಸುರೇಶ ಬಾಣಸಿ ಸೇರಿದಂತೆ ಗ್ರಾಪಂ ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು, ಗಣ್ಯರು, ಮತ್ತೀತರರು ಇದ್ದರು.

ಪ್ರಾಥಮಿಕ ಕನ್ನಡ ಶಾಲೆಗಳಲ್ಲಿ: ಇಲ್ಲಿಯ ಸಕರ್ಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಕಾರ್ಯಕ್ರಮ ಬುಧವಾರ ಅ.2ರಂದು ನಡೆಯಿತು. ಇಲ್ಲಿಯ ಹೆಣ್ಣು ಮಕ್ಕಳ ಶಾಲೆಯ ಎಸ್ಡಿಎಮ್ಸಿ ಅಧ್ಯಕ್ಷ ರಮೇಶ ನೀಲಣ್ಣವರ ಗಾಂಧಿ ಮತ್ತು ಶಾಸ್ತ್ರಿ ಭಾವ ಚಿತ್ರಕ್ಕೆ ಪೊಜೆ, ಪುಷ್ಪಾರ್ಪನೆ ನೆರವೇರಿಸಿದರು. ಗಂಡು ಮಕ್ಕಳ ಶಾಲೆಯ ಎಸ್ಡಿಎಮ್ಸಿ ಅಧ್ಯಕ್ಷ ಉದ್ದಪ್ಪ ಚಂದರಗಿ, ಉಭಯ ಶಾಲೆಗಳ ಎಸ್ಡಿಎಮ್ಸಿ ಸದಸ್ಯರು, ಮುಖ್ಯ ಶಿಕ್ಷಕರಾದ ವೈ.ಸಿ.ಶೀಗಿಹಳ್ಳಿ, ಆರ್.ಬಿ.ಬೆಟಗೇರಿ, ಶಿಕ್ಷಕರು, ಸಿಬಂ್ಬದಿ ವರ್ಗ, ಮಕ್ಕಳು, ಇತರರು ಇದ್ದರು.

ಚೈತನ್ಯ ಸೊಸಾಯಿಟಿಯಲ್ಲಿ: 

ಮೂಡಲಗಿಯ ಚೈತನ್ಯ ಅರ್ಬನ್ ಕೊ-ಆಫ್ ಕ್ರೆಡಿಟ್ ಸೊಸಾಯಿಟಿಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶಾಖೆಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯನ್ನು ಬುಧವಾರದಂದು ಆಚರಿಸಲಾಯಿತು. ಶಾಖೆಯ ಸಲಹಾ ಸಮಿತಿ ಸದಸ್ಯ ಸಣ್ಣಪ್ಪ ಐದುಡ್ಡಿ ಗಾಂಧಿ ಮತ್ತು ಶಾಸ್ತ್ರಿ ಭಾವ ಚಿತ್ರಕ್ಕೆ ಪೊಜೆ, ಪುಷ್ಪಾರ್ಪನೆ ನೆರವೇರಿಸಿದರು. ಸಲಹಾ ಸಮಿತಿ ಸದಸ್ಯರು, ಶಾಖಾ ವ್ಯವಸ್ಥಾಪಕ ವಿಠಲ ನೇಮಗೌಡರ, ಸಿಬಂ್ಬದಿ ವರ್ಗ, ಗ್ರಾಮಸ್ಥರು, ಇತರರು ಉಪಸ್ಥಿತರಿದ್ದರು.

ವಿವಿಡಿ ಸಕರ್ಾರಿ ಪ್ರೌಢ ಶಾಲೆಯಲ್ಲಿ: ಸ್ಥಳೀಯ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸಕರ್ಾರಿ ಪ್ರೌಢ ಶಾಲೆಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯನ್ನು ಬುಧವಾರ ಅ.2ರಂದು ಆಚರಿಸಲಾಯಿತು. 

ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅವರು ಗಾಂಧಿ ಮತ್ತು ಶಾಸ್ತ್ರಿ ಭಾವ ಚಿತ್ರಕ್ಕೆ ಪೊಜೆ, ಪುಷ್ಪಾರ್ಪನೆ ನೆರವೇರಿಸಿ ಮಾತನಾಡಿ, ಮಹಾತ್ಮ ಗಾಂಧಿ ಮತ್ತು ಲಾಲಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ ಸಂಗತಿಗಳ ಕುರಿತು ತಿಳಿಸಿದರು. ವಿದ್ಯಾಥರ್ಿಗಳಿಂದ ಪ್ರಾರ್ಥನೆ, ಭಾಷಣ ಕಾರ್ಯಕ್ರಮಗಳು ನಡೆದವು. ಶಾಲೆಯ ಎಸ್ಡಿಎಮ್ಸಿ ಸದಸ್ಯರು, ಶಿಕ್ಷಕರು, ಸಿಬಂ್ಬದಿ ವರ್ಗ, ವಿದ್ಯಾಥರ್ಿಗಳು ಇದ್ದರು.