ಕೆಎಲ್ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದಿಂದ ಕ್ರೀಡಾಕೂಟ

ಲೋಕದರ್ಶನ ವರದಿ

ಬೆಳಗಾವಿ, 9: ಕೆಎಲ್ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದಿಂದ ದಿನಾಂಕ 9.1.2019 ರಂದು ಕ್ರೀಡಾಕೂಟ-2019' ಲಿಂಗರಾಜ ಮಹಾವಿದ್ಯಾಲಯದ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಕೆಎಲ್ಇ ಸಂಸ್ಥೆಯ 450ಕ್ಕೂ ಹೆಚ್ಚು ಮಹಿಳಾ ಸಬಲೀಕರಣ ಘಟಕ ಸದಸ್ಯೆಯರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಥೋ ಬಾಲ್, ಟೆಬಲ್ ಟೆನ್ನಿಸ್, ಬ್ಯಾಡಮಿಂಟನ್, ಹಗ್ಗ ಜಗ್ಗಾಟ, ರೀಲೆ, ಕೋ-ಕೋ, ಗುಂಡು ಎಸೆತ ಮತ್ತು ಕೇರಂ ಒಳಗೊಂಡ ಹಲವು ಸ್ಪಧರ್ೆಗಳನ್ನು ಆಯೋಜಿಸಲಾಗಿತ್ತು. ವಿಜೇತರಾದವರಿಗೆ ಮಹಿಳಾ ಸಬಲೀಕರಣ ಘಟಕದ ಮುಖ್ಯಸಂಯೋಜಕರಾದ ಡಾ.ಪ್ರೀತಿ ದೊಡವಾಡ ಅವರು ಪ್ರಶಸ್ತಿಪತ್ರ ಹಾಗೂ ಪಾರಿತೋಷಕವನ್ನು ವಿತರಿಸಿದರು.