ಬಾಗಲಕೋಟೆ : ನಗರದ ವಾಸವಿ ಯುವತಿ ಮಂಡಳಿಯವರು ಆರ್ಯ ವೈಶ್ಯ ಸಂಘದ ಆಶ್ರಯದಲ್ಲಿ 108 ಗಜಗೌರಿ ಪೂಜೆ ಹಾಗೂ ಉಡಕ್ಕಿ ಸಮಾರಂಭ ಜರುಗಿತು.
ನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭವನ್ನು ಪಂ. ಬಿಂದಾಚಾರ್ಯ ನಾಗಸಂಪಗಿ ಅವರು ಉದ್ಘಾಟಿಸಿ ಮಾತನಾಡಿ ಗಜಗೌರಿ ಪೂಜೆಯ ಮಹತ್ವ ವಿವರಿಸಿ ಅರಿಷಿಣ. ಕುಂಕುಮ. ಕಾಡಗಿ. ಮಂಗಲಸೂತ್ರ ಗಳ ಮಹಿಮೆ ಕುರಿತು ವಿವರಿಸಿದರು.
ಸಮಾಜದ ಅಧ್ಯಕ್ಷ, ನ್ಯಾಯವಾದಿ ಕೋರಾ ಅವರು ಕಾರ್ಯಕ್ರಮದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಧಾರವಾಡ ಅವರು ಮಂಡಳಿ ಮಾಡಿದ ಕಾರ್ಯಕ್ರಮ ವಿವರಿಸಿದರು. ಅನಿತಾ ಹಂದ್ರಾಳ. ರಾಧಾಬಾಯಿ ಧಾರವಾಡ, ಪದಾಧಿಕಾರಿಗಳು. ಮಹಿಳಾ ಮಂಡಳದ ಸದಸ್ಯರು. ಸಮಾಜ ಬಂಧುಗಳು. ಭಕ್ತರು ಪಾಲ್ಗೊಂಡಿದ್ದರು. ಶ್ವೇತಾ ವಿಜಾಪುರ ನಿರೂಪಿಸಿ ಕೊನೆಗೆ ವಂದಿಸಿದರು.