ಗದ್ದನಕೇರಿ ಗ್ರಾ.ಪಂ ಅನುದಾನ ಸದ್ಬಳಕೆ

ಲೋಕದರ್ಶನ ವರದಿ

ಬಾಗಲಕೋಟೆ 2: ಸರಕಾರದ ಯೋಜನೆಗಳನ್ನು ಪ್ರತಿ ಮನೆ ಮನೆಗೂ ತಲುಪಿಸುವ ಕಾರ್ಯ ಗದ್ದನಕೇರಿ ಗ್ರಾಮ ಪಂಚಾಯತಿಯಿಂದ ನಡೆದಿದೆ ಎಂದು ಗ್ರಾ.ಪಂ ಅಧ್ಯಕ್ಷ ಸಿದ್ದನಗೌಡ ಜಕ್ಕನಗೌಡರ ಹೇಳಿದರು.

 ತಾಲೂಕಿನ ಗದ್ದನಕೇರಿ ಗ್ರಾ.ಪಂ ಅನುದಾನದಲ್ಲಿ ಶೇ.25 ರಷ್ಟು ಎಸ್.ಸಿ, ಎಸ್ಟಿ ಕಲ್ಯಾಣ ನಿಧಿಯ ಅಡಿಯಲ್ಲಿ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಯುವಕರಿಗಾಗಿ ಜಿಮ್ ಕಟ್ಟಡ ಹಾಗೂ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ. ಸರಕಾರದ ಅನುದಾನದಲ್ಲಿ ಬರಲಾದ 2 ಕೋಟಿ ರೂ.ಗಳ ಪ್ರತಿ ಗ್ರಾಮಕ್ಕೆ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಕೆ ಮಾಡಲಾಗಿದೆ ಎಂದರು.

  ಗದ್ದನಕೇರಿ ಗ್ರಾಮ ಹಾಗೂ ಗದ್ದನಕೇರಿ ತಾಂಡಾದಲ್ಲಿರುವ ಪ್ರಮುಖ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಪರಿವತರ್ಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಮದ ಎಲ್ಲ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದರು. 

  ಎಸ್.ಸಿ, ಎಸ್.ಟಿ ನಿರುದ್ಯೋಗಿ ಮಹಿಳೆ ಯರಿಗೆ ಹೊಲಿಗೆ ತರಬೇತಿ ನೀಡುವದರ ಜೊತೆಗೆ ಅವರಿಗೆ ಗ್ರಾ.ಪಂ ದಿಂದ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುವುದು ಎಂದರು. 

  ಇತ್ತೀಚೆಗೆ ಅಪಘಾತದಲ್ಲಿ ಗಾಯಗೊಂಡ ಬಂಡಿವಡ್ಡರ ಕುಟುಂಬಕ್ಕೆ 5 ಸಾವಿರ ರೂ. ಸಹಾಯಧನ ಹಾಗೂ ಮೃತಪಟ್ಟ ಮಾದರ ಕುಟುಂಬಕ್ಕೆ 5 ಸಾವಿರ ರೂ. ಶವಸಂಸ್ಕಾರಕ್ಕೆ ಹಣವನ್ನು ನೀಡಲಾಗಿದ್ದು, ಬರುವ ಬೇಸಿಗೆ ದಿನಗಳಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ, ಜಾನುವಾರುಗಳಿಗೆ ತೊಂದರೆಯಾಗದಂತೆ ಪೂರ್ವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

  ಸಮಾರಂಭದಲ್ಲಿ ಉಪಾಧ್ಯಕ್ಷೆ ಲಲಿತಾ ಹೊಸಮನಿ, ಸದಸ್ಯರಾದ ವೆಂಕಣ್ಣ ಹಿರೇಮಠ, ಶ್ರೀಶೈಲ ಪಾಟೀಲ, ಶಂಕ್ರಪ್ಪ ಸೋರಕೊಪ್ಪ, ಮಲ್ಲಿಕಾಜರ್ುನ ಬಾವೂರ, ಪಿಡಿಓ ಈಶ್ವರ ಕವಡಿ ಹಾಗೂ ಸಿಬ್ಬಂದಿ ಎಸ್.ಕೆ.ಕಮತಗಿ ಉಪಸ್ಥಿತರಿದ್ದರು.