ಗದಗ ತೋಂಟದಾರ್ಯ ದಿ. ಡಾ|| ಸಿದ್ಧಲಿಂಗ ಸ್ವಾಮಿಗಳ ಲಿಂಗೈಕ್ಯ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ

ಲೋಕದರ್ಶನ ವರದಿ

ವಿಜಯಪುರ 22: ಗದಗ ಡಂಬಳ ಸಂಸ್ಥಾನ ಮಠದ ಜಗದ್ಗುರು ದಿ. ತೋಂಟದಾರ್ಯ ಡಾ|| ಸಿದ್ಧಲಿಂಗ ಶ್ರೀಗಳು ಆಧ್ಯಾತ್ಮಿಕ ಧಾಮರ್ಿಕ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದ ಮೇದಾವಿಳಾಗಿದ್ದರೆಂದು ಭಾರತ ಸೇವಾದಳದ ಜಿಲ್ಲಾ ಸಮಿತಿಯ ನಿದರ್ೇಶಕರಾದ ಉಮೇಶ ಮಣ್ಣೂರ ಹೇಳಿದರು. ಅವರು ವಿಜಯಪುರ ನಗರದ ರಾಧಾಕೃಷ್ಣ ನಗರದ ಮಲ್ಲಿಕಾಜರ್ುನ ದೇವಸ್ಥಾನದಲ್ಲಿ ಆಹೇರಿ ಬಸವೇಶ್ವರ ಕರ್ಮವೀರ ಕಲಾ, ಸಾಹಿತ್ಯ, ಸಂಸ್ಕೃತಿ ವೇದಿಕೆ ಹಾಗೂ ಮಲ್ಲಿಕಾಜರ್ುನ ಸಮಿತಿ ವಿಜಯಪುರ  ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಲಿಂಗೈಕ್ಯರಾದ ಗದಗ ತೋಂಟದಾರ್ಯ ದಿ. ಡಾ|| ಸಿದ್ಧಲಿಂಗ ಸ್ವಾಮಿಗಳ ಲಿಂಗೈಕ್ಯ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

                ಪೂಜ್ಯ ಡಾ|| ಸಿದ್ಧಲಿಂಗ ಶ್ರೀಗಳು ಸಮಾಜದ ಪ್ರಗತಿಪರ ಚಿಂತಕರಾಗಿದ್ದರು. ಸಮಾಜದ ಅಭಿವೃದ್ಧಿಗಾಗಿ ಧಾಮರ್ಿಕ, ಆಧ್ಯಾತ್ಮಿಕ, ಶೈಕ್ಷಣಿಕ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಮಾಜಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದರು. ಅವರ ಅಗಲಿಕೆಯಿಂದ ಉತ್ತರ ಕನರ್ಾಟಕದ ಆಧ್ಯಾತ್ಮಿಕ ಕ್ಷೇತ್ರವಲ್ಲದೇ ಸಾಮಾಜಿಕ, ಧಾಮರ್ಿಕ, ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರವು ಬಡವಾಗಿದೆ ಎಂದರು.

                ಆಹೇರಿ ಬಸವ ಸಾಹಿತ್ಯ ವೇದಿಕೆ ಅಧ್ಯಕ್ಷ ಬಂಡೆಪ್ಪ ತೇಲಿ ಮಾತನಾಡಿ, ಜಗದ್ಗುರು ಮಠಾಧೀಶ ಲಿಂ. ಡಾ|| ಸಿದ್ಧಲಿಂಗ ಮಹಾಸ್ವಾಮಿಗಳು ಉತ್ತರ ಕನರ್ಾಟಕ ಭಾಗದಲ್ಲಿ ಧಾರವಾಡ, ಗದಗ, ಬಾಗಲಕೋಟ, ವಿಜಯಪುರ, ಬೆಳಗಾವಿಗಳಲ್ಲಿ ಅಪಾರ ಭಕ್ತಸಮೂಹವನ್ನು ಹೊಂದಿದ್ದರು. ಶ್ರೀಗಳು ಸಮಾಜದಲ್ಲಿ ಉತ್ತಮ ಸಾಮರಸ್ಯ ಉಂಟಾಗಲು ಕೋಮು ಸೌಹಾರ್ದದ ಹರಿಕಾರರು ಕಾಯಕ ಜೀವಿ ಸಮಾಜ ಚಿಂತಕರು ಶೈಕ್ಷಣಿಕ ಚಿಂತಕರು ಮತ್ತು ಪ್ರಗತಿಪರ ಸಾಮಾಜಿಕ ಚಿಂತಕರಾಗಿದ್ದರು. ಅವರ ಅಗಲಿಕೆಯಿಂದ ಆಧ್ಯಾತ್ಮಿಕ ಕ್ಷೇತ್ರವಲ್ಲದೆ ಹಲವಾರು ಕ್ಷೇತ್ರಗಳಿಗೆ ನಷ್ಟ ಉಂಟಾಗಿದೆ ಎಂದರು.

                ಮಲ್ಲಿಕಾಜರ್ುನ ದೇವಸ್ಥಾನ ಸಮಿತಿಯ ಗೌಡಪ್ಪ ಗುಂಡದ ಮಾತನಾಡಿ, ಲಿಂ. ಡಾ|| ಸಿದ್ಧಲಿಂಗ ಶ್ರೀಗಳು ಮೂಲತಹ ವಿಜಯಪುರ ಜಿಲ್ಲೆಯವರಾಗಿದ್ದು ಅವರು ವಿಜಯಪುರ ಜಿಲ್ಲೆಗೆ ಅವರ ಕೊಡುಗೆ ಅಪಾರವಾಗಿದೆ. ಅವರು ಉತ್ತರ ಕನರ್ಾಟಕ ನೀರಾವರಿ ಹೋರಾಟದಲ್ಲಿ ಮುಂಚುಣೆಯಲ್ಲಿದ್ದರು. ಅವರ ಅಗಲಿಕೆಯಿಂದ ವಿಜಯಪುರ ಜಿಲ್ಲೆ ಅಷ್ಟೆ ಅಲ್ಲ ಉತ್ತರ ಕನರ್ಾಟಕದ ರೈತಾಪಿ ಜನರಲ್ಲಿ ಕೂಡ ಬಹಳ ನಷ್ಟ ಉಂಟಾಗಿದೆ ಎಂದರು.

                ಕಾರ್ಯಕ್ರಮದಲ್ಲಿ ಶೇಖರ ಹೂಗಾರ, ಮಾಳಪ್ಪ ಗುಂಡಣ್ಣವರ, ಕಲ್ಲಪ್ಪ ಪಾರಶೆಟ್ಟಿ, ಎಮ್.. ಸಾನಕರ, ಬಿ.ಎಲ್. ದಶವಂತ, ಡಾ|| ವಾಯ್.ಜಿ. ಚೌದರಿ, ರಾಜಶೇಖರ ತಾಂಡೂರ, ಮುರಘೇಶ ತುಪ್ಪದ, ಮುತ್ತುರಾಜ ಬಿರಾದಾರ, ಆನಂದ ಮಂಗಡೆ, ಆಕಾಶ ನಡುವಿನಮನಿ, ಚೇತನ ಮುಳವಾಡ, ಕಾತರ್ಿಕ ಬಿರಾದಾರ, ಬಸವರಾಜ ಹಡಪದ ಮುಂತಾದವರು ಉಪಸ್ಥಿತರಿದ್ದರು