ಗದಗ ಬೆಟಗೇರಿ: ಕ್ರೀಡಾ ಸೌಲಭ್ಯಕ್ಕೆ ಪುಟ್ಬಾಲ್ ಟರ್ಫ್ ಮೈದಾನ ಸೇರ್ಪಡೆ


ಗದಗ 16: ಗದಗ ಬೆಟಗೇರಿ ನಗರದ ಮುಳಗುಂದ ರಸ್ತೆಯಲ್ಲಿ ಕನಕ ಭವನದ ಹತ್ತಿರ ಸಮಾಜ ಕಲ್ಯಾಣ ಇಲಾಖೆ, ಶಾಸಕರ ಅನುದಾನ ಹಾಗೂ ನಗರಸಭೆ ಅಭಿವೃದ್ಧಿ ಅನುದಾನದಡಿ ಸುಮಾರು 84 ಲಕ್ಷ ರೂ.ಗಳಲ್ಲಿ ನಿಮರ್ಾಣಗೊಂಡಿರುವ ನೂತನ ಪುಟ್ಬಾಲ್ ಟರ್ಫ್  ಮೈದಾನ ಲೋಕಾರ್ಪಣೆಗೊಂಡಿತು.

ಶಾಸಕರು ಹಾಗೂ ಕರ್ನಾಟಕ ಸ್ಟೇಟ್ ಫುಟಬಾಲ್ ಅಸೋಷಿಯೇಷನ್ ಅಧ್ಯಕ್ಷ ಎನ್.ಎಚ್.ಹ್ಯಾರಿಸ್ ಸಾಂಕೇತಿಕವಾಗಿ ಕಾಲ್ಚೆಂಡನ್ನು  ಕ್ರೀಡಾಪಟುಗಳಿಗೆ ಪಾಸ್ ಮಾಡುವ ಮೂಲಕ ಆರಂಭಿಕ ಪುಟಬಾಲ್ ಪಂದ್ಯಕ್ಕೆ ಚಾಲನೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಚ್.ಕೆ.ಪಾಟೀಲ ವಹಿಸಿದ್ದರು. ಗದಗ ಜಿ.ಪಂ. ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ  ಬಸವರಾಜ ಹೊರಟ್ಟಿ, ಜಿ.ಪಂ.  ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರ, ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ,  ಮಾಜಿ ಶಾಸಕ ಡಿ.ಆರ್.ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರುಗಳಾದ ಗುರಣ್ಣ ಬಳಗಾನೂರ, ಪ್ರಭು ಬುರಬುರೆ, ನಗರಸಭೆ ಮಾಜಿ ಸದಸ್ಯರುಗಳಾದ ಎಮ್.ಸಿ.ಶೇಖ, ಅನಿಲ ಗರಗ  ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಖಾಜಾಹುಸೇನ ಮುಧೋಳ, ಕೆ.ಆರ್.ಐ.ಡಿ.ಎಲ್. ಕಾರ್ಯನಿರ್ವಾಹಕ ಅಭಿಯಂತ ಆರ್.ಶ್ರೀನಿವಾಸ,  ಯುವಜನಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಬಿ.ವಿಶ್ವನಾಥ, ಪುಟ್ಬಾಲ್ ಕ್ರೀಡಾಪಟುಗಳು, ಕ್ರೀಡಾಪ್ರೇಮಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.       

ವಿಶ್ವ ಪುಟ್ಬಾಲ ಸಂಸ್ಥೆ ಫಿಫಾ ಅನುಮೋದಿಸಿರುವ ಆಸ್ಟ್ರೋ ಟಫರ್್ ನಿಯಮಾನುಸಾರ ತರಬೇತಿ ಪಂದ್ಯಾವಳಿಗಾಗಿ ನಿರ್ಮಿಸಿರುವ ಪುಟ್ಬಾಲ್ ಮೈದಾನ 48 ಮೀಟರ್ ಉದ್ದ, 30 ಮೀಟರ್ ಅಗಲವಿದ್ದು, ಕ್ರೀಡಾಪಟುಗಳು ಬಿದ್ದರೂ ಗಾಯವಾಗದಂತೆ ಕ್ರೀಡಾಂಕಣಕ್ಕೆ ಸಿಲಿಕಾ ಸ್ಯಾಂಡ್ ಮತ್ತು ಆಸ್ಟ್ರೋ ಟಫರ್್ ಬಳಸಲಾಗಿದೆ. ಇನ್ನು ಆಡುವ ವೇಳೆ ಮೈದಾನದಿಂದ ಚೆಂಡು ಹೊರಹೋಗದಂತೆ ಸುತ್ತಲೂ 25 ಅಡಿ ಎತ್ತರದ ಕಬ್ಬಿಣದ ಗ್ರಿಲ್ ಅಳವಡಿಸಲಾಗಿದು, ಮೇಲ್ಚಾವಣೆಗೆ ನೆಟ್ ಹೊದಿಸಲಾಗಿದೆ. ಈ ಮೈದಾನದಲ್ಲಿ 7 ಮಂದಿ ಆಟಗಾರರನ್ನೊಳಗೊಂಡ ತಂಡ ಮತ್ತು ತರಬೇತಿ ಪಂದ್ಯಾವಳಿಗಳನ್ನು ಆಯೋಜಿಸಲು ಅವಕಾಶ ಕಲ್ಪಿಸಲಾಗಿದೆ. ಗದಗ ಬೆಟಗೇರಿ ನಗರದಲ್ಲಿ ಕ್ರೀಡಾ ಸೌಲಭ್ಯಗಳಿಗೆ ಪುಟ್ಬಾಲ ತರಬೇತಿ ಮೈದಾನವು ಸೇರ್ಪಡೆಯಾದಂತಾಗಿದೆ.