ಗದಗ 07: ಸ್ಥಾಯಿ ಸಮಿತಿಗಳ ರಚನೆ ಕುರಿತಂತೆ ಗದಗ ಜಿ.ಪಂ. ವಿಶೇಷ ಸಭೆಯು ಜಿ.ಪಂ. ಅಧ್ಯಕ್ಷ ಎಸ್.ಪಿ. ಬಳಿಗಾರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜರುಗಿತು.
ಹಾವೇರಿ ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ, ಬಾಗಲಕೋಟ ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡರ, ಗದಗ ಜಿಲ್ಲೆ ವಿಧಾನಸಭಾ ಶಾಸಕರುಗಳಾದ ಎಚ್.ಕೆ.ಪಾಟೀಲ, ಕಳಕಪ್ಪ ಬಂಡಿ, ಸಿ.ಸಿ.ಪಾಟೀಲ, ರಾಮಣ್ಣ ಲಮಾಣಿ ಹಾಗೂ ಗದಗ ಜಿ.ಪಂ. ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಮಂಜುನಾಥ ಚವ್ಹಾಣ ಸ್ಥಾಯಿ ಸಮಿತಿ ಆಯ್ಕೆ ಪ್ರಕ್ರಿಯೆ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು ಎಂದು ಜಿ.ಪಂ. ಉಪಕಾರ್ಯದಶರ್ಿ ಎಸ್.ಸಿ. ಮಹೇಶ ತಿಳಿಸಿದ್ದಾರೆ. ಗದಗ ಜಿ.ಪಂ. ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರಾಗಿ ಅಯ್ಕೆಯಾದ ವಿವರ ಇಂತಿದೆ.
ಹಣಕಾಸು, ಲೆಕ್ಕಪರಿಶೋಧನಾ ಮತ್ತು ಯೋಜನಾ ಸಮಿತಿಗೆ ಜಿ.ಪಂ.ಅಧ್ಯಕ್ಷ ಎಸ್.ಪಿ.ಬಳಿಗಾರ ಪದನಿಮಿತ್ಯ ಅಧ್ಯಕ್ಷರಾಗಿರುತ್ತಾರೆ. ಸಾಮಾನ್ಯ ಸ್ಥಾಯಿ ಸಮಿತಿಗೆ ಜಿ.ಪಂ. ಉಪಾಧ್ಯಕ್ಷರೇ ಪದನಿಮಿತ್ಯ ಅಧ್ಯಕ್ಷರಾಗಿದ್ದು ಸಧ್ಯ ಈ ಸ್ಥಾನ ಖಾಲಿ ಇದೆ.
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರು ಹನುಮಂತಪ್ಪ ಯಲ್ಲಪ್ಪ ಪೂಜಾರ ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷರು: ಶಿವಕುಮಾರ ಎಲ್. ನೀಲಗುಂದ ಕೃಷಿ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷರು: ಈರಪ್ಪ ಈಶ್ವರಪ್ಪ ನಾಡಗೌಡ್ರ ಉಪಸ್ಥಿತರಿದ್ದರು.