ಐತಿಹಾಸಿಕ ಫಲಿತಾಂಶಕ್ಕೆ ನಾಂದಿಯಾದ ಗದಗ ಜಿಲ್ಲಾ ವಕೀಲರ ಸಂಘದ ಚುನಾವಣೆ

Gadag District Bar Association elections herald historic results

ಐತಿಹಾಸಿಕ ಫಲಿತಾಂಶಕ್ಕೆ ನಾಂದಿಯಾದ ಗದಗ ಜಿಲ್ಲಾ ವಕೀಲರ ಸಂಘದ ಚುನಾವಣೆ

ಗದಗ 26 :-  ಸನ್ 2025-27 ನೇ ಸಾಲಿನ ಗದಗ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಯ  ಚುನಾವಣೆಯು ವಕೀಲರ ಸಂಘದ ಆವರಣದಲ್ಲಿ ಮತದಾನ ಪ್ರಕ್ರಿಯೆ ಜರುಗಿತು. ಆನಂತರ ಮತ ಎಣಿಕೆ ಪ್ರಕ್ರಿಯೆ ನಡೆದು  ವಕೀಲರ ಸಂಘದ ಅಧ್ಯಕ್ಷರಾಗಿ  ರಾಜಶೇಖರ್ ಗಂಗಪ್ಪ ಕಲ್ಲೂರ್, ಒಟ್ಟು 441 ಮತಗಳಲ್ಲಿ 238 ಮತಗಳನ್ನು ಪಡೆದುಕೊಂಡು ವಿಜೇತರಾಗಿರುವರು. ಉಪಾಧ್ಯಕ್ಷರಾಗಿ  ಮುದಕಪ್ಪ ಅಂದಪ್ಪ ಸಂಗನಾಳ, 243 ಮತಗಳನ್ನು ಪಡೆದರು. ಪ್ರಧಾನ ಕಾರ್ಯದರ್ಶಿಗಳಾಗಿ ಮಹಾಂತೇಶ ಅಯ್ಯಪ್ಪ ನಾಯ್ಕರ್ 208 ಮತಗಳನ್ನು ಪಡೆದರು., ಸಹ ಕಾರ್ಯದರ್ಶಿಗಳಾಗಿ ಚನ್ನಾರೆಡ್ಡಿ ಬಸವರಾಜ ಗೂಳರೆಡ್ಡಿ, 160ಮತಗಳನ್ನು ಪಡೆದರು.ಹಾಗೂ ವಿಶೇಷವಾಗಿ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮಹಿಳಾ ವಕೀಲರಿಗಾಗಿಯೇ ಮೀಸಲಿರುವ ಖಜಾಂಚಿ ಸ್ಥಾನದಲ್ಲಿ ಮಹಿಳಾ ವಕೀಲರಾದ  ಶ್ರೀಮತಿ ಶೈಲಜಾ ಬಸಯ್ಯ ಹಿರೇಮಠ 239 ಮತಗಳನ್ನು ಪಡೆಯುವ ಮೂಲಕ ವಿಜೇತರಾಗುವ ಮೂಲಕ ಗದಗ ಜಿಲ್ಲಾ ವಕೀಲರ ಸಂಘದ ಸನ್ 2025-27 ನೇ ಸಾಲಿನ ಪದಾಧಿಕಾರಿಗಳಾಗಿ ಪ್ರಚಂಡ ಬಹುಮತದೊಂದಿಗೆ ಆಯ್ಕೆಯಾಗಿರುತ್ತಾರೆ.  ಗದಗ ಜಿಲ್ಲಾ ವಕೀಲರ ಸಂಫದ ಒಟ್ಟು ಐದು ಪದಾಧಿಕಾರಿಗಳ ಹುದ್ದೆಗೆ ಚುನಾವಣೆ ಜರುಗಿದ್ದು, ಇದರಲ್ಲಿ ಒಟ್ಟು 16  ವಕೀಲರ ಭಾಂದವರು ಸದರ ಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದರು.  ಎಂದು ಚುನಾವಣಾ ಅಧಿಕಾರಿಗಳಾದ ಎಮ್ ಎ ಬಿಜಾಪೂರ ರವರು ಚುನಾವಣಾ ಫಲಿತಾಂಶವನ್ನು ಘೋಷಣೆ ಮಾಡಿದರು. ಈ ಸಂಧರ್ಭದಲ್ಲಿ ಸಹಾಯಕ ಚುನಾವಣಾ ಅಧಿಕಾರಿಗಳಾದ ಎಮ್ ಎಸ್ ರಾಮೇನಹಳ್ಳಿ ಎಮ್ ಬಿ ಸಜ್ಜನರ, ಶ್ರೀಮತಿ ಪಿ ಎಚ್ ಮಾನೆ, ಎ ಎ ಸೂಗೂರು, ಎಮ್ ಎಸ್ ಹಾಳಕೇರಿ ಯವರು ಉಪಸ್ಥಿತರಿದ್ದರು