ಗದಗ : ಮತದಾನ ಜಾಗೃತಿ: ಸಂಗೀತ ಕಾರ್ಯಕ್ರಮ

ಗದಗ 12:  ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಪ್ರಯುಕ್ತ  ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ  ಗದಗ ಜಿಲ್ಲಾ ಸ್ವೀಪ್ ಸಮಿತಿ ವಿವಿಧ ರೀತಿಯ ಮತದಾರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದರ ಅಂಗವಾಗಿ  ನರೇಗಲ್ ನಗರದಲ್ಲಿ  ದಿ. 12ರಂದು ಮತದಾನ ಜಾಗೃತಿ ಮೂಡಿಸುವ  ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತ್ತು.

     ಮತದಾರರ ಪಟ್ಟಿಯಲ್ಲಿರುವ ಎಲ್ಲ ಅರ್ಹ ಮತದಾರರು ಅಮಿಷಕ್ಕೋಳಗಾಗದೇ ತಪ್ಪದೇ ಮತಚಲಾಯಿಸಲು ಪ್ರೇರೆಪಿಸುವ ಧ್ಯೇಯದೊಂದಿಗೆ ಈ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  ಬಿ,ಎಸ್, ಕುಲಕರ್ಣಿ  ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.