ಗದಗ 22: ಗದಗ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಮತದಾನ ಮಂಗಳವಾರ ದಿ.23 ರಂದು ನಡೆಯಲಿದ್ದು ಆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಾಗಿ ಮತಯಂತ್ರ ಇತರ ಸಲಕರಣೆ ತೆಗೆದುಕೊಳ್ಳುತ್ತಿರುವ ಕುರಿತು ಮಸ್ಟರಿಂಗ್ ಸ್ಥಳಕ್ಕೆ ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭೇಟಿ ನೀಡಿ ಪರಿಶೀಲಿಸಿದರು.
ಗದುಗಿನ ಗುರುಬಸವ ಪ್ರೌಢಶಾಲಾ ಆವರಣದಲ್ಲಿ ಹಾವೇರಿ ಲೋಕಸಭೆಯ ಸಾಮಾನ್ಯ ವೀಕ್ಷಕರಾದ ಡಾ. ಅಖ್ತರ್ ರಿಯಾಜ್, ವೆಚ್ಚ ವೀಕ್ಷಕ ಹಸನ್ ಅಹ್ಮದ್ ಅವರುಗಳು ಚುನಾವಣಾ ಸಿಬ್ಬಂದಿಯು ಮತದಾನದ ಸಿದ್ಧತೆಗಳನ್ನು ಮಾಡಿಕೊಂಡು ನಿಗದಿತ ಮತಗಟ್ಟೆಗಳ ರೂಟ್ ಬಸ್ ಕಡೆಗೆ ತೆರಳುತ್ತಿರುವುದನ್ನು ವೀಕ್ಷಿಸಿದರು.
ಗದಗ ವಿಧಾನಸಭಾ ವ್ಯಾಪ್ತಿಯ ಸೆಕ್ಟರ್ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ , ಹಾವೇರಿ ಲೋಕಸಭೆ ಚುನಾವಣೆಯ ಸಾಮಾನ್ಯ ಮತ್ತು ವೆಚ್ಚ ವೀಕ್ಷಕರು, ಸೆಕ್ಟರ್ ಅಧಿಕಾರಿಗಳಿಂದ ಮಾಹಿತಿ ಪಡೆದರಲ್ಲದೇ ಕಾರ್ಯ ನಿರ್ವಹಣೆ ಕುರಿತು ಅಗತ್ಯದ ಸಲಹೆ ಸೂಚನೆ ನೀಡಿದರು.
ಹಾವೇರಿ ಲೋಕಸಭಾ ವ್ಯಾಪ್ತಿಯ 66 ಗದಗ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ, ಗದಗನ ತಹಶೀಲ್ದಾರ ಶ್ರೀನಿವಾಸ ಮೂತರ್ಿ ಕುಲಕಣರ್ಿ, ಸೆಕ್ಟರ್ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.