ಗದಗ 25: ಗದಗ ಜಿಲ್ಲೆಯ ಲೋಕಸಭಾ ಚುನಾವಣೆ ಮತದಾನ ಕಾರ್ಯಕ್ರಮವನ್ನು ಜಿಲ್ಲಾಡಳಿತ ಯಶಸ್ವಿಯಾಗಿ ಮುಕ್ತಾಯಗೊಳಿಸಿದಂತೆ ಬರ ಪರಿಸ್ಥಿತಿಯನ್ನು ಕೂಡ ಸಂಬಂಧಿತ ಎಲ್ಲ ಇಲಾಖೆಗಳು ಪರಸ್ಪರ ಸಹಕಾರ, ಸಮನ್ವಯತೆಯಿಂದ ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲು ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಮ್ಲನ್ ಆದಿತ್ಯ ಬಿಸ್ವಾಸ್ ಸೂಚನೆ ನೀಡಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಬರ ನಿರ್ವಹಣೆ ಕುರಿತು ಜಿಲ್ಲಾಡಳಿತ ವಿವಿಧ ಕ್ರಮಗಳನ್ನು ಪರಿಶೀಲಿಸಿ ಅವರು ಮಾತನಾಡಿದರು. ಮುಖ್ಯವಾಗಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಕೃಷಿ ಕಾಮರ್ಿಕರಿಗೆ ಉದ್ಯೋಗ ನೀಡುವಿಕೆಗೆ ಕುರಿತಂತೆ ಸತತ ನಿಗಾ ವಹಿಸಲು ಬಿಸ್ವಾಸ್ ಸೂಚಿಸಿದರು.
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ವಾಡಿಕೆ ಮಳೆ 368.93 ಮಿ.ಮಿ.ಗೆ 209.6 ಮಿ.ಮಿ.ನಷ್ಟು ಮಾತ್ರ ಮಳೆಯಾಗಿದ್ದು ಶೇ.43%ರಷ್ಟು ಮಳೆ ಕೊರತೆಯಾಗಿದೆ ಎಂದರು. ಗ್ರಾಮೀಣ ಭಾಗದಲ್ಲಿ ಡಿಬಿಓಟಿ ಆಧಾರದ ಯೋಜನೆಯಡಿ ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿದ್ದು ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 1629 ಕೊಳವೆಬಾವಿಗಳು ಕಾಯರ್ಾಚರಣೆಯಲ್ಲಿವೆ. ಜಿಲ್ಲೆಯಲ್ಲಿ ಕುಡಿಯುವ ನೀರು ಸರಬರಾಜಿಗಾಗಿ ಒಟ್ಟು 101 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು ಇವುಗಳಲ್ಲಿ ರೂ. 114.96 ಲಕ್ಷಗಳ 91 ಕಾಮಗಾರಿಗಳು ಪ್ರಗತಿಯಲ್ಲಿವೆ. ಜಿಲ್ಲೆಯ ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ನರೇಗಲ್ 6, ಗಜೇಂದ್ರಗಡದಲ್ಲಿ 8 ಹಾಗೂ ರೋಣದಲ್ಲಿ 4 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ಸ್ಥಳೀಯ ಸಂಸ್ಥೆಗಳ ಸಕರ್ಾರಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಬರ ನಿರ್ವಹಣೆ ಕುರಿತಂತೆ ಒಟ್ಟು 16.16 ಕೋಟಿ ರೂ. ಜಿಲ್ಲಾಡಳಿತದ ಬಳಿ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಹಾತ್ಮಾ ಗಾಂಧೀಜಿ ಉದ್ಯೊಗ ಖಾತ್ರಿ ಯೋಜನೆಯಡಿ 2018-19 ರಲ್ಲಿ 96.57 ಕೋಟಿ ರೂ. ವೆಚ್ಚದಲ್ಲಿ 26.07 ಲಕ್ಷ ಮಾನವ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಪ್ರಸಕ್ತ 2019-20 ಸಾಲಿನಲ್ಲಿ 140.77 ಕೋಟಿ ರೂ. ಅನುದಾನದಲ್ಲಿ 32.01 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಮಂಜುನಾಥ ಚವ್ಹಾಣ ತಿಳಿಸಿದರು.
ಲೋಕಸಭಾ ಚುನಾವಣೆಗಾಗಿ ಊರಿಗೆ ಆಗಮಿಸಿರುವ ಜಿಲ್ಲೆಯ ಕೃಷಿ ಕಾಮರ್ಿಕರಿಗೆ ಉದ್ಯೋಗ ನೀಡುವ ಕಾರ್ಯಕ್ರಮವನ್ನು ಆಯಾ ಪಂಚಾಯತ್ ಅಧಿಕಾರಿಗಳು ಕೈಕೊಳ್ಳುವಂತೆ ಕ್ರಮ ವಹಿಸಲು ಆಮ್ಲನ್ ಆದಿತ್ಯ ಬಿಸ್ವಾಸ್ ಸೂಚಿಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಗುರಿ ಸಾಧನೆಗಿಂತ ಹೆಚ್ಚಾಗಿ ಬರ ಪರಿಸ್ಥಿತಿಯಲ್ಲಿ ಗ್ರಾಮೀಣ ಕುಟುಂಬಸ್ಥರ ಸಂಕಷ್ಟ ನಿವಾರಣೆ ಆಗುವಂತೆ ಸಾಮಾಜಿಕ ಪರಿಸ್ಥಿತಿ ನಿರ್ವಹಣೆ ಅಂಶ ಪ್ರಮುಖವಾಗಬೇಕು. ಅಧಿಕಾರಿಗಳು ವಿಶೇಷವಾಗಿ ಗ್ರಾಮ ಪಂಚಾಯತ್ಗಳು ಈ ಕುರಿತು ಗ್ರಾಮದ ಕೃಷಿ ಕಾರ್ಮಿಕರಿಗೆ ಹಾಗೂ ರೈತರಿಗೆ ಆಸ್ತಿ ಆಗುವ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಲು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳು ಸಲಹೆ ಮಾಡಿದರು.
ಜಿಲ್ಲೆಯ 37,571 ರೈತರಿಗೆ 10.15 ಕೋಟಿ ರೂ. 2018ರ ಮುಂಗಾರು ಬೆಳೆಹಾನಿ ಕುರಿತ ಇನ್ ಪುಟ್ ಸಬ್ಸಿಡಿ ವಿತರಣೆ ಆಗಿದೆ. ಒಟ್ಟು 147.14 ಕೋಟಿ ಇನ್ ಪುಟ್ ಸಬ್ಸಿಟಿಗೆ ಕ್ಲೇಮು ಸಲ್ಲಿಸಲಾಗಿದೆ. 2018 ರ ಹಿಂಗಾರು ಕೃಷಿ ಬೆಳೆ ಹಾನಿಗಾಗಿ 132.23 ಕೋಟಿ ರೂ. ಇನ್ಪುಟ್ ಸಬ್ಸಿಡಿ ಬೇಡಿಕೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಂಟಿ ಕೃಷಿ ನಿದರ್ೇಶಕರು ಹಾಗೂ ತೋಟಗಾರಿಕೆ ಉಪನಿದರ್ೇಶಕರು ತಿಳಿಸಿದರು.
ರೈತರ ಸಾಲ ಮನ್ನಾ ಯೋಜನೆಯಡಿ ಜಿಲ್ಲೆಗೆ 71 ಕೋಟಿ ರೂ.ಗಳ ಅಗತ್ಯ ಗುರುತಿಸಲಾಗಿದ್ದು ಈವರೆಗೆ 6,718 ರೈತರಿಗಾಗಿ 27 ಕೋಟಿ ರೂ.ಗಳನ್ನು ಬ್ಯಾಂಕ್ಗಳಿಗೆ ರಾಜ್ಯ ಸಕರ್ಾರ ಬಿಡುಗಡೆ ಮಾಡಿದೆ ಎಂದು ಸಹಕಾರಿ ಇಲಾಖೆ ಉಪನಿಬಂಧಕರು ಸಭೆಯಲ್ಲಿ ಮಾಹಿತಿ ನೀಡಿದರು.
ಒಟ್ಟಾರೆಯಾಗಿ ಗದಗ ಜಿಲ್ಲೆಯ ನಗರ ಅಥವಾ ಗ್ರಾಮೀಣ ಜನತೆಗೆ ಬರ ಪರಿಸ್ಥಿತಿ ನಿರ್ವಹಿಸುವಲ್ಲಿ ಜಿಲ್ಲಾಡಳಿತ ಸದಾ ನಿಗಾವಹಿಸಿ ಕುಡಿಯುವ ನೀರು, ಉದ್ಯೋಗ ಹಾಗೂ ಜಾನುವಾರುಗಳಿಗೆ ಮೇವು , ನೀರು ದೊರಕಿಸಲು ಅಗತ್ಯ ಕ್ರಮ ಕೈಕೊಳ್ಳುವಂತೆ ರಾಜ್ಯದ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಆಮ್ಲನ್ ಆದಿತ್ಯ ಬಿಸ್ವಾಸ್ ನಿರ್ದೇಶನ ನೀಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ , ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.