ಗದಗ 20: ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿ ಗ್ರಾಹಕರಾಗಿದ್ದು, ಯಾವುದೇ ವಸ್ತುವನ್ನು ಅಥವಾ ಸೇವೆಯನ್ನು ಖರೀದಿ ಮಾಡುವಾಗ ಅದರ ಗುಣಮಟ್ಟ , ಪ್ರಮಾಣ ಹಾಗೂ ಖಾತರಿ ಕುರಿತು ಸಮರ್ಪಕ ತಿಳುವಳಿಕೆ ಹೊಂದುವುದು ಮಹತ್ವದ್ದಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
ಕನರ್ಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿಂದು ಗದಗ ಜಿಲ್ಲಾಡಳಿತ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ವಿಶ್ವ ವಿದ್ಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಮಾಪನ ಶಾಸ್ತ್ರ ಇಲಾಖೆ ಮತ್ತು ಜಿಲ್ಲಾ ಗ್ರಾಹಕರ ಮಾಹಿತಿ ಕೆಂದ್ರ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವಾಸಾರ್ಹ ಸ್ಮಾರ್ಟ ಉತ್ಪನ್ನಗಳು ಧ್ಯೇಯ ಹೊಂದಿದ 2019 ರ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯನ್ನು "ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರು ಹೆಚ್ಚಿನ ಜಾಗೃತಿಯಿಂದಿರಬೇಕು. ಇಲ್ಲವಾದಲ್ಲಿ ಅನವಶ್ಯಕ ತೊಂದರೆಗೆ ಒಳಗಾಗಬೇಕಾಗುತ್ತದೆ. ಪ್ರತಿಯೊಬ್ಬರು ಒಂದಿಲ್ಲೊಂದು ರೀತಿ ಗ್ರಾಹಕರಾಗಿದ್ದು, ತಾವು ಖರೀದಿಸಿದ ವಸ್ತುವಿನ ಬಿಲ್ಲನ್ನು ಕೇಳಿ ಪಡೆಯುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಬೇಕು ತಾವು ಖರೀದಿಸದ ವಸ್ತುವಿನ ಗುಣಮಟ್ಟದಲ್ಲಿ ಅಥವಾ ಸೇವಾ ಕ್ಷೇತ್ರದಲ್ಲಿ ಏನಾದರೂ ನ್ಯೂನತೆ ಕಂಡುಬಂದರೆ ಗ್ರಾಹಕರ ವೇದಿಕೆಯಿಂದ ಪರಿಹಾರ ಕಂಡು ಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ನುಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ರೇಣುಕಾ ಕುಲಕಣರ್ಿ ಅವರು ಮಾತನಾಡಿ ಮಾರುಕಟ್ಟೆ ಅನ್ವೇಷಣೆ ಪೂರ್ವದಲ್ಲಿ ವಸ್ತುಗಳ ಬದಲಿಗೆ ವಸ್ತು ಬದಲಾವಣೆ ವಿಧಾನವು ಚಾಲ್ತಿಯಲ್ಲಿತ್ತು. ನಂತರ ವಸ್ತುವಿನ ಮೌಲ್ಯವನ್ನು ದುಡ್ಡಿನ ರೂಪದಲ್ಲಿ ಕೊಟ್ಟು ಖರೀದಿ ಮಾಡುವ ಪದ್ಧತಿ ಬಂದಿತು. ಈಗ ಆನ್ಲೈನ್ ಮುಖಾಂತರ ವಸ್ತುಗಳನ್ನು ಕೊಳ್ಳುವ ಪದ್ಧತಿಯೂ ಜಾರಿಗೆ ಬಂದಿದೆ. ಗ್ರಾಹಕರು ತಮ್ಮ ಹಕ್ಕುಗಳ ಕುರಿತು ಎಚ್ಚರವಿರಬೇಕು. ಆನ್ಲೈನ್ನಲ್ಲಿ ಖರೀದಿ ನಂತರ ಏನಾದರೂ ಸಮಸ್ಯೆ ಬಂದರೆ ಗ್ರಾಹಕರು ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬಹುಗಿದ್ದು ಗ್ರಾಹಕರ ವೇದಿಕೆಗಳು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ. ಪಲ್ಲೇದ ನಾವು ಅನೇಕ ದಿನಾಚರಣೆಗಳನ್ನು ಅವುಗಳ ಮಹತ್ವ ತಿಳಿದು ಅದರಂತೆ ನಡೆಯಲು ಆಚರಿಸುತ್ತಿದ್ದೇವೆ. ವ್ಯಾಪಾರಸ್ಥರಿಂದ ಗ್ರಾಹಕರಿಗೆ ಮೋಸವಾದಾಗ ಗ್ರಾಹಕರ ರಕ್ಷಣಾ ವೇದಿಕೆಯು ಗ್ರಾಹಕರಿಗೆ ರಕ್ಷಣೆಯನ್ನು ಒದಗಿಸಿಕೊಡುತ್ತದೆ. ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದು ಅವರು ಜಿಲ್ಲಾ ಗ್ರಾಹಕರ ವೇದಿಕೆಯು ಮಾಡಿದ ಮಹತ್ವದ ಕಾರ್ಯಗಳನ್ನು ಹಾಗೂ ಬೆಳೆದು ಬಂದ ಬಗೆಯನ್ನು ವಿವರಿಸಿದರು.
ಕ ರಾ ಗ್ರಾ ಮತ್ತು ಪಂ ರಾ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ. ತಿಮ್ಮೇಗೌಡ ಅವರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಕಾನೂನು ಮಾಪನಶಾಸ್ತ್ರ ಇಲಾಖೆಯ ನಿರೀಕ್ಷಕರಾದ ಆರ್.ಕೆ. ಕೊಪ್ಪರ ಹಾಗೂ ಎಸ್.ಎಸ್. ಕುಷ್ಟಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಕ್ಕಮಹಾದೇವಿ ವಿಶ್ವ ವಿದ್ಯಾಲಯದ ವಿದ್ಯಾಥರ್ಿ ವಿದ್ಯಾಥರ್ಿನಿಯರು, ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಗದಗದ ಆಹಾಋ ಸುರಕ್ಷತಾಧಿಕಾರಿಗಳಾದ ಡಾ. ಆರ್ .ಎಸ್ ಗಡಾದ, ಡಿ.ಎಸ್. ಅಂಗಡಿ, ಉಮೇಶ ಕರಮುಡಿ ಅವುರಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆ ಕುರಿತು ಪ್ರಾತ್ಯಕ್ಷಿಕೆ ಏರ್ಪಡಿಸಿದ್ದರು. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿದರ್ೇಶಕ ಸದಾಶಿವ ಎಸ್ ಮಜರ್ಿ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಸಿದ್ದೇಶ ಎಸ್. ಕಾರ್ಯಕ್ರಮ ನಿರೂಪಿಸಿದರು.