ಗದಗ: ಜಿಲ್ಲೆಯ ಕುಸ್ತಿಪಟುಗಳ ಕ್ರೀಡಾ ಸಾಧನೆ

ಗದಗ 05: ಗದಗ ಕ್ರೀಡಾಶಾಲೆಯ ಕ್ರೀಡಾಪಟುಗಳಾದ ಕು.ಶ್ವೇತಾ ಜಾಧವ, ರಾಷ್ಟ್ರ ಮಟ್ಟದಲ್ಲಿ ತ್ಥತೀಯ ಸ್ಥಾನ, ಕು.ಶಾಹೀದಾ ಬೇಗಂ ಬಳಿಗಾರ ಇವರು ಸೌಥ್ಜೋನ್ನಲ್ಲಿ ಪ್ರಥಮ ಸ್ಥಾನ. ಕು.ಬಸೀರಾ ವಕಾರದ ಸೌಥ್ಜೋನ್ನಲ್ಲಿ ಪ್ರಥಮ ಸ್ಥಾನ. ಕು. ಪ್ರೇಮಾ ಹುಚ್ಚಣ್ಣವರ, ಸೌಥ್ಜೋನ್ನಲ್ಲಿ ಪ್ರಥಮ ಸ್ಥಾನ. ಕು.ಶ್ವೇತಾ ಬೆಳಗಟ್ಟಿ ರಾಷ್ಟ್ರ ಮಟ್ಟದಲ್ಲಿ ತೃತಿಯ ಸ್ಥಾನ ಗಳಿಸಿರುತ್ತಾರೆ. ಕು. ಸೋನಿಯಾ ಜಾಧವ ರಾಷ್ಟ್ರ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಕು.ಈರಣ್ಣ ಶಿವಪೂಜಿ, ಕು.ಆದಗೊಂಡ ಬೀಳಗಿ, ಕು.ಮಲತೇಶ ಕುರಿ, ಕಿರಣ ನಾಯ್ಕರ, ಕು.ಸಂಗೀತಾ, ರಾಧಿಕಾ, ವಿದ್ಯಾಶ್ರೀ, ತ್ರಿವೇಣಿ. ಕು. ಐಶ್ವರ್ಯ, ಭುವನೇಶ್ವರಿ ರಾಜ್ಯ ಮಟ್ಟದ ಕುಸ್ತಿ ಪಂಧ್ಯಾವಳಿಯಲ್ಲಿ ಬಾಗವಹಿಸಿ ಪದಕ ಗಳಿಸಿರುತ್ತಾರೆ. ಈ ಕ್ರೀಡಾಪಟುಗಳನ್ನು ಗದಗ  ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ,  ಗದಗ ಜಿ.ಪಂ. ಅಧ್ಯಕ್ಷ ಸಿದ್ಧಲಿಂಗೆಶ್ವರ ಪಾಟೀಲ,   ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ  ಸಹಾಯಕ ನಿರ್ದೇಶಕ ಬಿ.ಬಿ. ವಿಶ್ವನಾಥ,  ಕುಸ್ತಿ ತರಬೇತುದಾರರಾದ    ಶರಣಗೌಡ ಬೇಲೇರಿ ಇವರು  ಅಭಿನಂದಿಸಿರುತ್ತಾರೆ.